ಕೆಆರ್‌ಎಸ್ ಮಟ್ಟ 115 ಅಡಿಗೆ ಏರಿಕೆ
Team Udayavani, Aug 11, 2019, 3:04 AM IST
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 115 ಅಡಿಗೆ ತಲುಪಿದೆ. ಅಣೆಕಟ್ಟೆಗೆ 1,52,499 ಕ್ಯೂಸೆಕ್ ನೀರು ಬಂದು ಸೇರುತ್ತಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಭಾನುವಾರ ಸಂಜೆ ವೇಳೆಗೆ ಜಲಾಶಯ ಭರ್ತಿಯ ಹಂತ ತಲುಪುವ ಸಾಧ್ಯತೆಗಳಿವೆ. ಅಣೆಕಟ್ಟೆಯಲ್ಲೀಗ 34.05 ಅಡಿ ನೀರು ಸಂಗ್ರಹವಾಗಿದೆ.
ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 59,627 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರದಲ್ಲಿರುವ ಬೇವಿನಹಳ್ಳಿ ಬಳಿಯ ಶ್ರೀ ಅಂಕನಾಥೇಶ್ವರ ದೇವಾಲಯ ನೀರಿನಲ್ಲಿ ಭಾಗಶ: ಮುಳುಗಿದೆ. ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ, ಯಡಮುರಿ ಫಾಲ್ಸ್ ಬಳಿಯ ಕಾವೇರಿ ನದಿ ದಡದ ತೆಂಗಿನ ತೋಟದಲ್ಲಿ ಕಾಯಿ ಕೀಳುತ್ತಿದ್ದ 10 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ.
ತೋಟದಲ್ಲಿ 10 ಮಂದಿ ಕಾರ್ಮಿಕರು ಕಾಯಿ ಕೀಳುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ನದಿಯಲ್ಲಿ ಪ್ರವಾಹ ಬಂದು ತೋಟದ ಸುತ್ತಲೂ ನೀರು ಆವರಿಸಿಕೊಂಡಿತು. ಕಾರ್ಮಿಕರು ತೋಟದಿಂದ ಹೊರಬರಲಾಗದೆ ಪರದಾಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ, ದೋಣಿ ವ್ಯವಸ್ಥೆ ಮಾಡಿ ಕಾರ್ಮಿಕರನ್ನು ಹೊರ ತಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.