![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 8, 2019, 3:00 AM IST
ಬೆಂಗಳೂರು: ಶಿಕ್ಷಕರ ದಿನಾಚರಣೆ ವಿಶೇಷವಾಗಿ ಬಿಎಸ್‌ಎನ್‌ಎಲ್ ಅಂತರ್ಜಾಲದಲ್ಲಿ ಹೊಸ ಯುಗ ತರಲು ಐಪಿವಿ6 ಸೇವೆಯನ್ನು ಆರಂಭಿಸಿದೆ. ಮನೆ ಮತ್ತು ಕಚೇರಿಯಲ್ಲಿ ಅನೇಕ ಅಂತರ್ಜಾಲವನ್ನು ವಿವಿಧ ಸಾಧನಗಳ ಮೂಲಕ ಬಳಸುವವರಿಗೆ ಇದು ಅತಿ ಉಪಯೋಗವಾಗಲಿದೆ. ಈ ಎಲ್ಲ ಸಾಧನಗಳಿಗೆ ವಿಶೇಷ ವಿಳಾಸ ಯೋಜನೆಯ ಅಗತ್ಯವಿರುತ್ತದೆ. ಇದಕ್ಕಾಗಿ ಐಪಿವಿ6 ಸೂಕ್ತವಾಗಿದೆ. ಇದು ಹೆಚ್ಚಿನ ಭದ್ರತಾ ಮಟ್ಟವನ್ನು ಹೊಂದಿದೆ.
ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಇತರ ಅಪ್ಲಿಕೇಷನ್‌ಗಳನ್ನು ಹೆಚ್ಚಿನ ಭದ್ರತಾ ವೈಶಿಷ್ಟéಗಳೊಂದಿಗೆ ನಿಯೋಜಿಸಲು ಬಹಳ ಸಹಾಯಕವಾಗುತ್ತದೆ ಎಂದು ಬಿಎಸ್‌ಎನ್‌ಎಲ್ ಪ್ರಕಟಣೆ ತಿಳಿಸಿದೆ. ಈ ಸೇವೆಯನ್ನು ಸೆ.5ರಿಂದ ಬೆಂಗಳೂರಿನಿಂದ ಆರಂಭಿಸಲಾಗಿದೆ. ಮುಂದಿನ ಕೆಲವೇ ವಾರದಲ್ಲಿ ದೇಶಾದ್ಯಂತ ಎಲ್ಲಾ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್ ಕರ್ನಾಟಕದ ಮುಖ್ಯ ಮಹಾ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ತಿಳಿಸಿದರು.
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಟ್ರಿಪಲ್-ಪ್ಲೇ ಸೇವೆಗಳನ್ನು ತರುತ್ತಿದೆ. ಇದರಲ್ಲಿ ವಿಡಿಯೋ ಮನೋರಂಜನೆ, ಸಂಗೀತ, ಇಂಟರ್‌ನೆಟ್ ಮತ್ತು ಅನಿಯಮಿತ ಧ್ವನಿ ಕರೆಗಳ ಸೌಲಭ್ಯದೊಂದಿಗೆ ಭಾರತ್ ಫೈಬರ್ ಅಥವಾ ಕಾಪರ್ ಲೈನ್ ಬ್ರಾಡ್ ಬ್ರ್ಯಾಂಡ್‌ನ ಸಂಪರ್ಕಗಳಲ್ಲಿ ಸೌಲಭ್ಯವಿರುತ್ತದೆ. ಆಂಧ್ರಪ್ರದೇಶ ಸರ್ಕಲ್‌ನಿಂದ ಪೈಲಟ್ ಆಧಾರದ ಮೇಲೆ ಈ ಸೇವೆ ಆರಂಭಿಸಲಾಗುತ್ತಿದ್ದು, ವರ್ಷಾಂತ್ಯದ ವೇಳೆಗೆ ದೇಶದ ಇತರ ಭಾಗಗಳಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.