ಹಾಲಾಡಿ ವರ್ಚಸ್ಸಿನ ಮತಗಳ ಮೇಲೆ ಎಲ್ಲರ ಕಣ್ಣು

Team Udayavani, May 2, 2018, 6:00 AM IST

a17.jpg

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂಬಂತಾಗಿದೆ ಕುಂದಾಪುರ ಕ್ಷೇತ್ರ. ಇಲ್ಲಿರುವುದು ಹಾಲಾಡಿಯವರ ವೈಯಕ್ತಿಕ ವರ್ಚಸ್ಸಿನ ಮತಗಳ್ಳೋ ಬಿಜೆಪಿ ಪಕ್ಷದ ಮತಗಳ್ಳೋ, ಬಿಜೆಪಿಯಿಂದಾಗಿ ಹಾಲಾಡಿ ಗೆದ್ದರೋ, ಹಾಲಾಡಿಯಿಂದಾಗಿ ಬಿಜೆಪಿ ಗೆದ್ದರೋ ಎಂಬ ದ್ವಂದ್ವ ಸದಾ ಚಾಲ್ತಿಯಲ್ಲಿರುತ್ತದೆ.

ಬಿಜೆಪಿಯಿಂದ ಮೂರು ಬಾರಿ ಗೆದ್ದ, ಒಮ್ಮೆ ಪಕ್ಷೇತರನಾಗಿ ಗೆದ್ದ ಸತತ ಗೆಲುವಿನ ಸರದಾರ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಕಾಂಗ್ರೆಸ್‌ನಿಂದ ರಾಕೇಶ್‌ ಮಲ್ಲಿ ಸ್ಪರ್ಧಿ. ಉಳಿದಂತೆ ಜೆಡಿಎಸ್‌, ಜೆಡಿಯು, ಆರ್‌ಪಿಐಎ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. 90ರ ದಶಕದವರೆಗೂ ಕಾಂಗ್ರೆಸ್‌ ಪ್ರಚಂಡ ಗೆಲುಮೆಯಲ್ಲಿದ್ದ ಕಾಲ. ವರ್ಷಾನು ಗಟ್ಟಲೆ ಇಲ್ಲಿ ಕಾಂಗ್ರೆಸ್‌ನದ್ದೇ ಪಾರಮ್ಯ ಇತ್ತು. 1983ರಿಂದ
1994ರವರೆಗೆ ಪ್ರತಾಪಚಂದ್ರ ಶೆಟ್ಟರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸತತವಾಗಿ ಗೆದ್ದರು. ಕಾಂಗ್ರೆಸ್‌ನಲ್ಲಿದ್ದ ಎ.ಜಿ. ಕೊಡ್ಗಿ ಅವರು ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ಧಿಸಿ ಸೋತರು. ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಬಿಜೆಪಿಗೆ ಪರಿಚಯಿಸಿದರು. ಬಿಜೆಪಿಗೆ ಭದ್ರ ಬುನಾದಿ ಒದಗಿಸಿ 1999ರಿಂದ ಹಾಲಾಡಿ ಗೆಲ್ಲಲಾರಂಭಿಸಿದರು. ಅನಂತರ ಹಾಲಾಡಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು
ಯಾರಿಂದಲೂ ಸಾಧ್ಯವಾಗಲಿಲ್ಲ.

ಬಿಜೆಪಿ ಸರಕಾರ ಸಚಿವ ಸ್ಥಾನ ಕೊಡಿಸುವುದಾಗಿ ಬೆಂಗಳೂರಿಗೆ ಕರೆಸಿ ಕೊನೇ ಕ್ಷಣದಲ್ಲಿ ಕೈ ಕೊಟ್ಟ ಬೇಸರದಲ್ಲಿ ಪಕ್ಷ ತೊರೆದ ಹಾಲಾಡಿ ಪಕ್ಷೇತರ ರಾಗಿ ಗೆದ್ದು ತಮ್ಮ ಪ್ರಭಾವವನ್ನು ಪ್ರದರ್ಶಿಸಿ ದ್ದರು. ಹಾಗಾಗಿ ಈ ಬಾರಿ ಬಿಜೆಪಿಯೇ ಅವರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿ ಪಕ್ಷ ದಲ್ಲಿ ಟಿಕೆಟ್‌ ನೀಡಿದೆ. ಅವರ ಸ್ಪರ್ಧೆಗೆ ರಾಜಕೀಯ ಗುರು ಎ.ಜಿ. ಕೊಡ್ಗಿಯವರ ಅಪಸ್ವರವೂ ಸೇರಿ ಇದ್ದ
ವಿರೋಧ ಎಲ್ಲೂ ಚಿಗಿತುಕೊಳ್ಳಲೇ ಇಲ್ಲ. ಎ.ಜಿ.ಕೊಡ್ಗಿ ಅವರ ಮಗ ಕಿರಣ್‌ ಕೊಡ್ಗಿ ಅವರೇ ಹಾಲಾಡಿಯವರ ಜತೆ ಓಡಾಡಿ ಮತಯಾಚಿ ಸುತ್ತಿದ್ದಾರೆ. ಆದ್ದರಿಂದ ಕೇಳಿಬಂದಿದ್ದ ಸಣ್ಣ ಪ್ರಮಾಣದ ಭಿನ್ನಮತದ ಧ್ವನಿ ಕೂಡಾ ಅಂತಹ ಮಹತ್ವ ಪಡೆಯಲಿಲ್ಲ.

ಇವರಿಗೆ ಸ್ಪರ್ಧೆಯೊಡ್ಡಿರುವ ಕಾಂಗ್ರೆಸ್‌ ಅಭ್ಯರ್ಥಿ, ಇಂಟಕ್‌ ರಾಜ್ಯಾಧ್ಯಕ್ಷ, ಎಐಸಿಸಿ ಸದಸ್ಯ, ಕಬಡ್ಡಿ ಎಸೋಸಿಯೇಶನ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ಅವರು ಉದ್ಯಮಿಯಾಗಿದ್ದವರು. ಚುನಾ ವಣೆ ಸಲುವಾಗಿಯೇ ಬಂಟ್ವಾಳದಿಂದ ಇಲ್ಲಿ ಬಂದು ಮನೆ ಮಾಡಿ ತಿರುಗಾಟ
ನಡೆಸಿ ಪಕ್ಷ ಸಂಘಟಿಸಿದರು. ಆದರೆ ಹಾಲಾಡಿಯವರ ಎದುರು ಕುಂದಾಪುರ ಜನತೆಗೆ ಹೊಸಬರಾದ ಮಲ್ಲಿ ಅವರ ಓಡಾಟ ಎಷ್ಟು ಮತಗಳಾಗಿ ಪರಿವರ್ತನೆಯಾಗುತ್ತ ದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈವರೆಗೆ ಏನು ಮಾಡಿದ್ದೇನೆ ಎನ್ನುವುದಕ್ಕೆ ಜನ ಫ‌ಲಿ ತಾಂಶದ ಮೂಲಕ ಉತ್ತರ ನೀಡಲಿದ್ದಾರೆ. ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಮತ ಗಳಲ್ಲಿ ಗೆಲುವು ಸಾಧಿಸಲಿದ್ದೇನೆ. ವಿಪಕ್ಷದವರು ಹೊಗಳುವುದಿಲ್ಲ, ವಿಷಯ ಇಲ್ಲದಿದ್ದರೂ ತೆಗಳುತ್ತಾರೆ. ಇದೆಲ್ಲ ಜನರಿಗೆ ತಿಳಿದೇ ಇದೆ.
● ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಅಭ್ಯರ್ಥಿ

20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಆದ್ದರಿಂದ ಈ ಬಾರಿ ಮತ್ತೂಮ್ಮೆ ಜೆಡಿಎಸ್‌ ಸರಕಾರ ಬರಬೇಕಿದೆ. ಜನಸೇವೆ ಯ ಮೂಲಕ ಗುರುತಿಸಿ  ಕೊಂಡ ನಾನು ಸೌಲಭ್ಯಗಳನ್ನು ತಂದು ಅಭಿವೃದಿಟಛಿಯ ಹಾದಿಯಲ್ಲಿ
ನಡೆಸಬೇಕಿದೆ.

● ಪ್ರಕಾಶ್‌ ಶೆಟ್ಟಿ ತೆಕ್ಕಟ್ಟೆ ಜೆಡಿಎಸ್‌ ಅಭ್ಯರ್ಥಿ

30 ವರ್ಷಗಳಿಂದ ಕಾರ್ಮಿಕರ ಪರ ಶಾಸಕರಿಲ್ಲ. ಇಂಟಕ್‌ ಮೂಲಕ ಕಾಂಗ್ರೆಸ್‌ ನನಗೆ ಅವಕಾಶ ನೀಡಿದೆ. ಕಾರ್ಮಿಕ ಸಂಘಟನೆ ಅಧ್ಯಕ್ಷನಾಗಿ, ಕೃಷಿ ಕುಟುಂಬದವನಾಗಿ ಈ ಎರಡು ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕಿದೆ. ಯುವಕರ
ಉದ್ಯೋಗಕ್ಕೆ ಆದ್ಯತೆ, ಕೃಷಿಗೆ ಒತ್ತು, ಕಾರ್ಮಿಕ ಕಲ್ಯಾಣ ನನ್ನ ಮುಖ್ಯ ಉದ್ದೇಶ. 

● ರಾಕೇಶ್‌ ಮಲ್ಲಿ ಕಾಂಗ್ರೆಸ್‌ ಅಭ್ಯರ್ಥಿ

ಮತದಾರರ ಸಂಖ್ಯೆ
ಪುರುಷರು 94653
ಮಹಿಳೆಯರು 102408
ಒಟ್ಟು 197061

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-yodha

Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

accident

Kasaragod; ಬಸ್‌-ಕಾರು ಢಿಕ್ಕಿ: ಇಬ್ಬರ ಸಾವು

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.