ಐಎಸ್‌ಡಿಗೆ ಕ್ರಾವ್ ಮಾಗಾ ಬಲ
Team Udayavani, Jan 26, 2021, 6:20 AM IST
ಬೆಂಗಳೂರು: ಶಸ್ತ್ರಧಾರಿ ಸಮಾಜ ಘಾತುಕ ಶಕ್ತಿಗಳನ್ನು ಶಸ್ತ್ರರಹಿತವಾಗಿಯೂ ಎದುರಿಸುವುದಕ್ಕೆ ರಾಜ್ಯದ ಪೊಲೀಸರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಇಸ್ರೇಲಿ “ಕ್ರಾವ್ ಮಾಗಾ’ ಸಮರಕಲೆಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಪೊಲೀಸ್‌ನ ಆಂತರಿಕ ಭದ್ರತ ದಳ (ಐಎಸ್‌ಡಿ)ದಲ್ಲಿ ಪರಿಚಯಿಸಲಾಗುತ್ತಿದೆ.
ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿ ಅನೇಕ ರಕ್ಷಣ ಸಂಬಂಧಿ ಕರಾರುಗಳಿಗೆ ಸಹಿ ಹಾಕಿದ ಬಳಿಕ ಅಲ್ಲಿನ ಅತ್ಯಾಧುನಿಕ ಸಮರ ಕಲೆ “ಕ್ರಾವ್ ಮಾಗಾ’ಗೆ ಪ್ರಾಮುಖ್ಯ ದೊರೆತಿದೆ. ಸೇನೆಯಲ್ಲಿ ಇದನ್ನು ಅಳ ವಡಿಸಲಾಗಿದೆ. ಈಗ ರಾಜ್ಯ ಪೊಲೀಸ್ ಪಡೆಯಲ್ಲೂ ಜಾರಿಗೊಳಿಸಲಾಗುತ್ತಿದೆ.
ಎಲ್ಲೆಲ್ಲಿ ಬಳಕೆ? :
“ಕ್ರಾವ್ ಮಾಗಾ’ ತರಬೇತಿ ಪಡೆದ ರಾಜ್ಯದ ಕಮಾಂಡೋಗಳನ್ನು ಭದ್ರತೆ, ಭಯೋತ್ಪಾದನೆ ನಿಗ್ರಹ ದಳ, ಕರಾವಳಿ ಕಾವಲು ಪಡೆ, ನಕ್ಸಲ್ ನಿಗ್ರಹ ದಳ ಮತ್ತಿತರ ಕಡೆ ನಿಯೋಜಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಮಾಂಡೊಗಳಿಗೆ ತರಬೇತಿ ನೀಡಿ ರಾಜ್ಯದ ಆಂತರಿಕ ಭದ್ರತೆ ಹೆಚ್ಚಿಸಿಕೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕ್ರಾವ್ ಮಾಗಾ ತರಬೇತಿಗೆ ಐಎಸ್‌ಡಿಯಲ್ಲಿ ದೈಹಿಕವಾಗಿ ಸಮರ್ಥವಾಗಿರುವ 30 ಮಹಿಳಾ ಸಿಬಂದಿ ಸೇರಿ ಸುಮಾರು 100 ಮಂದಿ ಈಗಾಗಲೇ ಆಯ್ಕೆಯಾಗಿದ್ದು, 20 ಮಂದಿಯ ಸೇನಾ ತಂಡ ತರಬೇತಿ ನೀಡಲಿದೆ.
ಏನಿದು ಕ್ರಾವ್ ಮಾಗಾ? :
“ಕ್ರಾವ್‌ಮಾಗಾ’ ಇಸ್ರೇಲಿ ರಕ್ಷಣ ಪಡೆಗಳಿಗಾಗಿ ಅಭಿವೃದ್ಧಿ ಪಡಿಸಿದ ಆತ್ಮರಕ್ಷಣೆಯ ಹೋರಾಟ ಕಲೆ. ಐಕಿಡೊ, ಬಾಕ್ಸಿಂಗ್, ಕುಸ್ತಿ, ಜೂಡೋ ಮತ್ತು ಕರಾಟೆ ತಂತ್ರಗಳನ್ನು ಒಳಗೊಂಡಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳು ಇದನ್ನು ಬಳಸಿ ಯಶಸ್ವಿಯಾಗಿವೆ. ಮುಖ್ಯವಾಗಿ ಯಾವುದೇ ಶಸ್ತ್ರಧಾರಿಯ ಮೇಲೂ ದಾಳಿ ನಡೆಸಬಹುದು.
ಐಎಸ್‌ಡಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಾವ್‌ಮಾಗಾ ಪರಿಚಯಿಸಲಾಗುತ್ತಿದೆ. ಇಲಾಖೆ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲಿಯೂ ಕ್ರಾವ್ ಮಾಗಾ ತರಬೇತಿ ಪಡೆದ ಅಧಿಕಾರಿ-ಸಿಬಂದಿ ನಿಯೋಜಿಸಲಾಗುತ್ತದೆ. -ಭಾಸ್ಕರ್ ರಾವ್, ಎಡಿಜಿಪಿ, ಐಎಸ್‌ಡಿ
ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.