English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ವಚನ ಸಾಹಿತ್ಯದ ಸಂರಕ್ಷಣೆ ಸೇರಿ ಹಲವು ವಿಚಾರ ಬಿಚ್ಚಿಟ್ಟ ಗೊರುಚ
Team Udayavani, Dec 22, 2024, 6:52 AM IST
ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ
ಮಂಡ್ಯ: ಇಂಗ್ಲಿಷ್ ಯಾವುದೇ ಕಾರಣಕ್ಕೂ ಶಿಕ್ಷಣದ ಮಾಧ್ಯಮವಾಗಬಾರದು. ಅದು ತರಬೇತಿ ಮಾಧ್ಯಮ ವಾಗಿರಬೇಕು. ದ್ವಿಭಾಷಾ ಸೂತ್ರವೇ ಕ್ಷೇಮ ಎಂಬುದು ನನ್ನ ಮಾತಾಗಿದೆ ಎಂದು ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪ ಹೇಳಿದರು.
ಸಂಜೆ ಪ್ರಧಾನ ವೇದಿಕೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಆರೋಗ್ಯದ ಗುಟ್ಟು, ವಚನ ಸಾಹಿತ್ಯದ ಸಂರಕ್ಷಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಿಚ್ಚಿಟ್ಟರು. ತ್ರಿಭಾಷಾ ಸೂತ್ರವನ್ನು ಯಾವುದೇ ಕಾರಣಕ್ಕೂ ನಮ್ಮ ದೇಶಕ್ಕೆ ಹೇರಬಾರದು. ದ್ವಿಭಾಷಾ ಸೂತ್ರವೇ ಕ್ಷೇಮ ಎಂಬುವುದು ನನ್ನ ಮಾತಾಗಿದೆ ಎಂದರು.
ಸಂವಾದ ಕಾರ್ಯಕ್ರಮವನ್ನು ಹಿರಿಯ ಜಾನಪದ ವಿದ್ವಾಂಸರಾದ ಡಾ| ಕೆ.ಆರ್. ಸಂಧ್ಯಾರೆಡ್ಡಿ ಸೇರಿ ಮತ್ತಿತ ರರು ನಡೆಸಿಕೊಟ್ಟರು. ಗೊರುಚ ಅವರ ಸಂವಾದದ ಮಾತುಗಳು ಇಲ್ಲಿವೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಗಿ ಹಳ್ಳಿಗಳಲ್ಲಿ ತಿರುಗಿದ್ದೀರಿ. ಸರಕಾರ ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸುವ ಜವಾಬ್ದಾರಿ ನಿಮಗೆ ವಹಿಸಿದೆ. ನಿಮ್ಮ ಆರೋಗ್ಯದ ಗುಟ್ಟೇನು?
ಮಿತ ಆಹಾರವೇ ನನ್ನ ಆರೋಗ್ಯದ ಗುಟ್ಟು. ನನಗೆ ಜೋತಿಷಿಯೊಬ್ಬರು ಹೇಳಿದ್ದಾರೆ. ನೀವು 100 ವರ್ಷ ಬದುಕುತ್ತೀರಿ ಎಂದು. ಅವರ ಭವಿಷ್ಯ ಸುಳ್ಳಾಗಬಾರದೆಂದು ನಡೆದುಕೊಳ್ಳುತ್ತಿದ್ದೇನೆ. ಸಾವಿಗೆ ಹೆದರುವು ದಿಲ್ಲ. ಭಾರತ ಬಹುಸಂಸ್ಕೃತಿಯ, ಬಹು ಭಾಷೆಗಳ ದೇಶ ವಾಗಿದೆ. ಈ ಪರಂಪರೆ, ಪದ್ಧತಿ, ಜೀವನ ಪದ್ಧತಿ ಯನ್ನು ಭಾಷೆಗಳನ್ನು ಉಳಿಸಿಕೊಂಡು ಹೋಗುವುದು ಇಂದಿನ ತಲೆಮಾರಿನ ಕರ್ತವ್ಯವಾಗಿದೆ. ಭಾರತದಲ್ಲಿ ಇಂದು ತಜ್ಞರ ಪ್ರಕಾರ 3000 ಭಾಷೆ ಇದೆ. ಒಂದೊಂದು ಭಾಷೆಗೆ, ಒಂದೊಂದು ಸಮುದಾಯ ವಿದ್ದು, ಅವುಗಳದ್ದೇ ಆದ ಸೌಂದರ್ಯವೂ ಇದೆ. ಅವುಗಳನ್ನು ಹಾಳು ಮಾಡಬಾರದು.
ರಾಜ್ಯದಲ್ಲಿ ಪಿಯುಸಿಯಲ್ಲಿ ದ್ವಿಭಾಷಾ ಸೂತ್ರ ವಿದ್ದು 2 ಭಾಷೆ ಆಯ್ಕೆ ಕೊಟ್ಟಿದ್ದರಿಂದ ಬಹಳಷ್ಟು ಮಂದಿ ಕನ್ನಡವನ್ನು ಕೈಬಿಡುತ್ತಿದ್ದಾರೆ. ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಬೇಕೇ?
ವೈಯಕ್ತಿಕವಾಗಿ ಹೇಳುವುದಾದರೆ ತ್ರಿಭಾಷಾ ಸೂತ್ರ ವನ್ನು ಯಾವುದೇ ಕಾರಣಕ್ಕೂ ನಮ್ಮ ದೇಶಕ್ಕೆ ಹೇರ ಬಾರದು. ಆಯಾ ದೇಶೀಯ ಮಾತೃಭಾಷೆಯಲ್ಲೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಆ ನಂತರ ಜಾಗತಿಕ ಸಂವಹನವಾಗಿರುವ ಇಂಗ್ಲಿಷ್ ಬಳಕೆಗೆ ಏನೂ ತೊಂದರೆಯಿಲ್ಲ. ವಿದ್ಯಾರ್ಥಿಗಳು ಆಸಕ್ತಿಯಿಂದ ಎಷ್ಟೂ ಭಾಷೆಗಳನ್ನಾದರೂ ಕಲಿಯಲಿ. ಕನ್ನಡ ಉಳಿಯಬೇಕಾದರೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಬರಬೇಕು. ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಿರದೇ ತರಬೇತಿ ಮಾಧ್ಯವಾಗಿರಬೇಕು.
ಸರಕಾರದ ಹಲವು ಅಕಾಡೆಮಿಗಳು ರಾಜಧಾನಿ ಯಲ್ಲೇ ಇದ್ದು, ಕೆಲವನ್ನಾದರೂ ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾಯಿಸಬಹುದಲ್ಲವೇ?
ನಾನು ಅನೇಕ ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ಸಚಿವಾಲಯದ ಕಚೇರಿಗಳು ಬೆಂಗಳೂರಿನಲ್ಲೇ ಇರಲಿ. ಆದರೆ ನಿರ್ದೇಶಕರ ಕಚೇರಿಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಬೇಕು. ಅಕಾಡೆಮಿಗಳು, ಪ್ರಾಧಿಕಾರಗಳನ್ನು ಆಯಾ ಭಾಗಕ್ಕೆ ಸ್ಥಳಾಂತರಿಸಬೇಕು. ಈ ನಿಟ್ಟಿನಲ್ಲಿ ಸರಕಾರ ಮತ್ತಷ್ಟು ಆಲೋಚಿಸಲಿ.
ವಚನ ಸಾಹಿತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವಲ್ಲಿ ವಿವಿಗಳ ಪಾತ್ರ ಹೇಗಿರಬೇಕು?
12ನೇ ಶತಮಾನದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯ ಲೋಕವು ಸೋಜಿಗದ ಸಾಹಿತ್ಯ. ಕ್ರಾಂತಿಕಾರ ವಿಚಾರ ಧಾರೆಯ ಸಾಹಿತ್ಯ ಅದರಲ್ಲಿ ಅಡಗಿದೆ. ಅವತ್ತಿನ ವ್ಯವಸ್ಥೆಗೆ ಬೇಸತ್ತು ಪ್ರತಿಭಟನೆಗೆ ಇಳಿದ ಸಾಧನ ಇದಾಗಿದೆ. ಆ ಸಾಹಿತ್ಯದ ಶೈಲಿ ಮತ್ತು ಪ್ರಚಾರ ಇದು ವರೆಗೂ ಆಗಿಲ್ಲ. ಸಾಹಿತ್ಯದ ಮೌಲ್ಯದ ದೃಷ್ಟಿಯಿಂದ ಸತ್ವದ ದೃಷ್ಟಿಯಿಂದ ಭಾಷಾ ಶೈಲಿ ಮತ್ತು ಸಂಪತ್ತಿನ ದೃಷ್ಟಿಯಿಂದ ವೈಚಾರಿಕಾ ಪ್ರಜ್ಞೆಯಿಂದ ಸಮೃದ್ಧವಾಗಿ ರು ವಂತಹ ವಚನ ಸಾಹಿತ್ಯವನ್ನು ನಮ್ಮ ವಿವಿಗಳು ಪ್ರಧಾನ ವಾದ ಅಧ್ಯಯನದ ವಸ್ತುಗಳನ್ನಾಗಿ ಮಾಡಿ ಕೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗು ವಂತ ವ್ಯವಸ್ಥೆಯನ್ನು ಬಸವ ಸಮಿತಿ ಮಾಡಿದೆ. 20-30 ಭಾಷೆಗಳಿಗೆ ವಚನಗಳನ್ನು ಅನು ವಾದ ಮಾಡಿಸಿದೆ. ಇಂತಹ ಕೆಲಸಗಳು ವ್ಯಾಪಕವಾಗಿ ನಡೆಯಬೇಕು. ನಮ್ಮ ವಿವಿಗಳು ವಚನ ಸಾಹಿತ್ಯದ ಬಗ್ಗೆ ಪ್ರಮುಖವಾದ ಅಧ್ಯಯನವನ್ನಾಗಿ ಮಾಡಬೇಕು.
ಸಂಬಂಧಗಳು ಹದಗೆಡುತ್ತಿರುವ ಈ ದಿನಗಳಲ್ಲಿ ಜನಪದ ಸಂಸ್ಕೃತಿ ಇವತ್ತಿನ ಸಮಾಜಕ್ಕೆ ಎಷ್ಟು ಅಗತ್ಯ ವಿದೆ ಎಂದೆನಿಸುತ್ತದೆ?
ಜನಪದ ಸಂಸ್ಕೃತಿಯನ್ನು ಮರು ಸ್ಥಾಪಿಸುವ ಅಗತ್ಯ ವಿಲ್ಲ, ಈಗ ಅದು ಸಾಧ್ಯವೂ ಇಲ್ಲ. ಆದರೆ, ಇಂದು ಬೇಕಾಗಿರುವುದು ಅದರ ಸಂರಕ್ಷಣೆ. ಹಳೆಯ ಪದ್ಧತಿಗಳನ್ನು ಇವತ್ತಿನ ಪರಿಸ್ಥಿತಿಯಲ್ಲಿ ಕೆಲವೊಂದನ್ನು ಬಳಸಲಿಕ್ಕೆ ಸಾಧ್ಯವಾಗದೇ ಹೋಗಬಹುದು. ಬೀಸುವ ಕಲ್ಲು ನಮ್ಮ ಜಾನಪದದ ವಸ್ತು. ಇವತ್ತು ಬೀಸುವ ಕಲ್ಲನ್ನು ಬಳಸಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಜನಪದ ಸಾಧನ, ಸಲಕರಣೆಗಳಿಗೆ ಆಚಾರ-ವಿಚಾರ ಗಳನ್ನು ಇವತ್ತಿನ ವೈಜ್ಞಾನಿಕ ನೆಲೆಯಲ್ಲಿ ತೆಗೆದುಕೊಳ್ಳಲು ಸಾಧ್ಯ ಎಂಬುದನ್ನು ಆಲೋಚನೆ ಮಾಡಿ ಬಳಸಬೇಕು. ಜನಪದ ಕಲೆಗಳಿಗೆ ಅವಕಾಶ ಕೊಟ್ಟರೆ ಅವುಗಳು ಬದುಕು ತ್ತವೆ. ಕಾರ್ಯಕ್ರಮ ಮಾಡುವಾಗ ಜನಪದ ಕಲಾವಿದರಿಗೆ ಅವಕಾಶ ಸಿಗಲಿ. ಆಗ ಕಲಾವಿದರು ತಮ್ಮ ಕಲೆಯನ್ನು ಉಳಿಸಿಕೊಳ್ಳುತ್ತಾರೆ. ಈ ಕೆಲಸ ಆಗಲೇಬೇಕು.
ಜನಪದ ವಿವಿಯು ನಿಮ್ಮ ಕನಸನ್ನು ನಸಾಗಿಸುವಲ್ಲಿ ಯಶಸ್ವಿಯಾಗಿದೆಯಾ?
ನಾನು ಜಾನಪದ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಸರಕಾರಕ್ಕೆ ನಾನು ಜನಪದ ವಿವಿ ಆಗಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದ್ದಕ್ಕೆ ಸರಕಾರ ಹಾವೇರಿಯಲ್ಲಿ ಜನಪದ ವಿವಿ ಸ್ಥಾಪಿಸಿತ್ತು. ಆ ವಿವಿ ಆರೋಗ್ಯಕರವಾದ ಕೆಲಸ ಮಾಡುತ್ತಿಲ್ಲ ಎಂಬ ಅಸಮಾಧಾನ ನನಗಿದೆ. ಹೀಗಾಗಿ ಇದನ್ನು ಜಗತ್ತೇ ಹೆಮ್ಮೆ ಪಡುವಂತೆ ಮತ್ತಷ್ಟು ಎತ್ತರಕ್ಕೆ ಬೆಳೆಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಮನವಿ ಮಾಡುತ್ತೇನೆ.
ಅವಧಿಗೆ ಮೊದಲೇ ಮೊಟಕು
ಸಂಜೆ 5.05ಕ್ಕೆ ನಿಗದಿಯಾಗಿದ್ದ ಅಧ್ಯಕ್ಷರ ಸಂವಾದ 1 ತಾಸು ತಡವಾಗಿ ಆರಂಭವಾಯಿತು. ಇದರಿಂದ ಸಮಯದ ಅಭಾವದಿಂದ ಸಂವಾದವನ್ನು ಬಹುಬೇಗ ಮೊಟಕುಗೊಳಿಸಲಾಯಿತು. ಕೆಲವು ಪ್ರಶ್ನೆಗಳಿಗೆ ಲಿಖೀತ ರೂಪದಲ್ಲಿ ಉತ್ತರಿಸುವುದಾಗಿ ಹೇಳಿ ಸಮ್ಮೇಳನಾಧ್ಯಕ್ಷರು ಅಲ್ಲಿಂದ ಹೊರಟರು.
ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.