ಕೆರೆ ಡಿನೋಟಿಫೈ: ಇಲಾಖೆಗಳ ನಡುವೆಯೇ ಸಂಘರ್ಷ
Team Udayavani, Aug 4, 2017, 7:45 AM IST
ಬೆಂಗಳೂರು: ನಿರ್ಜೀವ ಹಾಗೂ ಬತ್ತಿ ಹೋದ ಕೆರೆಗಳನ್ನು ಡಿ ನೋಟಿಫಿಕೇಷನ್ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಇಲಾಖೆಗಳ ನಡುವೆಯೇ ಸಂಘರ್ಷ ಪ್ರಾರಂಭವಾಗಿದ್ದು, ಆ ಕುರಿತ ಪ್ರಸ್ತಾವನೆಯನ್ನು ಮುಂದಿನ ಸಂಪುಟ ಸಭೆಯಲ್ಲಿ ಸರ್ಕಾರ ವಾಪಸ್ ಪಡೆಯುವ ಸಾಧ್ಯತೆಯಿದೆ. ಕಾನೂನು, ಆರ್ಥಿಕ ಇಲಾಖೆ ಕೆರೆಗಳ ಡಿ ನೋಟಿಫಿಕೇಶನ್‌ಗೆ ಸಹಮತ ವ್ಯಕ್ತಪಡಿಸಿದ್ದರೆ, ಗ್ರಾಮೀಣಾ ಭಿವೃದಿಟಛಿ ಮತ್ತು ಪಂಚಾಯತ್ ರಾಜ್ ಇಲಾಖೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಇನ್ನು ಸಣ್ಣ ರಾವರಿ, ನಗರಾಭಿವೃದಿಟಛಿ, ಅರಣ್ಯ ಇಲಾಖೆಗಳು ಮೌಖೀಕವಾಗಿ ಇಂತಹ ಕ್ರಮ ಸರಿಯಲ್ಲ. ಲಿಖೀತವಾಗಿ ಒಪ್ಪಿಗೆ ಕೊಡಲು ಸಾಧ್ಯವಾಗದು ಎಂಬ ಅಭಿಪ್ರಾಯ ನೀಡಿವೆ.
ಪ್ರಸ್ತುತ ಕಂದಾಯ ಇಲಾಖೆ ಪ್ರಸ್ತಾಪದ ಪ್ರಕಾರ ಡಿ ನೋಟಿಫಿಕೇಷನ್ ಮಾಡಿದರೆ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಭೂ ಒತ್ತುವರಿದಾರರಿಗೆ ಅನುಕೂಲವಾಗುತ್ತದೆ. ಜತೆಗೆ ಸರ್ಕಾರ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲೂ ಶಂಕೆ ಮೂಡುತ್ತದೆ. ಇದೊಂದು ವಿವಾದ ಆಗಿರುವುದರಿಂದ ಸರ್ಕಾರ ಈ ವಿಚಾರದಲ್ಲಿ ಪಾರದರ್ಶಕತೆ ಪ್ರದರ್ಶಿಸಬೇಕಿದೆ. ಇಲ್ಲದಿದ್ದರೆ ಕಷ್ಟ ಎಂದು ಹಿರಿಯ ಸಚಿವರು ಖುದ್ದು ಮುಖ್ಯಮಂತ್ರಿಯವರ ಬಳಿಯೇ ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಗುಣಲಕ್ಷಣ ಕಳೆದುಕೊಂಡು ಮೂಲ ಸ್ಥಿತಿಗೆ ತರಲಾಗದಂತಹ ಕೆರೆ, ಕಟ್ಟೆ, ಕುಂಟೆ ಮತ್ತು ಹಳ್ಳ ಮುಂತಾದವುಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವೆಂದು ಕಂಡು ಬಂದಾಗ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68ರ ಅಡಿಯಲ್ಲಿ ತಿದ್ದುಪಡಿ ತರಲು ಕಂದಾಯ ಇಲಾಖೆಯಿಂದ ತಯಾರಿಸಲಾಗಿರುವ ಪ್ರಸ್ತಾವನೆ ಮುಂದಿನ ಸಂಪುಟ ಸಭೆಯ ಮುಂದಿಟ್ಟು ವಾಪಸ್ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಂದಾಯ ದಾಖಲೆಗಳಲ್ಲಿ ಈಗಲೂ ಕೆರೆ ಎಂದೇ ನಮೂದಾಗಿದ್ದರೂ ಕರ್ನಾಟಕ ಗೃಹ ಮಂಡಳಿ, ಬಿಡಿಎ ಹಾಗೂ ನಗರಾಭಿವೃದಿಟಛಿ ಪ್ರಾಧಿಕಾರಿಗಳ ಮೂಲಕ ಕೆರೆಗಳ ಜಾಗದಲ್ಲಿ ಈಗಾಗಲೇ ಬಡಾವಣೆ ನಿರ್ಮಿಸಿದ್ದರೆ ಅಷ್ಟು ಪ್ರದೇಶಕ್ಕೆ ಸೀಮಿತವಾಗಿ ಡಿನೋಟಿಫೈ ಮಾಡಿ ಸುತ್ತಮುತ್ತ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಹಸಿರು ವಲಯ ನಿರ್ಮಿಸುವ
ಪ್ರಸ್ತಾವನೆ ಸಿದಟಛಿಪಡಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ಇದಕ್ಕೂ ಮುನ್ನ ಕೆ.ಬಿ.ಕೋಳಿವಾಡ ಅವರ ಕೆರೆ ಒತ್ತುವರಿ ವರದಿ, ಎ.ಟಿ.ರಾಮಸ್ವಾಮಿ ಹಾಗೂ ಬಾಲಸುಬ್ರಹ್ಮಣ್ಯಂ ಅವರು ನೀಡಿರುವ ಸರ್ಕಾರಿ ಭೂಮಿ ಒತ್ತುವರಿ ವರದಿಗಳು, ಸುಪ್ರೀಂಕೋರ್ಟ್ ಹಾಗೂ ಹಸಿರು ಪೀಠದ ತೀರ್ಪು ಇವೆಲ್ಲವನ್ನೂ ಪರಾಮರ್ಶೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ರಾಜ್ಯದ 500 ಕಡೆ ಕೆರೆಯ ಜಾಗದಲ್ಲಿ ಗೃಹ ಮಂಡಳಿ, ಬಿಡಿಎ, ನಗರಾಭಿವೃದಿಟಛಿ ಪ್ರಾಧಿಕಾರಗಳ ಮೂಲಕ ಬಡಾವಣೆ ರಚಿಸಲಾಗಿದೆ. ಆದರೆ, ಕೆಲವೆಡೆ ಕೆರೆಯ ಪ್ರದೇಶದಲ್ಲಿ ಶೇ.50ರಿಂದ 60ರಷ್ಟು ಜಾಗದಲ್ಲಿ ನಗರಾಭಿವೃದಿಟಛಿ, ಕಂದಾಯ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಿ ಬಡಾವಣೆ ರಚಿಸಲಾಗಿದೆ. ಉಳಿದ ಭಾಗ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಇದೀಗ ಬಡಾವಣೆ ರಚನೆಯಾಗಿರುವ ಪ್ರದೇಶವು ಕಂದಾಯ ಮೂಲ ದಾಖಲೆಗಳಲ್ಲಿ ಇನ್ನೂ ಕೆರೆ ಎಂದು ನಮೂದಾಗಿದೆ. ಇಂದಲ್ಲ ನಾಳೆ ಅದು ಸಮಸ್ಯೆಯಾಗುವುದರಿಂದ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ನಿರ್ದಿಷ್ಟವಾಗಿ 1500 ಕೆರೆಗಳನ್ನು ಡಿನೋಟಿಫಿಕೇಷನ್ ಮಾಡುವ ಅಥವಾ ಆ ರೀತಿಯ ಯಾವುದೇ ಕೆರೆಗಳನ್ನೂ ಗುರುತಿಸಿಲ್ಲ ಎಂದೂ ಅಧಿಕಾರಿಗಳು ಹೇಳುತ್ತಾರೆ.
ಆಗಿದ್ದೇನು?: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು 2017ರ ಏ.22ರಂದು ಟಿಪ್ಪಣಿ ಸಿದಟಛಿಪಡಿಸಿ 2017ರ ಏ.19 ರಂದು ನಡೆದ ಸಂಪುಟ ಸಭೆಯಲ್ಲಿ, ಮೂಲ ಸ್ಥಿತಿಯನ್ನು ಕಳೆದುಕೊಂಡಿರುವ ಕೆರೆಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಬೇಕಾದಾಗ ಬಳಸಿಕೊಳ್ಳಲು ಈಗಿರುವ ಕರ್ನಾಟಕ ಭೂ ಕಂದಾಯ ಅಧಿನಿಯಮ
1964ರ ಕಲಂ 68 ರ ಅಡಿ ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದಾಗ ಸದರಿ ಕಲಂ ತಿದ್ದುಮಾಡಿ ಅವಕಾಶ ಮಾಡಿಕೊಡಬೇಕೆಂದು ಸಚಿವ ಸಂಪುಟ ಸಭೆ ನಿರ್ಧರಿಸಿ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿ, ಈ ವಿಚಾರದಲ್ಲಿ ಕಾನೂನು, ಆರ್ಥಿಕ, ನಗರಾಭಿವೃದಿಟಛಿ, ಸಣ್ಣ ನೀರಾವರಿ , ಅರಣ್ಯ ಮತ್ತು ಪರಿಸರ ಹಾಗೂ ಗ್ರಾಮೀಣಾಭಿವೃದಿಟಛಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಭಿಪ್ರಾಯ ಪಡೆಯುವುದು ಎಂದು ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.