Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!
ದುಷ್ಕರ್ಮಿಗಳಿಂದ ಕಾರನ್ನು ಬೈಕ್‌ಗೆ ಢಿಕ್ಕಿ ಹೊಡೆದು ಲಾಂಗ್ ಬೀಸಿ ಕೃತ್ಯ!
Team Udayavani, Apr 21, 2024, 10:48 PM IST
ಕುಣಿಗಲ್ : ಬೆಂಗಳೂರು ನಗರ ಸಶಸ್ತ್ರಪಡೆಯ ಪೊಲೀಸ್ ಪೇದೆ ಚಲಾಯಿಸುತ್ತಿದ್ದ ಬೈಕ್‌ಗೆ ದುಷ್ಕರ್ಮಿಗಳು ಕಾರಿನಿಂದ ಗುದ್ದಿ, ನೆಲಕ್ಕೆ ಬೀಳಿಸಿ ಲಾಂಗ್ ಬೀಸಿ ಗಾಯಗೊಳಿಸಿ ಕೊಲೆಗೆ ಯತ್ನಿಸಿದ ಘಟನೆ ಭಾನುವಾರ ಹಾಡಹಗಲೇ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಉರ್ಕೆಹಳ್ಳಿ ಗ್ರಾಮದ ಬಳಿ ನಡೆದಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಸಿದ್ದಹಟ್ಟಿ ಗ್ರಾಮ, ಹಾಲಿ ಬೆಂಗಳೂರು ನಗರ ಸಶಸ್ತ್ರಪಡೆಯ ಪೊಲೀಸ್ ಪೇದೆ ಎಸ್.ಎಸ್.ಶ್ರೀಧರ್ (29) ದುಷ್ಕರ್ಮಿಗಳ ಹಲ್ಲೆಗೆ ಒಳಗಾದವರು.
ಶ್ರೀಧರ್ ಬೆಂಗಳೂರಿನಿಂದ ಸ್ವಗ್ರಾಮ ಚನ್ನರಾಯಪಟ್ಟಣ ತಾಲೂಕು ಸಿದ್ದಹಟ್ಟಿ ಗ್ರಾಮಕ್ಕೆ ಬರುತ್ತಿರುವಾಗ ಟಾಟಾ ಸುಮೋ ಮತ್ತು ಇಂಡಿಕಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಟಾಟಾ ಸುಮೋದಿಂದ ಬೈಕ್‌ನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಶ್ರೀಧರ್ ನೆಲಕ್ಕೆ ಬಿದ್ದಿದ್ದಾರೆ, ಬಳಿಕ ಇಂಡಿಕಾ ಕಾರನ್ನು ಶ್ರೀಧರ್‌ನ ಮೇಲೆ ಹರಿಸಲು ಯತ್ನಿಸಿದ್ದಾರೆ. ಆದರೆ ಶ್ರೀಧರ್ ಪಕಕ್ಕೆ ಉರುಳಿದ ನಂತರ ಬೈಕ್ ಮೇಲೆ ಕಾರು ಹತ್ತಿಸಿದ್ದಾರೆ.
ಇಂಡಿಕಾ ಕಾರಿನಲ್ಲಿ ಇದ್ದ ವ್ಯಕ್ತಿ ಲಾಂಗ್ ಹಿಡಿದು ಶ್ರೀಧರ್ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾನೆ, ಇದರಿಂದ ಗಾಬರಿಗೊಂಡ ಶ್ರೀಧರ್ ಸಮೀಪದಲ್ಲೇ ಇದ್ದ ಟೀ ಅಂಗಡಿ ಬಳಿಗೆ ಓಡಿ ಹೋಗಿದ್ದಾರೆ.
ಪೇದೆಯನ್ನು ರಕ್ಷಿಸಿದ ಜನ
ಟೀ ಅಂಗಡಿ ಬಳಿ ಇದ್ದ ಜನರು ಕಿರಿಚಿಕೊಂಡಾಗ ಹೆದರಿದ ದುಷ್ಕರ್ಮಿಗಳು ಬಂದಿದ್ದ ಕಾರಿನಲ್ಲೇ ಓಡಿ ಹೊಗಿದ್ದಾರೆ. ಜನರು ಅಲ್ಲಿ ಇಲ್ಲದಿದ್ದರೇ ಪೇದೆ ಹತ್ಯೆ ನಡೆದುಹೊಗುತ್ತಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಓರ್ವನ ಬಂಧನ
ಘಟನೆ ಬಗ್ಗೆ ಸ್ಥಳೀಯ ಜನರು ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಿದ ತತ್ ಕ್ಷಣ ಕಾರ್ಯ ಪ್ರವೃತ್ತರಾದ ಕುಣಿಗಲ್ ಠಾಣೆಯ ಸಿಪಿಐ ನವೀನ್‌ಗೌಡ ನೇತೃತ್ವದ ಪೊಲೀಸ್ ತಂಡ ಘಟನೆ ಸ್ಥಳಕ್ಕೆ ತೆರಳಿದ್ದು, ಕಾರನ್ನು ಹಿಂಬಾಲಿಸಿದ್ದಾರೆ, ಕುಣಿಗಲ್ ಪಟ್ಟಣದ ಬಳಿ ಕಾರನ್ನು ಹಿಂಬಾಲಿಸಿ ತಡೆದು, ಓರ್ವ ಆರೋಪಿಯನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಸ್ಪತ್ರೆಗೆ ದಾಖಲು
ಘಟನೆಯಲ್ಲಿ ಗಾಯಗೊಂಡಿರುವ ಕೇಂದ್ರ ವಲಯ ಸಶಸ್ತ್ರಪಡೆಯ ಪೊಲೀಸ್ ಪೇದೆ ಎಸ್.ಎಸ್.ಶ್ರೀಧರ್ ಅವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಾಗಮಂಗಲ ತಾಲೂಕು ಅದಿಚುಂಚನಗಿರಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.