ಸರ್ಕಾರ ಮಕ್ಕಳ ಭಾಗ್ಯವನ್ನೂ ನೀಡಲಿ!; ಸದನದಲ್ಲಿ ಹಾಸ್ಯಭರಿತ ಚರ್ಚೆ
Team Udayavani, Jul 3, 2018, 3:30 PM IST
ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಮಂಗಳವಾರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಯ ಕುರಿತಾಗಿ ಸ್ವಾರಸ್ಯಕರ ಹಾಸ್ಯಭರಿತ ಚರ್ಚೆ ನಡೆಯಿತು.
ಕಡೂರಿನ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ , ಇದಕ್ಕೆ ಕಾರಣ ಒಬ್ಬರಿಗೆ ಒಂದೇ ಮಗು. ಆ ಮಗು ಕಲಿತಾದ ಬಳಿಕ ಮತ್ತೆ ಮಕ್ಕಳಿಲ್ಲ ಎಂದರು.
ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ಕುಟುಂಬ ನಿಯಂತ್ರಣ ಯೋಜನೆಯೂ ಬೇಕು ಮಕ್ಕಳೂ ಬೇಕು ಅಂದ್ರೆ ಹೇಗಯ್ಯ ಅಂದರು.ಈ ವೇಳೆ ಸದನ ನಗೆ ಗಡಲಲ್ಲಿ ತೇಲಿತು.
ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ ಈ ಸಮ್ಮಿಶ್ರ ಸರ್ಕಾರ ಮಕ್ಕಳ ಭಾಗ್ಯ ಯೋಜನೆಯನ್ನೂ ಕರುಣಿಸಲಿ ಎಂದರು. ಆಗ ಸದನದಲ್ಲಿದ್ದ ಕಾಂಗ್ರೆಸ್ ಸದಸ್ಯರು ಕೇಂದ್ರ ಸರ್ಕಾರಕ್ಕೆ ಹೇಳಿ ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.