ಅಭಿವೃದ್ಧಿಯ ಮಾನದಂಡವೇ ಬಿಜೆಪಿಗೆ ಶ್ರೀರಕ್ಷೆ : ಡಿಸಿಎಂ ಸವದಿ

ಬಿಜೆಪಿ ಈ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ವಿಜಯ ದುಂದುಭಿ ಮೊಳಗಿಸಲು ಸಕಲ ರೀತಿಯಲ್ಲಿಯೂ ಸಜ್ಜಾಗಿದೆ

Team Udayavani, Mar 17, 2021, 3:44 PM IST

nbnbnbnb nb

ಬೆಂಗಳೂರು : ಬಸವಕಲ್ಯಾಣ ಕ್ಷೇತ್ರವೂ ಸೇರಿದಂತೆ ಬೆಳಗಾವಿ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ಮುಂದಿನ ತಿಂಗಳು ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದಲೂ ಹಲವು ಹಂತಗಳಲ್ಲಿ ಚುನಾವಣಾ ರಣತಂತ್ರಗಳನ್ನು ರೂಪಿಸುವ ಮೂಲಕ ಬಿಜೆಪಿ ಈ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ವಿಜಯ ದುಂದುಭಿ ಮೊಳಗಿಸಲು ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.

ಬಸವಕಲ್ಯಾಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿಯು ನನ್ನನ್ನೂ, ಸಚಿವರಾದ ಶ್ರೀ ವಿ.ಸೋಮಣ್ಣ, ಶ್ರೀ ಬಸವರಾಜ ಬೊಮ್ಮಾಯಿ, ಸಂಸದರಾದ ಶ್ರೀ ಭಗವಂತ ಖೂಬಾ, ಶಾಸಕರಾದ ಶ್ರೀ ರಾಜಕುಮಾರ್ ಪಾಟೀಲ್ ತೇಲ್ಕೂರ್, ಮುಖಂಡರಾದ ಶ್ರೀ ಮಾಲೀಕಯ್ಯ ಗುತ್ತೇದಾರ್,ಶ್ರೀ ಈಶ್ವರ್ ಸಿಂಗ್ ಠಾಕೂರ್, ಶ್ರೀ ಅಮರನಾಥ್ ಪಾಟೀಲ್ ಅವರನ್ನೊಳಗೊಂಡ ಉಸ್ತುವಾರಿಸಮಿತಿಯನ್ನು ಕಳೆದ ಫೆಬ್ರವರಿಯಲ್ಲಿಯೇ ರಚಿಸಿದ್ದು, ಈಗಾಗಲೇ ನಾವು ಈ ಉಪಚುನಾವಣೆಯ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ಅನೇಕ ಸಭೆ, ಚರ್ಚೆಗಳನ್ನುನಡೆಸಿದ್ದೇವೆ.

ಅಷ್ಟೇ ಅಲ್ಲ, ಹಲವು ಬಾರಿ ಈ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ.

ನಾವು ಕೈಗೊಂಡಹಲವು ಸರಣಿ ಸಭೆಗಳಲ್ಲಿ ಸಹಸ್ರಸಹಸ್ರ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಸೇರುತ್ತಿದ್ದ ಜನರ ಉತ್ಸಾಹವನ್ನು ಗಮನಿಸಿದರೆ ಈ ಬಾರಿ ಅಲ್ಲಿ ಜನ ಬಿಜೆಪಿ ಪರವಾದ ಅಲೆ ಪ್ರಬಲವಾಗಿದೆ ಎಂಬುದು ಸ್ಪಷ್ಟ.

ಬಸವಕಲ್ಯಾಣ ಕ್ಷೇತ್ರದಲ್ಲಿ ಸುಮಾರು 18 ಮಂದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದು, ಈಗಾಗಲೇ ಇವರ ಎಲ್ಲಾ ಮಾಹಿತಿಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗಿದೆ. ಪಕ್ಷದ ವರಿಷ್ಠರ ಮಂಡಳಿ ಈ ಪೈಕಿ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೂ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಲು ಪಣತೊಡಲಿದ್ದಾರೆ. ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಪಕ್ಷದ ಎಲ್ಲಾ ಮುಖಂಡರೂ ಈ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗುವಂತೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ.

ಬಿಜೆಪಿಯ ರಾಜ್ಯ ಅಧ್ಯಕ್ಷರಾದ ಶ್ರೀ ನಳೀನ್‍ಕುಮಾರ್ ಕಟೀಲ್ ಅವರೂಬಸವ ಕಲ್ಯಾಣಕ್ಕೆ ಭೇಟಿಕೊಟ್ಟು ಸೂಕ್ತ ನಿರ್ದೇಶನಗಳನ್ನು ನೀಡಿ ಹುರಿದುಂಬಿಸಿದ್ದಾರೆ. ಆದ್ದರಿಂದಯಾವುದೇ ಭಿನ್ನಾಭಿಪ್ರಾಯವಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ.

ಈ ಉಪಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರಮುಂದಿಟ್ಟು ಮತ ಯಾಚಿಸುವುದಲ್ಲದೇ, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಭರವಸೆಯೊಂದಿಗೆ ಮತದಾರರನ್ನು ಸ್ಪಂದಿಸುವುದು ನಮ್ಮ ಗುರಿಯಾಗಿದೆ. ರೈತರಿಗೆ,ಬಡವರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಮತ್ತು ದೀನದಲಿತರಿಗೆ ನಮ್ಮ ಕೇಂದ್ರಸರ್ಕಾರ ಮತ್ತು ರಾಜ್ಯ ಸರ್ಕಾರವು ನೀಡಿರುವ ಅನೇಕ ಕೊಡುಗೆಗಳು ಮತ್ತುಕಾರ್ಯಕ್ರಮಗಳು ಈ ಉಪ ಚುನಾವಣೆಯಲ್ಲಿಯೂ ನಮಗೆ ಶ್ರೀರಕ್ಷೆಯಾಗಲಿವೆ,ಆದ್ದರಿಂದ ಈ ಬಾರಿ ಬಸವಕಲ್ಯಾಣವಲ್ಲದೇ ಮಸ್ಕಿ ಮತ್ತು ಬೆಳಗಾವಿ ಲೋಕಸಭಾಕ್ಷೇತ್ರಗಳಲ್ಲಿಯೂ ಸಹ ಬಿಜೆಪಿಯ ಅಭ್ಯರ್ಥಿಗಳು ಅತ್ಯಧಿಕ ಬಹುಮತದಿಂದಗೆಲ್ಲುವುದು ಖಚಿತವಾಗಿದೆ.

ಆದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಮನೆಗಳಿಗೆ ಭೇಟಿ ನೀಡಿ ಅವರ ಮನಸ್ಸನ್ನುಗೆಲ್ಲುವುದಕ್ಕೆ ಶ್ರಮಿಸಲು ನಿರಂತರ ಪ್ರಯತ್ನಗಳನ್ನು ನಡೆಸುವುದಲ್ಲದೇ ಸಾಮಾಜಿಕಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಿಜೆಪಿ ಸರ್ಕಾರಗಳಕಾರ್ಯಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ.

ಈಗ ಮೋದಿಜಿಅವರ ನೇತೃತ್ವದಲ್ಲಿ ಇಡೀ ದೇಶದಲ್ಲೇ ಅಭಿವೃದ್ಧಿಯ ಹೊಸ ಪರ್ವ ಪ್ರಾರಂಭವಾಗಿದೆ.ಆದ್ದರಿಂದ ವಿರೋಧ ಪಕ್ಷಗಳು ಯಾವುದೇ ರೀತಿಯ ವಾಮಮಾರ್ಗವನ್ನುಅನುಸರಿಸಿದರೂ ಅಥವಾ ಅಪಪ್ರಚಾರ ನಡೆಸಿದರೂ ಈ ಬಾರಿ ಅವರು ಯಶಸ್ವಿಯಾಗುವುದಿಲ್ಲ.ಏಕೆಂದರೆ ಮತದಾರರು ಸಂಪೂರ್ಣವಾಗಿ ಬಿಜೆಪಿಯ ಸಕಾರಾತ್ಮಕ ಆಡಳಿತದ ಪರವಾಗಿದ್ದಾರೆಎಂಬುದು ಅಲ್ಲಿಗೆ ಭೇಟಿಕೊಟ್ಟಾಗ ನನಗೆ ತಿಳಿದುಬಂದ ಸಂಗತಿಯಾಗಿದೆ.  ಅಷ್ಟೇಅಲ್ಲ, ಕೋವಿಡ್ ಸಂದರ್ಭದಲ್ಲಿ ನಮ್ಮಸರ್ಕಾರಗಳು ಸಾರ್ವಜನಿಕರ ಕಷ್ಟನಷ್ಟಗಳಿಗೆ ಸ್ಪಂದಿಸಿದ್ದನ್ನು ಮತದಾರರುಮರೆಯುವುದಿಲ್ಲ ಎಂಬ ವಿಶ್ವಾಸ ನಮಗಿದೆ.

ಕರ್ನಾಟಕದಲ್ಲಿನಡೆಯುವ ಎಲ್ಲಾ ಉಪ ಚುನಾವಣೆಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಈಗಾಗಲೇ ಪಕ್ಷದವರಿಷ್ಠರು ನಮಗೆ ನೀಡಿದ ನಿರ್ದೇಶನದಂತೆ ಚುನಾವಣಾ ಪ್ರಚಾರಾರ್ಥವಾಗಿ ಬಸವಕಲ್ಯಾಣಕ್ಕೆಬಿಜೆಪಿಯ ಹಲವು ಹಿರಿಯ ಮುಖಂಡರೂ ಭೇಟಿ ನೀಡಲಿದ್ದಾರೆ. ಚುನಾವಣೆ ಎದುರಿಸುವನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಸಕಲ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ. ಬಲಿಷ್ಠ ಮತ್ತುಭವ್ಯ ಭಾರತವನ್ನು ಕಟ್ಟುವ ಮೋದಿಜಿ ಅವರ ಪ್ರಯತ್ನಕ್ಕೆ ಮತದಾರರು ತಮ್ಮಬೆಂಬಲ ನೀಡುವುದು ಶತಸಿದ್ಧ ಎಂಬ ವಿಶ್ವಾಸದೊಂದಿಗೆ ನಮ್ಮ ಬಿಜೆಪಿಯ ಚುನಾವಣಾಭೂಮಿಕೆ ಸಿದ್ಧವಾಗಿದ್ದು, ಇದರಿಂದಾಗಿ ವಿರೋಧಪಕ್ಷಗಳಲ್ಲಿ ಈಗಾಗಲೇ ತಳಮಳಶುರುವಾಗಿದೆ. ಹಿಂದಿನ ಉಪ ಚುನಾವಣೆಗಳಲ್ಲಿ ಬಿಜೆಪಿಯು ಹೆಚ್ಚಿನ ಕ್ಷೇತ್ರಗಳಲ್ಲಿ ಜಯಸಾಧಿಸಿದಂತೆಯೇ, ಈ ಉಪ ಚುನಾವಣೆಯಲ್ಲೂ ಸಹ ಎಲ್ಲಾ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿಹೊಸ ದಾಖಲೆ ನಿರ್ಮಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಟಾಪ್ ನ್ಯೂಸ್

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.