ಬಿಜೆಪಿ ಸೇರ್ಪಡೆಯಾದ ಕೆ.ಪಿ.ನಂಜುಂಡಿ; ರಘು ಆಚಾರ್ ವಿರುದ್ಧ ಕಿಡಿ
Team Udayavani, Jun 22, 2017, 2:48 PM IST
ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ್ದರಿಂದ ಅಸಮಧಾನಗೊಂಡು ಕಾಂಗ್ರೆಸ್ ಪಕ್ಷ ತೊರೆದಿದ್ದ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ, ಉದ್ಯಮಿ ಕೆ.ಪಿ.ನಂಜುಂಡಿ ಗುರುವಾರ ಧಿಡೀರ್ ಬಿಜೆಪಿ ಸೇರ್ಪಡೆಯಾಗಿರುವುದಾಗಿ ಘೋಷಿಸಿದ್ದಾರೆ.
ವಿಶ್ವಕರ್ಮ ಸಮಾಜದ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿತ ಬಳಿಕ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಭೇಟಿಯ ಬಳಿಕ ಮಾತನಾಡಿದ ನಂಜುಂಡಿ ‘ನಾನು ಈಗಿಂದಲೇ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ,ಯಾವುದೇ ಷರತ್ತುಗಳಿಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ . ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ. ಯಡಿಯೂರಪ್ಪ ಸತ್ಯ ಹರಿಶ್ಚಂದ್ರ ಇದ್ದಹಾಗೆ. ಕೊಟ್ಟ ಮಾತನ್ನು ಈಡೇರಿಸದೇ ಉಳಿಯುವುದಿಲ್ಲ’ ಎಂದರು.
ಗುಳ್ಳೆ ನರಿಗೂ ಹುಲಿಗೂ ಹೋಲಿಕೆ ಬೇಡ
ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ಕಿಡಿ ಕಾರಿದ ನಂಜುಂಡಿ ‘ನಮ್ಮ ಸಮಾಜದ ಸ್ವಾಮೀಜಿಗಳಿಗೆ ಬೆದರಿಕೆ ಹಾಕಿದ್ದಾರೆ. ಗುಳ್ಳೆ ನರಿಗೂ ಹುಲಿಗೂ ಹೋಲಿಕೆ ಬೇಡ. ಅವರು ಯಾರನ್ನು ಕರೆದುಕೊಂಡು ಬಂದು ಕಾಂಗ್ರೆಸ್ ಗೆಲ್ಲಿಸುತ್ತಾರೆ ನೋಡೋಣ’ ಎಂದರು.
ಬಿಎಸ್‌ವೈ ಪ್ರತಿಕ್ರಿಯೆ ನೀಡಿ ‘ನಂಜುಂಡಿ ಈ ಕ್ಷಣದಿಂದ ಬಿಜೆಪಿ ಸೇರ್ಪಡೆಯಾಗಿದ್ದು ಸೂಕ್ತ ಸ್ಥಾನಮಾನ ನೀಡುತ್ತೇವೆ. ಅವರ ಸೇರ್ಪಡೆಯಿಂದಾಗಿ ವಿಶ್ವಕರ್ಮ ಸಮಾಜ ನಮ್ಮೊಂದಿಗೆ ಇರಲಿದೆ’ ಎಂದರು.
ರಘು ಆಚಾರ್ ತಿರುಗೇಟು
ಮೈಸೂರಿನಲ್ಲಿ ನಂಜುಂಡಿ ಹೇಳಿಕೆಗೆ ತಿರುಗೇಟು ನೀಡಿದ ರಘು ಆಚಾರ್ ತೀವ್ರ ವಾಗ್ಧಾಳಿ ನಡೆಸಿದರು. ನಂಜುಂಡಿಗೆ ಪರಿಷತ್ ಸದಸ್ಯನಾಗಿ ಆಯ್ಕೆ ಯಾಗುವುದು ಸಾಧ್ಯವಾಗಲಿಲ್ಲ. ಹೀಗಾಗಿ ಜೈಲಿಗೆ ಹೋಗಿ ಬಂದವರೊಡನೆ ಸೇರಿಕೊಂಡು ಎನೇನೋ ಮಾತನಾಡುತ್ತಿದ್ದಾರೆ. ನಾನು ಚುನಾವಣೆಗೆ ಸ್ಫರ್ಧಿಸಿ ಗೆದ್ದು ಬಂದವ ಸಮಾಜ ನನ್ನೊಂದಿಗೆ ಇದೆ. ಯಾವುದೇ ಸ್ವಾಮೀಜಿಗಳಿಗೆ ಬೆದರಿಕೆಯನ್ನು ನಾನು ಹಾಕಿಲ್ಲ. ನಮ್ಮ ಸಮಾಜದ ಸ್ವಾಮೀಜಿಗಳು ಎಂದಿಗೂ ವ್ಯಕ್ತಿಯ ಪರ ನಿಲ್ಲುವುದಿಲ್ಲ ,ಸಮಾಜದ ಪರವಾಗಿ ನಿಲ್ಲುತ್ತಾರೆ ಎಂದರು.
ನಂಜುಂಡಿಗೆ ತಾಕತ್ತಿದ್ದರೆ 2018 ರ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಫರ್ಧಿಸಲಿ ಎಂದು ಸವಾಲು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
US Consulate: ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ದೂತಾವಾಸ ಕಚೇರಿ ಆರಂಭ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.