ತಿರುಗಾಟ, ನರಳಾಟ, ಜನಸಾಮಾನ್ಯಗೆ ಸಾವು ಬದುಕಿನ ಆಟ ಇದೇ ಬಿಎಸ್ ವೈ ಒಂದು ವರ್ಷದ ಆಟ: ಡಿಕೆಶಿ
Team Udayavani, Jul 27, 2020, 4:32 PM IST
ಬೆಂಗಳೂರು: ಒಂದು ವರ್ಷ ಬರೀ ಸುಳ್ಳನ್ನು ಕಿವಿಗೆ ಇಂಪಾಗುವಂತೆ ಮಾತನಾಡಿದ್ದಾರೆ. ವಾಸ್ತವವಾಗಿ ಅವರು ಏನು ಹೇಳಿದ್ದರೊ ಅದನ್ನು ಮಾಡಿಲ್ಲ. ಪ್ರವಾಹಕ್ಕೆ ಸಿಲುಕಿರುವ ಜನರಿಗೆ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದರು. ಆದರೆ ಆ ಭಾಗದ ಜನರಿಗೆ ಇನ್ನೂ ಪರಿಹಾರ ದೊರೆತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ ವೈ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ವ್ಯಂಗ್ಯವಾಡಿದರು.
ಬಿಎಸ್ ವೈ ಸರಕಾರದ ಒಂದನೇ_ತಿಂಗಳು ಮಂತ್ರಿಮಂಡಲ ಇಲ್ಲದೆ ತಿರುಗಾಟ. ಎರಡನೇ_ತಿಂಗಳು ನೆರೆ ಪರಿಹಾರ ಕೊಡದೆ ನರಳಾಟ, ಮೂರನೇ ತಿಂಗಳು ಉಪಚುನಾವಣೆ ಎಂಬ ಬಯಲಾಟ, ನಾಲ್ಕನೇ ತಿಂಗಳು ಮಂತ್ರಿ ಮಂಡಲ ಎಂಬ ದೊಂಬರಾಟ, ಐದು ಆರರಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ, ಏಳುಎಂಟರ ತಿಂಗಳಲ್ಲಿ ಕೋವಿಡ್ ಲಾಕ್ ಡೌನ್ ಎಂಬ ಹೊರಳಾಟ, ಒಂಬತ್ತು_ಹತ್ತು ಕೋವಿಡ್ ಕೋವಿಡ್ ಎಂಬ ಕಿರುಚಾಟ, ಹನ್ನೊಂದು ಹನ್ನೆರಡನೇ ತಿಂಗಳು “ಜನ ಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ ಎಂದು ವ್ಯಂಗ್ಯವಾಡಿದರು.
ಕಳೆದ ಬಾರಿಯ ಪ್ರವಾಹದಲ್ಲಿ 35 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದರು. ಬಂದಿರೋದು ಕೇವಲ 1600 ಕೋಟಿ ಮಾತ್ರ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ 5 ಸಾವಿರ ಕೋಟಿ ಮಧ್ಯಂತರ ಪರಿಹಾರ ಕೇಳಿದ್ದರು. ಅದೂ ಪರಿಹಾರ ಬರಲಿಲ್ಲ. ಈಗ ಕೋವಿಡ್-19 ಸಂದರ್ಭದಲ್ಲಿ ಎಲ್ಲ ವರ್ಗದವರಿಗೆ ಪರಿಹಾರ ಕೊಡಿ ಎಂದು ಕೇಳಿದ್ದೇವು. ಸರ್ಕಾರ ಯಾರಿಗೆ ಎಷ್ಟು ಪರಿಹಾರ ಕೊಟ್ಟಿದೆ ಎಂದು ಪಟ್ಟಿ ನೀಡಲಿ. ಇದುವರೆಗೂ ಯಾರಿಗೆ ಎಷ್ಟು ತಲುಪಿದೆ ಎಂದು ಸರ್ಕಾರ ಹೇಳಬೇಕು. ರೈತರಿಗೆ ಸಾವಿರಾರು ಕೋಟಿ ಪರಿಹಾರ. ಬೆಂಬಲ ಬೆಲೆ ಕೊಟ್ಟಿದ್ದೇವೆ ಎಂದು ಹೇಳಿದ್ದೀರಿ ಯಾವ ರೈತರಿಗೆ ತಲುಪಿಸಿದ್ದೀರಾ ಮಾಹಿತಿ ಕೊಡಿ, ನೀವು ಮಾಡಿರುವ ಸಾಧನೆಯ ದಾಖಲೆ ಕೊಡಿ ಎಂದರು.
ಪ್ರಧಾನಿ ನಮ್ಮ ಸರ್ಕಾರದ ಬಗ್ಗೆ 10% ಸರ್ಕಾರ ಅಂತ ಹೇಳಿದ್ದರು ನಿಮ್ಮ ಮಂತ್ರಿಗಳು ಈಗ ಪ್ರತಿ ಇಲಾಖೆಯಲ್ಲಿ ಲೂಟಿ ಮಾಡುತ್ಗಿದ್ದಾರೆ. ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದ್ದರೆ ಅದನ್ನೂ ಬಯಲಿಗೆ ತನ್ನಿ. ಮಂತ್ರಿಗಳು ಎಷ್ಟು ಪರ್ಸೆಂಟೇಜ್ ಕೇಳ್ತಿದಾರೆ ಅನ್ನೋದನ್ನ ತನಿಖೆ ಮಾಡಿಸಿ ಎಂದರು.
ಬಿಐಇಸಿ ಕೋವಿಡ್ ಕೇಂದ್ರ ದಲ್ಲಿ 10100 ಬೆಡ್ ಅಂತ ಹೇಳಿದ್ದೀರಿ. ಅಧಿಕಾರಿಗಳು 6000 ಬೆಡ್ ಅಂತ ಹೇಳಿದ್ದಾರೆ. ಇದನ್ನೂ ನಾವು ಕೇಳಬಾರದಾ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಸಾಧನೆ ಎಂದರೆ ಹಿಂದಿನ ಸರ್ಕಾರದ ಯೋಜನೆಗಳನ್ನು ರದ್ದು ಮಾಡಿದ್ದೇ ಸಾಧನೆ. ಭ್ರಷ್ಟಾಚಾರದ ಆರೋಪ ಬಂದ ತಕ್ಷಣ ಐವರು ಸಚಿವರು ಮೊದಲು 323 ಕೋಟಿ ಎಂದು ಹೇಳಿದ್ದರು. ಆ ಮೇಲೆ 2000 ಕೋಟಿ ಖರ್ಚಾಗಿದೆ ಅಂತ ಒಪ್ಪಿಕೊಂಡಿದ್ದಾರೆ. ಮಾಸ್ಕ್ ಗಳಿಗೆ 250 ರೂ. ಸ್ಯಾನಿಟೈಸರ್ ಗಳಿಗೆ 500-600 ರೂ ಹಾಕಿದ್ದಾರೆ. ಇವರ ಹಗರಣ ಇಡೀ ದೇಶದಲ್ಲಿ ಕರ್ನಾಟಕ ಬೆತ್ತಲೆಯಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಖರಿದಿ ಹಗರಣದ ಕುರಿತು ಪ್ರಧಾನಿ ಮಧ್ಯ ಪ್ರವೇಶ ಮಾಡಿ ಇಲ್ಲಿನ ಹಗರಣದ ಬಗ್ಗೆ ತನಿಖೆ ನಡೆಸಬೇಕು. ಪ್ರಧಾನಿ ಹೇಳಿದಂತೆ ಚಪ್ಪಾಳೆ ತಟ್ಟಿದ್ದೇವೆ. ದೀಪ ಹಚ್ಚಿದ್ದೇವೆ. ಆದರೆ, ಸಮಸ್ಯೆ ಮಾತ್ರ ಕಡಿಮೆಯಾಗಲಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ಯಾವ ಪುರುಷಾರ್ಥಕ್ಕೆ ಈ ಸರ್ಕಾರ ಎಂದರು.
ನೀವು ಆಪರೇಷನ್ ಕಮಲ, ಚುನಾವಣೆ ಗೆದ್ದಿರೋದು, ಖರಿದಿಸಿದವರಿಗೆ ಹುದ್ದೆ ಕೊಟ್ಟಿದ್ದೇನೆ ಅಂತ ಹೇಳಿಕೊಳ್ಳಿ. ಸೂತಕದಲ್ಲಿ ಸರ್ಕಾರ ಸಂಭ್ರಮ ಮಾಡಿಕೊಳ್ಳುತ್ತಿದೆ. ಜನರಿಗೆ ಧೈರ್ಯ ತುಂಬುವ ಜಾಹಿರಾತು ನೀಡಿ, ಯಾರಿಗೆ ಎಷ್ಟು ಹಣ ತಲುಪಿಸಿದ್ದೀರಾ ಜಾಹಿರಾತು ಕೊಡಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿಯವರ ಆರೋಪಕ್ಕೆ ಉತ್ತರಿಸಿದ ಅವರು, ಅವರಿಗೆ ನಾನು ಇವತ್ತು ಉತ್ತರ ಕೊಡಲು ಹೋಗುವುದಿಲ್ಲ. ಇವತ್ತು ನಮ್ಮ ಗುರಿ ಸರ್ಕಾರದ ಮೇಲೆ. ಕುಮಾರಸ್ವಾಮಿಯವರದು ಒಂದು ಪಕ್ಷ. ಅದು ಅವರ ಪಕ್ಷದ ಸಿದ್ದಾಂತ. ನಾವು ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ. ಅವರ ಕಾಲದಲ್ಲಿ ಏನಾಗಿದೆ ಅಂತ ನನಗೆ ಗೊತ್ತಿದೆ. ನಾನು ಹಿಟ್ ಆಂಡ್ ರನ್ ಮಾಡುವುದಿಲ್ಲ. ನಾವು ಕೋವಿಡ್ ಸಲುವಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.