ತುರ್ತು ಆರೋಗ್ಯ ಸೇವೆಗೆ ಅಪ್ರಂಟಿಸ್‌ಶಿಪ್ ಜಾರಿಯಾಗಲಿ
Team Udayavani, May 6, 2021, 7:20 AM IST
ಬೆಂಗಳೂರು: ಕೋವಿಡ್ ಸಮಸ್ಯೆಯಿಂದ ಸೃಷ್ಟಿಯಾಗುತ್ತಿರುವ ಆರೋಗ್ಯ ತುರ್ತು ಪರಿಸ್ಥಿತಿ ನಿಭಾವಣೆಗೆ ಆಸಕ್ತರಿಗೆ ನರ್ಸಿಂಗ್‌ನ ಮೂಲ ತರಬೇತಿ ನೀಡಿ ಅಪ್ರಂಟಿಸ್‌ಶಿಪ್ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಆಗ್ರಹ ವೈದ್ಯ ವಲಯದಿಂದ ಕೇಳಿಬರುತ್ತಿದೆ.
ರಾಜ್ಯದಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಒತ್ತಡ ವನ್ನು ನಿಭಾ ಯಿಸಲು ಈಗಿನ ವೈದ್ಯಕೀಯ ವ್ಯವಸ್ಥೆ ಹರ ಸಾಹಸ ಪಡುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನರ್ಸ್, ಪ್ಯಾರಾ ಮೆಡಿಕಲ್ ಹಾಗೂ ಮತ್ತಿತರ ಸಹಾ ಯಕ ಸಿಬಂದಿ ಕೊರತೆ ಕಾಡುತ್ತಿದೆ. ಹೀಗಾಗಿ ವೈದ್ಯ ಕೀಯ ಪರಿಭಾಷೆ ಅರ್ಥೈಸಿಕೊಳ್ಳಬಲ್ಲವರಿಗೆ ಹಾಗೂ ರೋಗಿಗಳಿಗೆ ಉಪಚಾರ ಮಾಡಬಲ್ಲವ ರಿಗೆ ಅಲ್ಪಾವಧಿ ತರಬೇತಿಗಳನ್ನು ನೀಡಿ, ಪ್ರಮಾಣ ಪತ್ರ ನೀಡುವುದಲ್ಲದೇ, ಅವ ರನ್ನು ಸಕ್ರಿಯವಾಗಿ ಕೋವಿಡ್ ಸೋಂಕಿತರ ಆರೈಕೆಗೆ ಬಳಸಿಕೊಳ್ಳಬೇಕು. ಈ ವ್ಯವಸ್ಥೆಯನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಸರಕಾರವೇ ನಿರ್ವ ಹಿಸ ಬೇಕು. ಖಾಸಗಿ ಆಸ್ಪತ್ರೆಗಳು ಹಾಗೂ ಸರಕಾರ ಜತೆಗೂಡಿ ಇವರಿಗೆ ಸಂಭಾವನೆ ನೀಡುವಂತಾಗ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಪ್ರಂಟಿಸ್‌ಶಿಪ್ ವ್ಯವಸ್ಥೆ :
ರಾಜ್ಯ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯದಲ್ಲಿ ಅಪ್ರಂಟಿಸ್‌ಶಿಪ್ ಕಾಯ್ದೆ 1961ರನ್ವಯ ಕೈಗಾರಿಕೆಗಳ ತುರ್ತು ಆವ್ಯಶ ಕತೆಗೆ ಅನುಗುಣವಾಗಿ ಅಪ್ರಂಟಿಸ್‌ಶಿಪ್ ಗಳನ್ನು ಅಲ್ಪಾವಧಿ ತರಬೇತಿ ನೀಡಿ ನೇಮಕ ಮಾಡಿಕೊಳ್ಳಬಹುದು. ಐಟಿಐ ಆದವರಿಗೆ ಕೈಗಾರಿಕೆಗಳಲ್ಲಿ ಅಪ್ರಂಟಿಶಿಪ್ ಅಡಿ ತರಬೇತಿ ನೀಡಲಾಗುತ್ತದೆ. ಆರೋಗ್ಯ ತುರ್ತು ಪರಿಸ್ಥಿತಿಗೆ ಅನ್ವಯವಾಗಿ ಅಲ್ಪಾವಧಿಯ ವೈದ್ಯಕೀಯ ತರಬೇತಿ ನೀಡಿ, ಕೊರೊನಾ ಆರೈಕೆಯ ಸೇವೆಗೆ ಹೆಚ್ಚೆಚ್ಚು ಯುವ ಪೀಳಿಗೆಯನ್ನು ಬಳಸುವುದು ಸೂಕ್ತ ಎಂದು ವೈದ್ಯಕೀಯ ಕ್ಷೇತ್ರದ ಅನುಭವಿಯೊಬ್ಬರು ಮಾಹಿತಿ ನೀಡಿದರು.
ಗುಣಮುಖರಾದವರ ಸೇವೆ :
ಕೋವಿಡ್ ಪಾಸಿಟಿವ್ ಬಂದು ಗುಣಮುಖ ಹೊಂದಿದವರಲ್ಲಿ ಆ್ಯಂಟಿ ಬಾಡೀಸ್(ಪ್ರತಿಕಾಯ ಗುಣ), ದೇಹದಲ್ಲಿ ನೈಸರ್ಗಿಕ ಸೃಷ್ಟಿಯಾಗಿರುವ ರೋಗನಿರೋಧಕ ಶಕ್ತಿಯೂ ಹೆಚ್ಚಿರುತ್ತದೆ. ಇಂಥವರನ್ನು ಸರಕಾರ ಕೋವಿಡ್ ಸೇವೆಗೆ ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಸಹಾಯಕರಾಗಿ ಅಥವಾ ಪೂರಕ ಸಿಬಂದಿಯಾಗಿಯೂ ಬಳಸಬಹುದು. ಮೂರು ತಿಂಗಳು ಅವರಿಗೆ ಕೊರೊನಾ ಬರುತ್ತದೆ ಎನ್ನುವ ಭಯವಿಲ್ಲ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ ಎಂಬ ಬಗ್ಗೆ ಸರ್ಕಾರಕ್ಕೆ ಸಲಹೆ ರೂಪದಲ್ಲಿ ನೀಡಿರುವುದಾಗಿ ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಮಾಹಿತಿ ನೀಡಿದರು.
ವೈದ್ಯರು, ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಪದವಿ ಪಡೆದು ವೃತ್ತಿ ಮಾಡದೇ ಇರುವವರು ಅಥವಾ ವೈದ್ಯರಾಗಿ ವಿದೇಶ ಗಳಲ್ಲಿ ಸೇವೆ ಸಲ್ಲಿಸಿ ವಾಪಸ್ ಬಂದಿರು ವವ ರಿಗೆ, ನರ್ಸಿಂಗ್ ಕೋರ್ಸ್ ಮುಗಿಸಿ ಶುಶ್ರೂಷಕ ರಾಗಿ ಸೇವೆ ಸಲ್ಲಿಸದೇ ಇರುವವರನ್ನು ನೇಮಕ ಮಾಡಿಕೊಂಡು, ಅಲ್ಪಾವಧಿಯ ನಿರ್ದಿಷ್ಟ ತರಬೇತಿ ನೀಡಿ, ತುರ್ತು ಸೇವೆಗೆ ಬಳಸಿಕೊಳ್ಳಬಹುದು. –ಡಾ.ಎಚ್.ಸುದರ್ಶನ್ ಬಲ್ಲಾಳ್‌ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆಗಳ ಸಮೂಹ
ನಾವು ಶೇ.50ರಷ್ಟು ಮಾನವ ಸಂಪನ್ಮೂಲ ಕೊರತೆ ಅನುಭವಿಸುತ್ತಿದ್ದೇವೆ. ಹೀಗಾಗಿ ವೈದ್ಯಕೀಯ ಪರಿಭಾಷೆ ಬಲ್ಲವರಿಗೆ ತರಬೇತಿ ನೀಡಿ, ಅರೆವೈದ್ಯಕೀಯ ಸಿಬಂದಿ ವರ್ಗಕ್ಕೆ ಸಹಾಯಕರಾಗಿ ನೇಮಿಸಬಹುದು. ಈ ಬಗ್ಗೆ ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ಮಾಹಿತಿ ನೀಡಿದ್ದೇವೆ. –ಡಾ.ಎಚ್.ಎಂ.ಪ್ರಸನ್ನ , ಅಧ್ಯಕ್ಷ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘ(ಫನಾ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.