ಭೂ ಸುಧಾರಣೆ ಕಾಯ್ದೆ ಮರಣ ಶಾಸನ


Team Udayavani, Jun 14, 2020, 7:03 AM IST

horatti shasana

ಹುಬ್ಬಳ್ಳಿ: ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರಾಜ್ಯಕ್ಕೆ ಅದರಲ್ಲೂ ರೈತರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇದು ಕೃಷಿಕರನ್ನು ಬಿಟ್ಟು ಉಳ್ಳವರ ಸೊತ್ತಾಗುತ್ತದೆ. ಕೇಂದ್ರ-ರಾಜ್ಯ ಸರ್ಕಾರಗಳು ಉದ್ದಿಮೆದಾರರ  ಕೈಗೊಂಬೆಯಾಗಿ ವರ್ತಿಸುತ್ತಿವೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ  ಅವರು, ಈ ಮೊದಲು ಕೃಷಿಕನಲ್ಲದ ಯಾವುದೇ ವ್ಯಕ್ತಿ ಕೃಷಿ ಜಮೀನು ಖರೀದಿಸಲು ಅವಕಾಶವಿರಲಿಲ್ಲ. ಇದನ್ನು ಸರಳೀಕರಿಸಿ ಉಚ್ಚನ್ಯಾಯಾಲಯದ ನೆಪವೊಡ್ಡಿ ತಿದ್ದುಪಡಿ ತರಲಾಗಿದೆ. ಈ ರೀತಿಯ ಕಾನೂನಿನಿಂದ ಶ್ರೀಮಂತರು  ವಾಮಮಾರ್ಗದಿಂದ ಗಳಿಸಿದ ಹಣವನ್ನು ರೈತರಿಗೆ ಆಮಿಷವೊಡ್ಡಿ ಬೇಕಾದಷ್ಟು ಭೂಮಿ ಖರೀದಿಸುತ್ತಾರೆ.

ಕಪ್ಪುಹಣ ಇದ್ದವರು ಕೃಷಿ ಭೂಮಿ ಪಡೆದು ನಿವೇಶನ ಮಾಡುವುದು ಇಲ್ಲವೇ ಕೃಷಿಯೇತರ ಉಪಯೋಗಕ್ಕೆ ಬಳಕೆ ಆಗಲಿದೆ.  ಇದರಿಂದ ಮುಂದೆ ದವಸ ಧಾನ್ಯಗಳಿಗೆ ಅನ್ಯರಾಜ್ಯಗಳ ಮೇಲೆ ಅವಲಂಬಿಸಬೇಕಾಗುತ್ತದೆ. ಯಾರು ಬೇಕಾದರೂ ಜಮೀನು ಖರೀದಿಸಿದರೆ ಅವರಿಗೆ ಕೃಷಿ ಮಾಡಲು ಸಾಧ್ಯವೆಂಬುದನ್ನು ನೀವು ತಿಳಿದುಕೊಂಡಿದ್ದೀರಾ? ಈ ತಿದ್ದುಪಡಿ  ಕಾಯ್ದೆಯಿಂದ ಒಂದು ಕುಟುಂಬದಲ್ಲಿ ಐವರು ಇದ್ದರೆ 108 ಎಕರೆ ಜಮೀನು ಖರೀದಿಸಬಹುದಾಗಿದೆ.

ಅಂದರೆ ಎಲ್ಲ ವ್ಯಾಪಾರಸ್ಥರು ಭೂಮಿ ಖರೀದಿಸಿ ಹೆಚ್ಚಿಗೆ ವ್ಯಾಪಾರ ಮಾಡಿ ಹಣ ಗಳಿಸುವ ದಂಧೆಯಾಗುತ್ತದೆ. ಈ ಕಾನೂನು  ತರುವುದಕ್ಕಿಂತ ಮೊದಲು ಎಲ್ಲಾ ರೈತ ಸಂಘದ ಮುಖ್ಯಸ್ಥರು, ರೈತರನ್ನು ಕರೆದು ಚರ್ಚಿಸಬಹುದಾಗಿತ್ತು. ಈ ಮೊದಲು ಉದ್ಯಮಿಗಳಿಗೆ, ಕಾರ್ಖಾನೆ ಮುಂತಾದ ವುಗಳಿಗೆ ಕೃಷಿ ಜಮೀನು ಬೇಕಾದಲ್ಲಿ ಕೆಐಎಡಿಬಿಗೆ ಅನುಮತಿ ಕೊಡಲು  ಕಾನೂನಿನಲ್ಲಿ ಅವಕಾಶವಿತ್ತು. ಈ ಪರಿಸ್ಥಿತಿ ಮುಂದುವರಿದಲ್ಲಿ ಯಾರು ಬೇಕಾದರೂ ಎಷ್ಟು ಬೇಕಾದಷ್ಟು ಭೂಮಿ ಖರೀದಿಸಿ ಅದನ್ನು ಕೃಷಿಯೇತರ ಚಟುವಟಿಕೆಗೆ ಉಪ ಯೋಗಿಸದೆ ದುಬಾರಿ ಬೆಲೆಗೆ ಮಾರಾಟ ಮಾಡ ಲೂಬಹುದು.

ಅನ್ನ ಕೊಡುವ ರೈತನ ಬಾಯಲ್ಲಿ ಮಣ್ಣು ಹಾಕಿ ಇಂತಹ ಕೆಟ್ಟ ಕಾನೂನು ತರುವುದು ಸೂಕ್ತವಲ್ಲ. ಇದು ಅಪಾಯಕಾರಿ ಕಾಯ್ದೆ ತಿದ್ದುಪಡಿ ಆಗಿದೆ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರೈತರ  ಹೆಸರಿನಲ್ಲಿ ಪ್ರಮಾಣ ವಚನ ಮಾಡಿದ್ದೀರಿ. ಆದರೀಗ ರೈತರ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದೀರಿ. ಇನ್ಮುಂದೆ ಇದ್ದ ಬಿದ್ದ ಜಮೀನು ಮಾರಿ, ದುಡ್ಡಿಗೆ ಆಕರ್ಷಿತರಾಗಿ ಇನ್ನಷ್ಟು ಆತ್ಮಹತ್ಯೆ ಮಾಡಿಕೊಳ್ಳುವಂಥ ವಾತಾವರಣ  ನಿರ್ಮಾಣವಾಗುವುದು ಸ್ಪಷ್ಟವಾಗುತ್ತದೆ. ಇಂತಹ ಕರಾಳ ಶಾಸನ ತರುವುದು ಅವಿವೇಕದ ಪರಮಾವಧಿ ಎಂದು ಹೊರಟ್ಟಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.