ದೇಶ ಭಕ್ತಿಯಷ್ಟೇ ಜ್ಞಾನವೂ ಮುಖ್ಯ
Team Udayavani, Sep 23, 2019, 3:00 AM IST
ಬೆಂಗಳೂರು: ದೇಶಭಕ್ತಿ ಇದ್ದರೆ ಸಾಲದು, ದೇಶದ ಬಗ್ಗೆ ಜ್ಞಾನವೂ ಇರಬೇಕು ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಗಿರಿನಗರದ ರಾಮಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ “ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ವಿಶ್ವವಿದ್ಯಾ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಜ್ಞಾನದಿಂದ ಕೂಡಿದ ದೇಶಭಕ್ತಿಯಿಂದ ಫಲ ಸಿಗುವುದಿಲ್ಲ.
ದೇಶಭಕ್ತಿ ಮತ್ತು ಜ್ಞಾನ, ತಿಳಿವಳಿಕೆಯ ಸಮಾಗಮವಾಗಬೇಕು. ಉತ್ತರ ಕನ್ನಡದ ಗೋಕರ್ಣದಲ್ಲಿರುವ ಆಶೋಕವನದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸರ್ಕಾರದ ಮುಂದೆ ಭಿಕ್ಷಾ ಪಾತ್ರೆ ಹಿಡಿದುಕೊಳ್ಳುವ ಬದಲು, ಸಮಾಜದಿಂದಲೇ ನೆರವು ಪಡೆದುಕೊಳ್ಳಲಾಗುತ್ತಿದ್ದು, ಇದಕ್ಕೆ ಸಮಾಜದ ಹಲವು ಗಣ್ಯರು ತಮ್ಮ ಧನ, ಮನ ತ್ಯಾಗ ಮಾಡಿದ್ದಾರೆಂದು ಸ್ವಾಮೀಜಿ ಹೇಳಿದರು.
ವಿಷ್ಣು ಗುಪ್ತ ವಿಶ್ವವಿದ್ಯಾಪೀಠದಲ್ಲಿ ವೇದಗಳು, ಇತಿಹಾಸ ಪುರಾಣಗಳು, ದರ್ಶನಗಳು, ವೇದ ಹಾಗೂ ಉಪವೇದ, ವೇದಾಂಗಗಳು, ಪೂರ್ವಪರ ಪ್ರಯೋಗ, ವೇದಭಾಷ್ಯಾ, ಶೌತ್ರ, ಧರ್ಮಶಾಸ್ತ್ರ, ಆಗಮ ಹಾಗೂ ಬ್ರಹ್ಮರ್ಷಿ ದೈವಾವತಾರ ಕೃತಿಗಳು, ಗೋರಕ್ಷೆ, ಅಷ್ಟಾಂಗ ಯೋಗ, ಕೃಷಿ, ವಾಣಿಜ್ಯ ಮತ್ತು ಧರ್ಮಶಾಸ್ತ್ರ ಸೇರಿ ಹಲವು ವಿಷಯಗಳ ಬಗ್ಗೆ ತಿಳಿಸಲಾಗುವುದು. ಪೀಠದಲ್ಲಿ ಜ್ಞಾನಕ್ಕೆ ಮತ್ತು ನಿಷ್ಠೆಗೆ ಆದ್ಯತೆ ನೀಡಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್ ಸಿ. ಡಿ’ಸೋಜಾ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.