![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 2, 2020, 3:04 AM IST
ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಭೂಮಿ ಕಂಪಿಸಿದ್ದರಿಂದ ಗ್ರಾಮಸ್ಥರು, ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ. ಕಳೆದ 3 ವರ್ಷಗಳ ಹಿಂದೆ ಗಡಿಕೇಶ್ವಾರ ಗ್ರಾಮದಲ್ಲಿ ಭೂಮಿ ಕಂಪಿಸಿದ್ದರಿಂದ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ಗ್ರಾಮದಲ್ಲಿ ಪದೇಪದೆ ಇಂತಹ ಭಯಾನಕ ಶಬ್ದ ಆಗಾಗ ಕೇಳಿ ಬರುತ್ತಿದೆ. ಭೂಮಿ ಕಂಪನ ಆಗುತ್ತಿದೆ. ಇದರಿಂದ ಜನರು ಭಯದಿಂದ ಜೀವನ ಸಾಗಿಸಬೇಕಿದೆ ಎಂದು ಸ್ಥಳೀಯ ನಿವಾಸಿ ವೀರೇಶ ಬೆಳಕೇರಿ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಶಬ್ಧ ಉಂಟಾಗಿದ್ದರಿಂದ ಮನೆಯಲ್ಲಿ ಕುಳಿತು ಟೀವಿ ನೋಡುತ್ತಿದ್ದವರು ಹಾಗೂ ನಿದ್ರೆಯಲ್ಲಿದ್ದವರು ಭಯಭೀತರಾಗಿ ಮನೆ ಯಿಂದ ಹೊರಗೆ ಬಂದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಈ ಕುರಿತು ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದ್ದಾರೆ.
“ಭಯ ಪಡಬೇಕಿಲ್ಲ’: ಗಡಿಕೇಶ್ವಾರ ಗ್ರಾಮದಲ್ಲಿ ಭೂಮಿ ಕಂಪಿಸಿರುವ ಬಗ್ಗೆ ಗ್ರಾಮಸ್ಥರು ಭಯ ಪಡಬೇಕಾಗಿಲ್ಲ. ಭೂಮಿ ಯೊಳಗೆ ನಡೆಯುವ ಚಲನ ಪ್ರಕ್ರಿಯೆ ಗಳಿಂದ ಭೂಮಿ ಕಂಪಿಸುವುದು ಸಾಮಾನ್ಯ ಎಂದು ಜಿಲ್ಲಾ ಶಾಶ್ವತ ಭೂ ಕಂಪನ ಕೇಂದ್ರದ ವೈಜ್ಞಾನಿಕ ಸಹಾಯಕ ಅಣವೀರಪ್ಪ ಬಿರಾದಾರ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.