ಶ್ರೀ ಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೋತ್ಸವಕ್ಕೆ ಚಾಲನೆ

Team Udayavani, Jun 1, 2019, 3:04 AM IST

srikrish

ಉಡುಪಿ: “ದೇವರಿಗೆ ಸಂಪತ್ತುಗಳಾವುವೂ ಬೇಡ. ಆತನನ್ನು ನಿತ್ಯತೃಪ್ತ ಎಂದು ಭಕ್ತಪ್ರಹ್ಲಾದನೇ ಪುರಾಣದಲ್ಲಿ ಬಣ್ಣಿಸಿದ್ದಾನೆ. ಆದರೆ ನಾವು, ನಮ್ಮ ಆತ್ಮವಿಕಾಸಕ್ಕಾಗಿ ಭಗವಂತನನ್ನು ವೈಭವದಿಂದ ಪೂಜಿಸಬೇಕು’ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಸುವರ್ಣ ಗೋಪುರ ಸಮರ್ಪಣೋತ್ಸವದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, “ಭಗವಂತ ನಿತ್ಯ ತೃಪ್ತನಾದ ಕಾರಣ ದೇವರಿಗೆ ನಾವು ಕೊಟ್ಟದ್ದರ ಬಗ್ಗೆ ಅಹಂಭಾವ ತಾಳಬಾರದು’ ಎಂದರು.

ದೇಹವನ್ನು ಅಲಂಕರಿಸಿ ಕನ್ನಡಿಯಲ್ಲಿ ನೋಡಿದರೆ ಅಲಂಕೃತವಾಗಿಯೇ ಕಾಣುತ್ತದೆ. ದೇಹದ ಬದಲು ಕನ್ನಡಿಯನ್ನು ಅಲಂಕರಿಸಿದರೆ ನಿಷ್ಪ್ರಯೋಜಕ. ಭಗವಂತ ಬಿಂಬಸ್ವರೂಪಿಯಾಗಿದ್ದು, ನಾವು ಪ್ರತಿಬಿಂಬ ಸ್ವರೂಪರು. ಆದ್ದರಿಂದ ಭಗವಂತನನ್ನು ವೈಭವಪೂರ್ಣವಾಗಿ ಕಾಣಬೇಕು ಎಂದರು.

ಶ್ರೀಕೃಷ್ಣ ಚಿಣ್ಣ. ಆತನ ಗರ್ಭಗುಡಿಗೆ ಚಿನ್ನದ ಗೋಪುರವನ್ನು ನಿರ್ಮಿಸುವುದಕ್ಕೆ ಬಹಳ ಧೈರ್ಯ, ಭಗವತ್ಪ್ರೇಮ ಬೇಕು. ಭಕ್ತರಾದ ನಾವು ಹೃದಯಗರ್ಭದಲ್ಲಿ ದೇವರನ್ನು ಪ್ರಕಟಿಸುತ್ತೇವಾದ ಕಾರಣ ನಾವು ಮಾತಾಪಿತೃಗಳಂತೆ. ಇಂತಹ ಗುಣಗಳು ಪಲಿಮಾರು ಶ್ರೀಗಳಲ್ಲಿ ಇರುವುದರಿಂದ ಅವರು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡು ಸಫ‌ಲವಾಗಿಸಿದ್ದಾರೆ ಎಂದು ಪೇಜಾವರ ಶ್ರೀಗಳು ಬಣ್ಣಿಸಿದರು.

ಸಮಾರಂಭ ಉದ್ಘಾಟಿಸಿದ ಶ್ರೀಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು, ಶ್ರೀಮದಾನಂದತೀರ್ಥ ಭಗವತ್ಪಾದರೇ ಸುವರ್ಣಮಯರು. ಅವರ ಸನ್ನಿಧಾನದಲ್ಲಿರುವ ಶ್ರೀ ಪಲಿಮಾರು ಸ್ವಾಮೀಜಿಯವರು ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಸಮರ್ಪಿಸುವುದು ಸಮುಚಿತವಾದುದು ಎಂದರು.

ಭಗವದ್ಭಕ್ತರ ಸಹಕಾರದಿಂದ ಸುವರ್ಣ ಗೋಪುರದ ಸಮರ್ಪಣೆ ನಡೆಯುತ್ತಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು. ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಶುಭಕೋರಿದರು.

ಮೊಮ್ಮಗನ ಉಪಸ್ಥಿತಿ, ಪಿತಾಮಹನ ಸ್ಮರಣೆ: ಉದ್ಘಾಟನಾ ಸಮಾರಂಭಕ್ಕೆ ರಾಮೇಶ್ವರದ ರಾಮನಾಥಪುರ ಮನ್ನಾರ್‌ ಆದಿಮಹಾಸಂಸ್ಥಾನದ ಕುಮಾರನ್‌ ಸೀತುಪತಿ ಅರಸರು ಆಗಮಿಸಿದಾಗ, ಅವರ ಅಜ್ಜನ ಸ್ಮರಣೆಯನ್ನು ಪೇಜಾವರ ಶ್ರೀಗಳು ನಡೆಸಿದರು.

ಸ್ವಾತಂತ್ರ್ಯಪೂರ್ವದಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರು ಮದ್ರಾಸ್‌ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕರಾವಳಿ ಪ್ರದೇಶ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗ ಈಗಿನ ಅರಸರ ಅಜ್ಜ ಷಣ್ಮುಖ ರಾಜೇಶ್ವರ ಸೀತುಪತಿಯವರು ರಾಜಗೋಪಾಲಾಚಾರಿಯವರ ಸಂಪುಟದಲ್ಲಿ ಮಂತ್ರಿಯಾಗಿದ್ದರು.

ಹೀಗಾಗಿ ಅವರ ಸೇವೆ ಈ ಪ್ರದೇಶಕ್ಕೂ ಸಂದಿತ್ತು ಎಂದು ಪೇಜಾವರ ಶ್ರೀಗಳು ಹೇಳಿದರು. ಕುಮಾರನ್‌ ಸೀತುಪತಿಯವರು ರಾಮೇಶ್ವರದ ಕೋಟಿತೀರ್ಥ ಮತ್ತು ರಾಮೇಶ್ವರದ ಶಂಖವನ್ನು ಸ್ವಾಮೀಜಿಯವರಿಗೆ ಸಮರ್ಪಿಸಿದರು.

ಟಾಪ್ ನ್ಯೂಸ್

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.