ಮಠಮಾನ್ಯಗಳಿಗೆ ಅನುದಾನ ನೀಡುವುದನ್ನು ಸರ್ಕಾರ ಬಿಡಲಿ: ಮರಿತಿಬ್ಬೇಗೌಡ
Team Udayavani, Sep 22, 2022, 9:08 PM IST
ವಿಧಾನ ಪರಿಷತ್ತು: ಸರ್ಕಾರ ದೇವಾಲಯ, ಪ್ರತಿಮೆ, ಮಠಗಳಿಗೆ ಹಾಗೂ ಜಾತಿ ಸಂಘಟನೆಗಳಿಗೆ ಸಾವಿರಾರು ಕೋಟಿ ರೂ.ಅನುದಾನ ನೀಡುವುದನ್ನು ಮೊದಲು ನಿಲ್ಲಿಸಲಿ. ಆ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಬಳಕೆ ಮಾಡಿಕೊಳ್ಳಲಿ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ನಿಯಮ 68ರ ಅಡಿಯಲ್ಲಿ ನಡೆದ ಅತಿವೃಷ್ಠಿ ಚರ್ಚೆಯ ವೇಳೆ ಮಾತನಾಡಿದ ಅವರು ಸರ್ಕಾರ ಈಗಾಗಲೇ ಮಠಗಳಿಗೆ ಮತ್ತು ಜಾತಿ ಸಂಘ-ಸಂಸ್ಥೆಗಳಿಗೆ ಕೋಟ್ಯಾಂತ ರೂ. ಅನುದಾನ ನೀಡುತ್ತಿದೆ. ಸರ್ಕಾರದ ಈ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ದೂರಿದರು.
ಜನರು ನೀಡುವ ತೆರಿಗೆಯನ್ನು ಮಠಗಳಿಗೆ ನೀಡುವುದು ಒಳ್ಳೆಯದಲ್ಲ. ಒಂದು ವೇಳೆ ನೀವು ನೀಡಲೇಬೇಕು ಎಂಬುವುದಾದರೆ ಅದನ್ನು ಮಠಗಳು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ನೀಡಿ. ಇದರಿಂದ ಮಕ್ಕಳ ಶಿಕ್ಷಣ ಕಲಿಕೆಗೆ ನೆರವಾಗಲಿದೆ. ಸರ್ಕಾರ ಮೊದಲ ಜಾತಿ ಸಂಘ ಸಂಸ್ಥೆಗಳಿಗೆ ಅನುದಾನ ನೀಡುವುದನ್ನು ಬಿಡಲಿ ಎಂದು ಸಲಹೆ ನೀಡಿದರು.
ಮಠ ಮಾನ್ಯಗಳಿಗೆ ಕೋಟ್ಯಾಂತ ರೂ. ಅನುದಾನ ನೀಡಿದರೆ ಚುನಾವಣೆ ವೇಳೆ ನಮಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆ ಸರ್ಕಾರಕ್ಕೆ ಇರಬಹುದು. ಆದರೆ ಜನರು ಪ್ರಜ್ಞಾವಂತರಿದ್ದಾರೆ ಚುನಾವಣೆ ವೇಳೆ ಡುಮ್ಕಿ ಹೋಡಿಸ್ತಾರೆ ನೋಡಿ ಎಂದು ಎಚ್ಚರಿಸಿದರು. ಮಠ ಮಾನ್ಯಗಳಿಗೆ ಅನುದಾನ ನೀಡುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.