ಇಂದು ಕೋಟಿ ಡಿಂಡಿಮ
Team Udayavani, Oct 28, 2022, 7:05 AM IST
ಬೆಂಗಳೂರು: ನೆಲ, ಜಲ, ಆಕಾಶದಲ್ಲಿ ಶುಕ್ರವಾರ ಏಕಕಾಲದಲ್ಲಿ ಕೋಟಿ ಕಂಠ ಗಾಯನ ಮುಗಿಲು ಮುಟ್ಟ ಲಿದ್ದು, 10 ಸಾವಿರಕ್ಕೂ ಹೆಚ್ಚು ತಾಣಗಳಲ್ಲಿ ಸರಿಯಾಗಿ 11 ಗಂಟೆಗೆ ಕನ್ನಡದ ಗೀತೆಗಳು ಮಾರ್ದನಿಸಲಿವೆ.
ರಾಜ್ಯ ಸರಕಾರದ ಕೋಟಿ ಕಂಠ ಗಾಯನ ಕಾರ್ಯ ಕ್ರಮದ ನೋಂದಣಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, 1.25 ಕೋಟಿ ಮಂದಿ ಭಾಗವಹಿಸುವರು. ಈ ವಿಶಿಷ್ಟ ಕಾರ್ಯಕ್ರಮ ಗಿನ್ನೆಸ್ ದಾಖಲೆ ಸೇರುವ ಸಾಧ್ಯತೆ ಇದೆ.
“ಉದಯವಾಣಿ’ ಕಚೇರಿ ಯಲ್ಲಿ ಸಂವಾದದಲ್ಲಿ ಗುರುವಾರ ಪಾಲ್ಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಕೋಟಿ ಕಂಠ ಗಾಯನ ಕಾರ್ಯಕ್ರಮ ರಾಜ್ಯದ ಉತ್ಸವ ರೀತಿಯಲ್ಲಿ ನಡೆಯಲಿದೆ. 46 ದೇಶ ಹಾಗೂ 26 ರಾಜ್ಯಗಳಲ್ಲಿರುವ ಕನ್ನಡಿಗರು ಇದರಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಮುದ್ರದಲ್ಲಿ ಗಾಯನದ ವ್ಯವಸ್ಥೆಯಾಗಿದ್ದರೆ, ಎರಡು ವಿಮಾನ ಗಳಲ್ಲೂ ಕನ್ನಡ ದನಿ ಝೇಂಕರಿಸಲಿದೆ.
50 ಸಾವಿರ ಮಂದಿ ಭಾಗಿ:
ಒಟ್ಟು 27 ನಿಮಿಷಗಳ ಗಾಯನದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲ ಸಚಿವರು ಹಾಗೂ 2000 ಮಂದಿ ವೃತ್ತಿಪರ ಗಾಯಕರು ಸೇರಿ ಗರಿಷ್ಠ 50 ಸಾವಿರ ಜನ ಭಾಗವಹಿಸುವರು. ವಿಧಾನ ಸೌಧದ ಮೆಟ್ಟಿಲುಗಳ ಮೇಲಿನ ಕಾರ್ಯಕ್ರಮದಲ್ಲಿ 5 ಸಾವಿರ ಗಣ್ಯರು ಭಾಗವ ಹಿಸುವರು. ಪ್ರತಿ ಗ್ರಾ.ಪಂ.ಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳುವರು ಎಂದರು.
ಎಲ್ಲೆಲ್ಲಿ ಗಾಯನ? :
ಎಲ್ಲ ಶಾಲಾ ಕಾಲೇಜುಗಳು, ಕಾರ್ಖಾನೆಗಳು, ಮಾಲ್‌ಗಳು, ಬಸ್-ರೈಲ್ವೇ ನಿಲ್ದಾಣಗಳು, ಅಪಾರ್ಟ್‌ಮೆಂಟ್‌ಗಳು, ವಿಧಾನ ಸೌಧದ ಮೆಟ್ಟಿಲ ಮೇಲೆ, ಬೆಂಗಳೂರು, ಧಾರವಾಡ ಹೈಕೋರ್ಟ್, ಮೈಸೂರಿನ ಅರಮನೆ, ಚಿತ್ರದುರ್ಗ ಕೋಟೆ, ಮಂಗಳೂರು, ಉಡುಪಿಯ ಕರಾವಳಿ ತೀರ, ಹಂಪಿ, ಜೋಗ ಜಲಪಾತ, ಐಹೊಳೆ, ಪಟ್ಟದಕಲ್ಲು, ಸಿದ್ಧಗಂಗಾ ಮಠ, ಹುಬ್ಬಳ್ಳಿ ಕಿಮ್ಸ್ ಆವರಣ ದಲ್ಲಿ, ಬೆಂಗಳೂರು ಮೆಟ್ರೋದಲ್ಲಿ ಗಾಯನವಿರಲಿದೆ. ಕರ್ನಾಟಕ ರಾಜ್ಯೋತ್ಸವ ಉತ್ಸವದಿಂದ ಆರಂಭವಾಗಲಿ ಎಂಬುದು ಸರಕಾರದ ಆಶಯ. ಜತೆಗೆ ನಾಡಿನ ಎಲ್ಲ ಜನರನ್ನೂ ಜೋಡಿಸುವ ಕಾರ್ಯಕ್ರಮ ಇದಾಗಲಿದೆ. ಕಳೆದ ವರ್ಷ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಪ್ರಾರಂಭವಾಗಿ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸವಾಗಿತ್ತು ಎಂದರು ಸಚಿವರು.
ಕನ್ನಡ ಭಾಷೆ ಅಳಿವು-ಉಳಿವು , ಕನ್ನಡ ಭಾಷೆ ಮೇಲಿನ ಪ್ರೀತಿಯೆಂದರೆ ಅದು ಕೇವಲ ಸರಕಾರದ ಜವಾಬ್ದಾರಿ ಅಷ್ಟೇ ಅಲ್ಲ. ಸಾರ್ವಜನಿಕರದ್ದೂ ಸಹ. ಮನೆಗಳಲ್ಲಿ ಕುಟುಂಬಗಳಲ್ಲಿ ಅಣ್ಣ , ತಂಗಿ, ತಂದೆ, ತಾಯಿ, ಮಕ್ಕಳು ಮಾತನಾಡುವಾಗ ಇಂಗ್ಲಿಷ್ ಆವರಿಸಿಕೊಳ್ಳುತ್ತಿದೆ. ಉದ್ಯೋಗದಲ್ಲಿ ಬೇರೆ ಭಾಷೆ ಮಾತನಾಡಿದರೂ, ಮನೆಯಲ್ಲಿ ಕನ್ನಡ ಮಾತನಾಡಿ ಎಂದು ಮನವಿ ಮಾಡಿದರು.
ಕೋಟಿ ಕಂಠದ ವಿಶೇಷ:
ಸಮಯ: ಶುಕ್ರವಾರ ಬೆಳಿಗ್ಗೆ 11
ಅವಧಿ: 27 ನಿಮಿಷ
ಭಾಗಿಯಾಗಲಿರುವವರು: 1.25 ಕೋಟಿ ಮಂದಿ
46 : ದೇಶಗಳು
02: ವಿಮಾನಗಳಲ್ಲೂ ಕನ್ನಡ ಗಾಯನ
ದಕ್ಷಿಣ ಕನ್ನಡ-ಉಡುಪಿಯ ಸಮುದ್ರದಲ್ಲಿ ಗಾನ
ಮೊಳಗಲಿರುವ ಆರು ಹಾಡುಗಳು :
- ಜಯ ಭಾರತ ಜನನಿಯ ತನುಜಾತೆ ಹಾಗೂ ಬಾರಿಸು ಕನ್ನಡ ಡಿಂಡಿಮವ- ರಾಷ್ಟ್ರಕವಿ ಕುವೆಂಪು
- ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು- ಹುಯಿಲಗೊಳ ನಾರಾಯಣರಾವ್
- ವಿಶ್ವ ವಿನೂತನ ವಿದ್ಯಾ ಚೇತನ- ಚನ್ನವೀರ ಕಣವಿ
- ಕುವೆಂಪು ರಚನೆಯ ಬಾರಿಸು ಕನ್ನಡ ಡಿಂಡಿಮವ..,
- ಹಚ್ಚೇವು ಕನ್ನಡದ ದೀಪ..-ಡಾ.ಡಿ.ಎಸ್.ಕರ್ಕಿ-
- ಕನ್ನಡ ನಾಡಲ್ಲಿ ಹುಟ್ಟಬೇಕು- ಹಂಸಲೇಖ
ಸಂಕಲ್ಪವಿಧಿ :
ಕನ್ನಡ ನಾಡಿನ ಪ್ರಜೆಯಾಗಿ ನಾನು ನನ್ನ ನಾಡು, ನಾಡಿಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ಕನ್ನಡ ಬಳಸುತ್ತೇನೆ ಎಂಬ ಪಣತೊಡುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ. ಕನ್ನಡ ನಾಡಿನಲ್ಲಿರುವ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ- ಹೀಗೆಂದು ಸಂಕಲ್ಪ ಬೋಧಿಸಲಾಗುತ್ತದೆ.
ಕನ್ನಡದ ಮನಸುಗಳನ್ನು ಜೋಡಿಸುವ ಕಾರ್ಯಕ್ರಮ ಇದಾಗಿದೆ. ಕನ್ನಡ ಭಾಷೆ, ಸಂಸ್ಕೃತಿಯ ಉಳಿವು, ಕನ್ನಡ ಮನಸುಗಳ ಜೋಡಿಸುವಿಕೆ ಕೋಟಿ ಕಂಠ ಗಾಯನದ ಮೂಲ ಉದ್ದೇಶ.– ಸುನೀಲ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.