![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 2, 2018, 8:34 AM IST
ಬೆಂಗಳೂರು: ಸಂತೇಮರಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಟೀಕಿಸಿದ್ದ ಬೆನ್ನಲ್ಲೇ ಟ್ವಿಟರ್‌ನಲ್ಲಿ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಮಾರುತ್ತರ ನೀಡಿದ್ದಾರೆ. ಪ್ರಧಾನಿ
ಹೇಳಿಕೆ ಹಾಗೂ ಸಿಎಂ, ಕಾಂಗ್ರೆಸ್ ಉತ್ತರವೂ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
“”ಮಿಸ್ಟರ್ ಪಿಎಂ ನರೇಂದ್ರ ಮೋದಿಯವರೇ, ಸೋಲಿನ ಭೀತಿ ನಿಮ್ಮನ್ನು ವಾರಾಣಸಿ ಹಾಗೂ ವಡೋದರಾ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ದೂಡಿತೇ? 56 ಇಂಚಿನ ಎದೆಯವರಾದ ನೀವು ಇದಕ್ಕಿಂತಲೂ ಉತ್ತಮ
ಚುತುರ ವಿವರಣೆ ನೀಡಬಹುದಿತ್ತು. ಎರಡು ಕ್ಷೇತ್ರಗಳಲ್ಲಿ ನನ್ನ ಸ್ಪರ್ಧೆ ವಿಚಾರ ಬಿಡಿ ಸಾರ್. ವಾಸ್ತವಿಕವಾಗಿ ನಿಮ್ಮ ಪಕ್ಷ ರಾಜ್ಯದಲ್ಲಿ 60-70ಕ್ಕಿಂತ ಹೆಚ್ಚು ಸ್ಥಾನ ಮೀರದಿರುವ ಬಗ್ಗೆ ಚಿಂತಿಸಿ’ ಎಂದು ತಿರುಗೇಟು ನೀಡಿದ್ದಾರೆ. ಇಷ್ಟಕ್ಕೆ
ನಿಲ್ಲಿಸದೇ, ಸರಣಿ ಟ್ವೀಟ್‌ಗಳ ಮೂಲಕ ಮೋದಿ ಅವರನ್ನು ಕೆಣಕಿದ್ದಾರೆ.
2+1= 2 ರೆಡ್ಡಿಗಳು +1 ಯಡ್ಡಿ: ಟ್ವಿಟರ್ ವಾರ್‌ಗೆ ಕರ್ನಾಟಕ ಕಾಂಗ್ರೆಸ್ ಕೂಡ ಕೈಜೋಡಿಸಿದ್ದು, “ಬಿಜೆಪಿಯ ಭ್ರಷ್ಟಾಚಾರ ಸೂತ್ರ ಕರ್ನಾಟಕವನ್ನು ಲೂಟಿ ಮಾಡುವುದಾಗಿದೆ. 2+1= 2 ರೆಡ್ಡಿಗಳು +1 ಯಡ್ಡಿ. ಈ ಸೂತ್ರದ ಬಗ್ಗೆ ಏಕೆ ಮಾತನಾಡುವುದಿಲ್ಲ ಮೋದಿಯವರೇ’ ಎಂದು ಪ್ರಶ್ನಿಸಿದೆ. ಇದನ್ನು ರೀ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ರೆಡ್ಡಿ ಸಹೋದರರ ವಿರುದ್ಧದ ಪ್ರಕರಣಗಳನ್ನು ಸಮಾಪ್ತಿಗೊಳಿಸುವುದರಲ್ಲಿ ನಿಮ್ಮ ಸಹಭಾಗಿತ್ವ ಇರುವ ಬಗ್ಗೆ
ಮಾತನಾಡದೇ 2+1 ಬಗ್ಗೆ ಹೇಳುತ್ತೀರಿ’ ಎಂದಿದ್ದಾರೆ.
ಚುನಾವಣೆ ಗೆಲ್ಲುವ ಅವರ 2+1 ಸೂತ್ರವು 2ರೆಡ್ಡಿ +1ಯಡ್ಡಿ’ ಎಂದಿದ್ದಾರೆ. ಅಲ್ಲದೆ, ನನಗೆ ನನ್ನ ಬಗ್ಗೆ ಗೊತ್ತಿಲ್ಲ. ಆದರೆ, ಪ್ರಧಾನಿ ಸರ್ ಅವರೇ ನಿಮ್ಮ ಬಳಿ 2+1 ಇದೆ’ ಎಂದು ಕೆಣಕಿದ್ದಾರೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.