ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡನೆ
Team Udayavani, Mar 3, 2020, 3:05 AM IST
ವಿಧಾನಸಭೆ: ಕೈಗಾರಿಕೆಗಳಿಗೆ ಸರ್ಕಾರ ನೀಡಿರುವ ಜಮೀನನ್ನು ಏಳು ವರ್ಷ ಬಳಕೆ ಮಾಡಲಾಗದೇ ಅಥವಾ ಉದ್ಯಮ ನಿಭಾಯಿಸಲಾಗದಿದ್ದರೆ, ಏಳು ವರ್ಷಗಳ ನಂತರ ಅದೇ ಉದ್ದೇಶಕ್ಕೆ ಜಮೀನು ಮಾರಾಟ ಮಾಡಲು ಕೈಗಾರಿಕೋದ್ಯಮಿಗಳಿಗೆ ಅವಕಾಶ ಕಲ್ಪಿಸುವ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 2020 ವಿಧೇಯಕವನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು. ಪ್ರತಿಪಕ್ಷಗಳ ಗದ್ದಲದ ನಡುವೆಯೇ ಕಂದಾಯ ಸಚಿವ ಆರ್. ಅಶೋಕ್ ವಿಧಾನ ಸಭೆಯಲ್ಲಿ ವಿಧೇಯಕ ಮಂಡನೆ ಮಾಡಿದರು.
ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಪ್ರಕರಣ 109ಕ್ಕೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದ್ದು, ಈ ತಿದ್ದುಪಡಿ ಪ್ರಕಾರ ಯಾವುದೇ ವ್ಯಕ್ತಿ ಉದ್ಯಮ ಸ್ಥಾಪನೆಗೆ ಸರ್ಕಾರದಿಂದ ಜಮೀನು ಪಡೆದು ಏಳು ವರ್ಷಗಳಲ್ಲಿ ಉದ್ಯಮ ಸ್ಥಾಪನೆ ಮಾಡಿ ಅದನ್ನು ನಿಭಾಯಿಸಲಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ನಿರ್ದಿಷ್ಟ ಉದ್ದೇಶಕ್ಕೆ ಬಳಕೆ ಮಾಡಲಾಗದೆ ಹಾಗೆಯೇ ಉಳಿಸಿಕೊಂಡಿದ್ದರೆ, ಅಂತಹ ಜಮೀನನ್ನು ಸಂಬಂಧ ಪಟ್ಟ ಉದ್ಯಮಿ ಏಳು ವರ್ಷದ ನಂತರ ಸರ್ಕಾರದ ಅನುಮತಿ ಪಡೆದು ತಾವು ಯಾವ ಉದ್ದೇಶಕ್ಕೆ ಜಮೀನು ಪಡೆದುಕೊಂಡಿದ್ದರೋ ಅದೇ ಉದ್ದೇಶಕ್ಕೆ ಬೇರೊಬ್ಬರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲು ತಿದ್ದುಪಡಿ ತರಲು ಸರ್ಕಾರ ವಿಧೇಯಕ ಮಂಡಿಸಿದೆ.
ಉದ್ಯಮಿಯು ಜಮೀನು ಮಾರಾಟಕ್ಕೆ ಅರ್ಜಿ ಸಲ್ಲಿಸಿದ ನಂತರ ಸಂಬಂಧ ಪಟ್ಟ ಅರ್ಜಿಯನ್ನು ಕರ್ನಾಟಕ ಕೈಗಾರಿಕೆ (ಸೌಲಭ್ಯ) ಅಧಿನಿಯಮ 2002 ರ ಅಡಿಯಲ್ಲಿ ರಚಿಸ ಲಾದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯಮಟ್ಟದ ಏಕ ಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯ ಅನುಮೋದನೆ ಯೊಂದಿಗೆ ಸರ್ಕಾರ ಭೂಮಿಯನ್ನು ಮಾರಾಟಗೊಳಿಸಲು ವಿನಾಯಿತಿ ನೀಡುತ್ತದೆ.
ಉನ್ನತ ಮಟ್ಟದ ಸಮಿತಿಯ ಒಪ್ಪಿಗೆ ಪಡೆದ ನಂತರ ಕೈಗಾರಿಕೋದ್ಯಮಿಯು ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ವಯ 109 ನೇ ಕಲಂ ಅಡಿ ವಿನಾಯಿತಿಯನ್ನು ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕೆ ಬಳಸಲು ಅನುಮತಿ ಪಡೆದುಕೊಂಡಿರುತ್ತಾರೆಯೋ ಅದೇ ಉದ್ದೇಶಕ್ಕೆ ಬಳಸಲು ಬೇರೆ ಕಂಪನಿ ಅಥವಾ ಸಂಸ್ಥೆಗೆ ಮಾರಾಟ ಮಾಡಲು ಅವಕಾಶ ದೊರೆ ಯುತ್ತದೆ. ಈ ವಿಧೇಯಕವನ್ನು 2019 ರ ನವೆಂ ಬರ್ 20 ರಿಂದಲೇ ಜಾರಿಗೆ ಬಂದಿದೆ ಎಂದು ಪರಿಗಣಿಸುವಂತೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಎಟಿಎಂಗೆ ಹಣ ಜಮೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ನಡಿಸಿ 93 ಲಕ್ಷ ರೂ ದರೋಡೆ
Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್ ಜಾರಕಿಹೊಳಿ
Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ
MUST WATCH
ಹೊಸ ಸೇರ್ಪಡೆ
Sullia: ಕಲ್ಲುಮುಟ್ಲು; ಹೂಳೆತ್ತುವ ಕಾರ್ಯ ಆರಂಭ
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Sullia: ಬೆಂಕಿ ಆರಿಸುವವರು ಬೇಕಾಗಿದ್ದಾರೆ!; ಸುಳ್ಯ ಅಗ್ನಿ ಶಾಮಕ ಠಾಣೆಯಲ್ಲಿ ಸಿಬಂದಿ ಕೊರತೆ
Dharwad: ಕೃಷಿ ಸದೃಢವಾದರೆ ಮಾತ್ರ ಭಾರತ ಶಕ್ತಿಶಾಲಿಯಾಗಲು ಸಾಧ್ಯ: ಉಪರಾಷ್ಟ್ರಪತಿ ಧನಕರ್
New Scam…ಇದು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.