ಕಾನೂನಿನ ಬೆಂಬಲ? ಕನಿಷ್ಠ ಬೆಂಬಲ ಬೆಲೆ “ಶಾಸನಬದ್ಧ ಕನಿಷ್ಠ ಬೆಲೆ’
ರಾಜ್ಯ ಸರಕಾರಕ್ಕೆ ಕೃಷಿ ಬೆಲೆ ಆಯೋಗ ಶಿಫಾರಸು
Team Udayavani, Nov 24, 2021, 6:15 AM IST
ಬೆಂಗಳೂರು: ರಾಜ್ಯ ಕೃಷಿ ಬೆಲೆ ಆಯೋಗವು ಕನಿಷ್ಠ ಬೆಂಬಲ ಬೆಲೆಯನ್ನು “ಶಾಸನ ಬದ್ಧ ಕನಿಷ್ಠ ಬೆಲೆ’ ಎಂದು ಘೋಷಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ಸಂಬಂಧಿಸಿ ಅಗತ್ಯ ಕಾನೂನು ರೂಪಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡುವಂತೆಯೂ ಶಿಫಾರಸು ಮಾಡಿದೆ.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಯಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತು ಸ್ಥಿತಿ ಹಾಗೂ ರೈತರು-ಗ್ರಾಹಕರ ನಡುವಿನ ಬೆಲೆ ಪ್ರಸರಣ ವಿಶ್ಲೇಷಣೆ ಜತೆಗೆ ಪ್ರಮುಖ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದ್ದಾರೆ.
ನಿರ್ದಿಷ್ಟ ಬೆಲೆ ನಿಗದಿಪಡಿಸಿ
ಕೇಂದ್ರ ಸರಕಾರ ನೀಡು ತ್ತಿರುವ ಬೆಂಬಲ ಬೆಲೆ ಯೋಜನೆಯನ್ನು ಕಾನೂನು ಬದ್ಧ ಗೊಳಿಸಿ, ಕೈಗಾರಿಕೆ ಉತ್ಪನ್ನಗಳ ಬೆಲೆ ಮಾದರಿ ಯಲ್ಲಿ ರೈತರ ಉತ್ಪನ್ನಗಳಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಬೇಕು. ಇದಕ್ಕಾಗಿ ಬೆಂಬಲ ಬೆಲೆ ಯೋಜನೆ ಯನ್ನೇ ಕಾನೂನುಬದ್ಧಗೊಳಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ತಿಳಿಸಲಾಗಿದೆ.
10 ಸಾವಿರ ರೂ.ಗಳಿಗೆ ಹೆಚ್ಚಿಸಿ
ಕೇಂದ್ರ ಸರಕಾರವು ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ನೀಡುತ್ತಿರುವ 6 ಸಾವಿರ ರೂ.ಗಳನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಿ ಎರಡು ಕಂತುಗಳಲ್ಲಿ ರೈತರ ಖಾತೆಗೆ ಹಾಕುವುದು, ರಾಜ್ಯ ಸರಕಾರ ನೀಡುತ್ತಿರುವ 4 ಸಾವಿರ ರೂ.ಗಳನ್ನು 6 ಸಾವಿರ ರೂ.ಗಳಿಗೆ ಹೆಚ್ಚಿಸಿ ಎರಡು ಕಂತುಗಳಲ್ಲಿ ರೈತರ ಖಾತೆಗಳಿಗೆ ವರ್ಗಾಯಿಸುವಂತೆ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ:ನ.27ಕ್ಕೆ ಕರ್ನಾಟಕ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜಿಎಸ್‌ಟಿ ಸಭೆ
ಅಂತಾರಾಷ್ಟ್ರೀಯ ಬೇಡಿಕೆ ಮತ್ತು ಪೂರೈಕೆ ಬಗ್ಗೆ ರೈತರಿಗೆ ತಿಳಿಸಿ, ಆಹಾರ ಉತ್ಪನ್ನ ರಪು¤ ಉತ್ತೇಜನಕ್ಕೆ ಅಗತ್ಯ ತರಬೇತಿ ನೀಡಬೇಕು. ಕೇಂದ್ರ ಸರಕಾರದ ಕೌಶಲ ಭಾರತ ಯೋಜನೆ ಯಡಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಆಹಾರ ಸಂಸ್ಕರಣ ವಲಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ, ಗ್ರಾಮೀಣ ಮಟ್ಟದಲ್ಲಿಯೇ ಅಳವಡಿಸಲು ಶಿಫಾರಸು ಮಾಡಲಾಗಿದೆ. ಅದಕ್ಕಾಗಿ ಎಫ್ಪಿಒ, ಎಂಪಿಸಿಎಸ್, ಟಿಎಪಿಸಿಎಂಎಸ್, ಪ್ಯಾಕ್ಸ್‌ಗಳನ್ನು ಪ್ರೋತ್ಸಾಹಿಸುವಂತೆಯೂ ಶಿಫಾರಸು ಮಾಡಲಾಗಿದೆ.
ಕೆಂಪಕ್ಕಿ, ಗೋಡಂಬಿಗೆ ಜಿಐ ಟ್ಯಾಗ್
ಕರಾವಳಿ ಕರ್ನಾಟಕದ ಕೆಂಪಕ್ಕಿ ತಳಿಗಳು, ಮಂಗಳೂರು ಗೋಡಂಬಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸೋನಾಮಸೂರಿ, ವಿಜಯಪುರದ ಒಣ ದ್ರಾಕ್ಷಿ, ಮಳೆನಾಡಿನ ಕಾಳುಮೆಣಸು ಬೆಳೆಗಳಿಗೆ ಭೌಗೋಳಿಕ ಸೂಚ್ಯಂಕ (ಜಿಐ) ಪಡೆಯಲು ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳಿಗೆ ಜವಾಬ್ದಾರಿ ವಹಿಸುವಂತೆ ಶಿಫಾರಸು ಮಾಡಲಾಗಿದೆ. “ಒಂದು ಜಿಲ್ಲೆ -ಒಂದು ಉತ್ಪನ್ನ’ ಮಾದರಿಯಲ್ಲಿ ನಿರ್ದಿಷ್ಟ ಬೆಳೆಗಳಿಗೆ ಕ್ಲಸ್ಟರ್ ನಿರ್ಮಾಣ ಮಾಡುವಂತೆಯೂ ಸಲಹೆ ನೀಡಲಾಗಿದೆ.
ಪ್ರಮುಖ ಶಿಫಾರಸುಗಳು
-ಸಮಗ್ರ ಕೃಷಿ ಪದ್ಧತಿ ಅಳವಡಿಸಿ ರೈತನ ಆದಾಯ ಹೆಚ್ಚಳ.
– ಬೆಳೆ ವಿಮೆ ಕಡ್ಡಾಯ. ವಿಮೆ ಮೊತ್ತ ಕೃಷಿ ಸಮ್ಮಾನ್ ಯೋಜನೆಯಿಂದ ಭರ್ತಿ.
– ರಫ್ತು ಉತ್ತೇಜಿಸಲು ಅಂತಾರಾಷ್ಟ್ರೀಯ ಮಾರು ಕಟ್ಟೆ ಬಗ್ಗೆ ರೈತರಿಗೆ ಮಾಹಿತಿ.
-ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕಾಡಿನಲ್ಲಿ ಗೆಡ್ಡೆ ಗೆಣಸು ಮತ್ತು ಹಣ್ಣು ಹಂಪಲು ಗಿಡ ಬೆಳೆಸುವುದು.
-ಕೃಷಿ ಉತ್ಪನ್ನಗಳ ಬೆಲೆಯು ಕೈಗಾರಿಕೆ ಉತ್ಪನ್ನ ಗಳ ಬೆಲೆಗೆ ಕಡಿಮೆ ಇರದಂತೆ ನೋಡಿಕೊಳ್ಳಬೇಕು.
– ರೈತರಿಗೆ ಬೀಜ ಬಿತ್ತನೆ ಬಗ್ಗೆ ಸೂಕ್ತ ಮಾಹಿತಿ.
-ಹೆಚ್ಚು ಇಳುವರಿ ಕೊಡುವ ರೋಗ ನಿರೋಧಕ ಶಕ್ತಿ ಇರುವ ಬೀಜ ಪೂರೈಕೆ.
– ಯಾಂತ್ರೀಕೃತ ಬೇಸಾಯಕ್ಕೆ ಪ್ರೋತ್ಸಾಹ.
– ರೈತರಿಗೆ ಕಡಿಮೆ ಬೆಲೆಯಲ್ಲಿಯಂತ್ರೋಪ ಕರಣಗಳು ಸಿಗುವಂತೆ ಕ್ರಮ.
-“ಹೊಲಕ್ಕೊಂದು ಕೆರೆ’ ಆಂದೋಲನ.
-ಎಸ್ಸಿ, ಎಸ್ಟಿಗೆ ಶೇ. 50ರಷ್ಟು ಮತ್ತು ಸಾಮಾನ್ಯ ವರ್ಗದವರಿಗೆ ಶೇ. 25ರಷ್ಟು ಸಬ್ಸಿಡಿ ನೀಡುವುದು
-ಮಣ್ಣಿನ ಫಲವತ್ತತೆ ಹೆಚ್ಚಿಸಲು ಭೂಮಿಗೆ ಹಸುರೆಲೆ ಮುಚ್ಚಿಗೆ ಕಡ್ಡಾಯ.
-ರೈತರ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲು ಎಲ್ಲ ವಿ.ವಿ.ಗಳಲ್ಲಿ ರೈತ ಆವಿಷ್ಕಾರ ನಿಧಿ ಸ್ಥಾಪನೆ.
-ಕೃಷಿ ಯಂತ್ರ ಖರೀದಿಗೆ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಶೇ. 90 ರಿಯಾಯಿತಿ.
ಸ್ವಾವಲಂಬಿ ಕರ್ನಾಟಕ ಕ್ಕಾಗಿ ಪಡಿತರ ವ್ಯವಸ್ಥೆಗೆ ರಾಜ್ಯದ ಉತ್ಪನ್ನ ಖರೀದಿ ಸಲು ಶಿಫಾರಸು ಮಾಡಿದ್ದೇವೆ. ಇದ ರಿಂದ ಸ್ಥಳೀಯ ಆಹಾರ ಪದ್ಧತಿಗೂ ಆದ್ಯತೆ ನೀಡಿದಂತಾಗುತ್ತದೆ.
– ಹನುಮನಗೌಡ ಬೆಳಗುರ್ಕಿ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ
ಕೃಷಿ ಬೆಲೆ ಆಯೋಗ ಸಲ್ಲಿಸಿರುವ ವರದಿ ಮತ್ತು ಶಿಫಾರಸುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ರೈತರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಕರಾವಳಿಯ ಕೆಂಪಕ್ಕಿ ತಳಿಗಳು ಬೆಳೆಯುವ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿ ತಮ್ಮದೇ ಆದ ಗುಣ, ರುಚಿ, ವಿಶೇಷ ಪೌಷ್ಟಿಕಾಂಶಗಳನ್ನು ಹೊಂದಿವೆ. ಇಲ್ಲಿಯ ಭೌಗೋಳಿಕ ಪ್ರದೇಶ, ಸನ್ನಿವೇಶದಲ್ಲಿ ಬೆಳೆದರಷ್ಟೇ ಈ ಎಲ್ಲ ಗುಣ ಹೊಂದಿರಲು ಸಾಧ್ಯ. ಸರಕಾರದಿಂದ ಮಾನ್ಯತೆ ದೊರೆತಲ್ಲಿ ಸಬ್ಸಿಡಿ ಇತ್ಯಾದಿ ಸೌಕರ್ಯ ಪಡೆಯಲು, ಜಾಗತಿಕವಾಗಿ ಮನ್ನಣೆ ಗಳಿಸಲು ಅನುಕೂಲವಾಗುತ್ತದೆ.
– ಡಾ| ಎಂ.ಕೆ. ನಾಯಕ್, ಕುಲಪತಿಗಳು, ಕೃಷಿ ಮತ್ತು ತೋಟಗಾರಿಕೆ ವಿ.ವಿ., ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು