ಅಯೋಧ್ಯೆ ಮಸೀದಿಗೆ ಕುಂದಾಪುರ ಪ್ರೇರಣೆ!

ಆಧುನಿಕ ಶೈಲಿಯಲ್ಲಿ ಮಸೀದಿ ನಿರ್ಮಾಣ; ಪರಿಸರಸ್ನೇಹಿ ವಿನ್ಯಾಸಕ್ಕೆ ಒಲವು

Team Udayavani, Sep 12, 2020, 10:10 AM IST

ಅಯೋಧ್ಯೆ ಮಸೀದಿಗೆ ಕುಂದಾಪುರ ಪ್ರೇರಣೆ!

ಕೋಡಿಯ ಕಡಲ ಕಿನಾರೆಯಲ್ಲಿರುವ ಹಸಿರು ಮಸೀದಿ.

ಹೊಸದಿಲ್ಲಿ/ ಕುಂದಾಪುರ: ಅಯೋಧ್ಯೆ ಯಿಂದ 25 ಕಿ.ಮೀ. ದೂರದ ಧನ್ನಿಪುರ್‌ದಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿ ಅತ್ಯಾಧುನಿಕವಾಗಿರಲಿದೆ, ಮಾತ್ರವಲ್ಲದೆ ಪರಿಸರ ಸ್ನೇಹಿಯೂ ಆಗಿರಲಿದೆ. ಇದಕ್ಕೆ ಪ್ರೇರಣೆಯಾಗಿರುವುದು ಕುಂದಾಪುರದ ಕೋಡಿಯ ಮಸೀದಿ ಮತ್ತು ಕತಾರ್‌ನ ಸ್ಪೇಸ್‌ಶಿಪ್‌ ಮಸೀದಿ!

ಉದ್ದೇಶಿತ ಮಸೀದಿಯ ವಿನ್ಯಾಸ ರೂಪಿಸುತ್ತಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ನ ಸ್ಥಾಪಕ ಸಿಬಂದಿ ಎಸ್‌.ಎಂ. ಅಖ್ತರ್‌ ಈ ಸುಳಿವು ನೀಡಿದ್ದಾರೆ. ನಾನು ಹಳೆಯದನ್ನು ಅನುಕರಿಸಲು ಹೋಗದೆ ಆಧುನಿಕ ಮಾದರಿಯನ್ನು ಪರಿಶೀಲಿಸುತ್ತಿದ್ದೇನೆ ಎಂದು ಅಖ್ತರ್‌ ಹೇಳಿದ್ದಾರೆ. ಈಗ ಸಾಮಾನ್ಯವಾಗಿ ಇರುವ ಮಸೀದಿಗಳ ರೀತಿಯಲ್ಲಿ ಇದು ನಿರ್ಮಾಣವಾಗುವುದಿಲ್ಲ ಎಂದಿರುವ ಅವರು, ಗುಮ್ಮಟ ಅಥವಾ ಕಮಾನು ಅಗತ್ಯ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಅವರಿಗೆ ಕುಂದಾಪುರ ಮತ್ತು ಕತಾರ್‌ನ ಮಸೀದಿಗಳು ಮಾದರಿಯಾಗಿ ಕಾಣಿಸಿವೆಯಂತೆ.

ಏನೇನಿದೆ?
ಇದು ಪರಿಪೂರ್ಣ ಪರಿಸರಸ್ನೇಹಿ ಮಸೀದಿ. ಪ್ರಕೃತಿಯ ಅಂಶಗಳನ್ನೇ ಪರಿಣಾಮಕಾರಿಯಾಗಿ ಬಳಸಿ ಸದಾ ತಂಪಾಗಿರುವಂತೆ ಮಾಡಲಾಗಿದೆ. ಮಸೀದಿಯೊಳಗೆ ತಾಪಮಾನ ಏರಿಕೆ ಕನಿಷ್ಠ ಮಟ್ಟದಲ್ಲಿರುವಂತೆ ಸುತ್ತಮುತ್ತಲೂ ಹಸಿರು ಮರಗಿಡಗಳು, ನೀರಿನ ಟ್ಯಾಂಕ್‌ಗಳಿವೆ. “ಎಲ್‌’ ಆಕಾರದ ಕಟ್ಟಡದ ಯೋಜನೆ ಮತ್ತು ಎತ್ತರಿಸಿದ ಮಸೀದಿಯ ಸಭಾಂಗಣಗಳು ನೈಸರ್ಗಿಕವಾಗಿ ತಂಪಾಗಿರುತ್ತವೆ. ಬಿಸಿಲ ಧಗೆ ತಾಗದಂತೆ ಬಿಳಿ ಚೀನ ಟೈಲ್ಸ್‌ಗಳನ್ನು ಹಾಕಿ ವಿಶೇಷ ಟಬೊì ದ್ವಾರಗಳನ್ನು ಅಳವಡಿಸಲಾಗಿದೆ. ಕಟ್ಟಡದ ನಿರ್ಮಾಣಕ್ಕೆ ಆವಾಹಕ ಗ್ಲಾಸ್‌ ರಿ ಇನ್‌ಫೋರ್ಸ್‌ಡ್‌ ಕಾಂಕ್ರೀಟ್‌ (ಜಿಆರ್‌ಸಿ) ಬಳಸಿದ್ದಾರೆ. ಇದರಿಂದಲೂ ಮಸೀದಿಯೊಳಗೆ ಬಿಸಿಲ ತಾಪ ಕಡಿಮೆಯಿರುತ್ತದೆ. 70 ಅಡಿ ಎತ್ತರದ ಬಹೂಪಯೋಗಿ ಮಿನಾರ್‌ನಿಂದ ಒಳ ಬರುವ ತಂಗಾಳಿಯೂ ಪ್ರಾರ್ಥನ ಸಭಾಂಗಣವನ್ನು ತಣ್ಣಗಾಗಿಸುತ್ತದೆ. ನೀರನ್ನು ಸಂರಕ್ಷಿಸಲು “ಪ್ರಸ್‌ಮ್ಯಾಟಿಕ್‌ ಟೋಟೋ’ ನೀರಿನ ಜೋಡಣೆಗಳನ್ನು ಅಳವಡಿಸಲಾಗಿದೆ.

ಈ ಮಿನಾರ್‌ನ ಮೇಲೆ ಗಾಳಿ ಯಂತ್ರ ಬಳಸಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಇಷ್ಟು ದೊಡ್ಡ ಮಸೀದಿಗೆ ಸಾಮಾನ್ಯವಾಗಿ 30ರಿಂದ 40 ಕಿ.ವ್ಯಾ. ವಿದ್ಯುತ್‌ ಬೇಕಾಗುತ್ತದೆ. ಆದರೆ ಇಲ್ಲಿ ಎಲ್‌ಇಡಿ ಬಲ್ಬ್ಗಳನ್ನು ಬಳಸಿ, ಹೊಸ ವಿನ್ಯಾಸ ಮಾಡಿ ಗಾಳಿ ಬೆಳಕು ಸಹಜವಾಗಿ ಬರುವಂತೆ ಮಾಡಿ ವಿದ್ಯುತ್‌ ಬಳಕೆ ಪ್ರಮಾಣವನ್ನು 7 ಕಿ.ವ್ಯಾ.ಗೆ ಇಳಿಸಲಾಗಿದೆ.

ಲಭಿಸಿದೆ ಪರಿಸರಸ್ನೇಹಿ ಪ್ರಮಾಣಪತ್ರ
ಮುಂದಿನ 25 ವರ್ಷಗಳಿಗೆ ಮಸೀದಿಗೆ “ಸಿಇಆರ್‌’ (ಸರ್ಟಿಫೈಡ್‌ ಎಮಿಶನ್‌ ರಿಡಕ್ಷನ್‌) ಕ್ರೆಡಿಟ್‌ ದೊರೆತಿದೆ. 15 ಸಾವಿರ ಚ. ಅಡಿಯ ಮಸೀದಿಯ ಒಳ -ಹೊರ ಆವರಣ ಆಕರ್ಷಕವಾಗಿದೆ. ಕಲಾಕಾರ ಮುಕ್ತಾರ್‌ ಅಹಮದ್‌ ಮೂಲಕ ಮಸೀದಿಯ ಒಳಾಂಗಣದಲ್ಲಿ ಕುರಾನಿನ ಸಾಲುಗಳನ್ನು ಆಕರ್ಷಕವಾಗಿ ಕೆತ್ತಲಾಗಿದೆ.

ಹಜ್‌ಗೆ ಹೋಗುವ ಹಣದಲ್ಲಿ ಮಸೀದಿ
ಮಸೀದಿ ನಿರ್ಮಾಣದ ಹಿಂದೆ ಒಂದು ಕಥೆಯಿದೆ. ಹಜ್‌ ಗಾಗಿ ಕೂಡಿಟ್ಟ ಹಣದಲ್ಲಿ ಮಸೀದಿ ನಿರ್ಮಾಣವಾಯಿತು. ಸೂಫಿ ಸಾಹೇಬ್‌ ಅವರು ಹಜ್‌ ಯಾತ್ರೆಗೆ ಹಣ ಸಂಗ್ರಹಿಸುತ್ತಿದ್ದರು. ಅನಾರೋಗ್ಯದಿಂದ ಹಜ್‌ ಯಾತ್ರೆಗೆ ತೆರಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಅದೇ ಹಣದಲ್ಲಿ ಕೋಡಿ ಕಡಲತಡಿಯಲ್ಲಿ ಮಸೀದಿ ನಿರ್ಮಿಸಿದರು. 40 ವರ್ಷಗಳ ಹಿಂದೆ ನವೀಕರಿಸಲಾಯಿತು. 4 ವರ್ಷಗಳ ಹಿಂದೆ ಅವರ ಮೊಮ್ಮಕ್ಕಳಿಂದ ಈಗಿನ ಪರಿಸರ ಸ್ನೇಹಿ ಮಸೀದಿ ನಿರ್ಮಾಣವಾಯಿತು. ಮಸೀದಿ ಆವರಣದಲ್ಲಿ ಹಿರಿಯರು ನೆಟ್ಟ ಮಾವು, ಹೊನ್ನೆ, ತೆಂಗಿನ ಮರಗಳನ್ನು ಹಾಗೆಯೇ ಉಳಿಸಿಕೊಂಡು ಲಾನ್‌ ನಿರ್ಮಿಸಲಾಗಿದೆ.

ಸುಸ್ಥಿರತೆಯ ತಂತ್ರಜ್ಞಾನ
ಸುಸ್ಥಿರ ಅಭಿವೃದ್ಧಿಯೆಡೆಗೆ ಭಾರತದ ನಡಿಗೆಯಲ್ಲಿ ಇದು ನಮ್ಮ ಪುಟ್ಟ ಕೊಡುಗೆ. 40 ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ನಾವು ನಮ್ಮ ಅನುಭವದ ಆಧಾರದಲ್ಲಿ ಈ ಹಸುರು ಮಸೀದಿ ನಿರ್ಮಾಣಕ್ಕೆ ಮುಂದಾದೆವು. ನಮ್ಮ ಮುತ್ತಜ್ಜ ನಿರ್ಮಿಸಿದ ಮಸೀದಿಯನ್ನು ನಾವು ಹೊಸದಾಗಿ ನಿರ್ಮಿಸುವಾಗ ಗಾಳಿ ಮತ್ತು ಸೋಲಾರ್‌ ಶಕ್ತಿ ಬಳಸಲು ನಿರ್ಧರಿಸಿದೆವು. ಸೂರ್ಯನ ಬಿಸಿಲು ನೇರ ಬೀಳದಂತೆ ವಿನ್ಯಾಸ ಮಾಡಿದೆವು. ಕರಾವಳಿಯ ವಾತಾವರಣಕ್ಕೆ ಅನುವಾಗುವಂತೆ ನಿರ್ಮಿಸಿ, ನಮಾಜಿಗೆ ತೊಂದರೆಯಾಗದಂತೆ ಉಸಿರಾಟಕ್ಕೆ ತಕ್ಕ ಗಾಳಿ ಸಹಜವಾಗಿ ದೊರೆಯುವಂತೆ ಗ್ಲಾಸ್‌ಗಳನ್ನು ಬಳಸಿದೆವು ಎಂದು “ಉದಯವಾಣಿ’ಗೆ ವಿವರಿಸಿದ್ದಾರೆ ಬ್ಯಾರೀಸ್‌ ಗ್ರೂಪ್‌ನ ಸಯ್ಯದ್‌ ಮಹಮ್ಮದ್‌ ಬ್ಯಾರಿ.

ಪರಿಸರಸ್ನೇಹಿ ಮಸೀದಿ
ಅಖ್ತರ್‌ ಅವರನ್ನು ಕುಂದಾಪುರದ ಬದ್ರಿಯಾ ಜುಮಾ ಮಸೀದಿಯ ವಿನ್ಯಾಸ ಆಕರ್ಷಿಸಿದೆ. ಬ್ಯಾರೀಸ್‌ ಗ್ರೂಪ್‌ ಈ ಹೊಸ ಕಲ್ಪನೆಯ ಮಸೀದಿ ನಿರ್ಮಿಸಿದ್ದು, ಇಸ್ಲಾಮಿಕ್‌ ಆರ್ಕಿಟೆಕ್ಚರ್‌ ಮತ್ತು ಆಧುನಿಕ ಪರಿಸರ ಸ್ನೇಹಿ ತಂತ್ರಜ್ಞಾನ ಮೂಲಕ ನಿರ್ಮಾಣವಾಗಿದೆ. ಈ ಮಸೀದಿಯ ವಿನ್ಯಾಸವು ಇಸ್ಲಾಮಿಕ್‌ ವಾಸ್ತುಶಿಲ್ಪದ ಕ್ರಾಂತಿಕಾರಕ ಹೆಜ್ಜೆಯಾಗಿದೆ.

ಒಟ್ಟು ವಿಸ್ತೀರ್ಣ- 15000 ಚ.ಅಡಿ.
ಪರ್ಯಾಯ ಇಂಧನ – ಗಾಳಿ ಮತ್ತು ಸೋಲಾರ್‌ ಶಕ್ತಿ
ಬೇಕಾಗಿದ್ದ ಶಕ್ತಿ- 40 ಕಿ.ವ್ಯಾ.
ಬಳಕೆಯಾಗುವ ಶಕ್ತಿ – 7 ಕಿ.ವ್ಯಾ.
ವಿಶೇಷ: ಸಹಜ ಗಾಳಿ ಬೆಳಕಿನ ವ್ಯವಸ್ಥೆ ಹಾಗೂ ನವೀಕರಿಸಬಹುದಾದ ಇಂಧನ ಬಳಕೆ

ಪ್ರೇರಣೆಯಾಗಲಿ
ಮಸೀದಿ, ದೇವಾಲಯ, ಚರ್ಚ್‌, ಬಸದಿಗಳು ಪರಿಸರ ಸ್ನೇಹಿಯಾಗಿ ನಿರ್ಮಾಣವಾದರೆ ಅವುಗಳಿಗೆ ಬರುವ ಭಕ್ತರು ಕೂಡಾ ಇದೇ ಪ್ರೇರಣೆಯಿಂದ ಅವರ ಮನೆ, ಕಟ್ಟಡಗಳನ್ನು ಹಸಿರು ಇಂಧನ ದಲ್ಲಿ ನಿರ್ಮಿಸಿದರೆ ಅದೇ ದೊಡ್ಡ ಕೊಡುಗೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಆಶಾದಾಯಕವಾಗಿದೆ.
– ಸೈಯದ್‌ ಅಹಮದ್‌ ಬ್ಯಾರಿ ರಾಜ್ಯಾಧ್ಯಕ್ಷರು, ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.