ಹಣಕಾಸಿನ ಕೊರತೆ: ಈ ವರ್ಷ ಶಾಲಾ ಮಕ್ಕಳಿಗೆ ಸೈಕಲ್ ಇಲ್ಲ
Team Udayavani, Jan 6, 2021, 6:07 AM IST
2006-07ರಲ್ಲಿ ಆರಂಭ
ಯಡಿಯೂರಪ್ಪನವರ ಮಹತ್ವಾಕಾಂಕ್ಷಿ ಯೋಜನೆ
2019-20ರಲ್ಲಿ 5.04 ಲಕ್ಷ ಸೈಕಲ್ ವಿತರಣೆ
ಬೆಂಗಳೂರು: ರಾಜ್ಯದ ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಶೈಕ್ಷಣಿಕ ಉತ್ತೇಜನಕ್ಕಾಗಿ ದಶಕದ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಆರಂಭಿಸಿದ್ದ “ಉಚಿತ ಸೈಕಲ್ ಭಾಗ್ಯ’ ಯೋಜನೆ ದುರ್ಬಲವಾಗುತ್ತಿದೆ.
2006-07ರಲ್ಲಿ ಯಡಿಯೂರಪ್ಪ ಅವರು ಡಿಸಿಎಂ ಹಾಗೂ ಹಣಕಾಸು ಸಚಿವರಾಗಿದ್ದಾಗ ಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯನ್ನು ಆರಂಭಿಸಿದ್ದು, ಅದು 2019-20ನೇ ಸಾಲಿನ ವರೆಗೂ ಮುಂದುವರಿದಿತ್ತು. ಆದರೆ ಈ ಬಾರಿ ಹಣಕಾಸಿನ ಕೊರತೆಯಿಂದ ಯೋಜನೆ ಸ್ಥಗಿತಗೊಳಿಸಲು ಸರಕಾರವೇ ನಿರ್ಧರಿಸಿದೆ.
2019-20ನೇ ಸಾಲಿನಲ್ಲಿ ಸರಕಾರಿ ಶಾಲೆಯ 8ನೇ ತರಗತಿಯ 5.04 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ ರಾಜ್ಯ ಸರಕಾರ 183 ಕೋ.ರೂ.ಗಳನ್ನು ಬಿಡುಗಡೆ ಮಾಡಿತ್ತು. ಆದರೆ, 2020-21ನೇ ಸಾಲಿಗೆ ಸೈಕಲ್ ವಿತರಣೆಗಾಗಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ಸೈಕಲ್ ವಿತರಿಸದಿರಲು ಸಾರ್ವ ಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಇಲಾಖೆಯ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.
ಮಾಹಿತಿ ಸಂಗ್ರಹವಾಗಿಲ್ಲ
ಪ್ರತಿ ವರ್ಷ ಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲಾ ಮುಖ್ಯಶಿಕ್ಷಕರ ಮೂಲಕ ಸಂಗ್ರಹಿಸಿ, ಅವರ ಬೇಡಿಕೆಗೆ ಅನುಸಾರವಾಗಿ ಸೈಕಲ್ ಪೂರೈಸಲಾಗುತ್ತದೆ. 2020-21ನೇ ಸಾಲಿನಲ್ಲಿ ಸೈಕಲ್ ವಿತರಣೆ ಬಗ್ಗೆ ಇಲಾಖೆಯಿಂದ ಯಾವುದೇ ಮಾಹಿತಿ ಕೇಳಿಲ್ಲ ಮತ್ತು ಈ ಸಂಬಂಧ ಯಾವುದೇ ಸೂಚನೆಯೂ ಬಂದಿಲ್ಲ ಎಂದು ಉಪನಿರ್ದೇಶಕರೊಬ್ಬರು ವಿವರ ನೀಡಿದರು.
ಶಾಲಾ ಮಕ್ಕಳಿಗೆ 2020-21ನೇ ಸಾಲಿನಲ್ಲಿ ಉಚಿತ ಸೈಕಲ್ ಯೋಜನೆ ಇರುವುದಿಲ್ಲ. ಅನುದಾನದ ಹಂಚಿಕೆ ಆಗದಿರುವುದರಿಂದ ಯೋಜನೆ ಈ ವರ್ಷ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಮುಂದಿನ ವರ್ಷದ ಪರಿಸ್ಥಿತಿಯು ಸರಕಾರದ ಅನುದಾನ ಹಂಚಿಕೆ ಆಧಾರದಲ್ಲಿ ನಿರ್ಧಾರವಾಗಲಿದೆ.
-ಉಮಾಶಂಕರ್, ಪ್ರಧಾನ ಕಾರ್ಯದರ್ಶಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.