ಎಲ್‌ಐಸಿಯ ನೂತನ ಯೋಜನೆ ಧನ್ ವರ್ಷ ಜಾರಿ
Team Udayavani, Oct 18, 2022, 10:47 PM IST
ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು ಧನ್ ವರ್ಷ ಎನ್ನುವ ನೂತನ ಯೋಜನೆ ಪರಿಚಯಿಸಿದೆ. ಈ ಯೋಜನೆಯು ಲಿಂಕ್ ಆಗಿಲ್ಲದ, ಭಾಗವಹಿಸಿದ, ವೈಯಕ್ತಿಕ, ಉಳಿತಾಯ, ಸಿಂಗಲ್ ಪ್ರಿಮಿಯಂ ಜೀವ ವಿಮಾ ಯೋಜನೆಯ ರಕ್ಷಣೆ ಮತ್ತು ಉಳಿತಾಯಗಳ ಸಂಯೋಜನೆಯಾಗಿದೆ.
ಪಾಲಿಸಿಯ ಅವಧಿಯಲ್ಲಿ ವಿಮಾ ದಾರರು ಮರಣ ಹೊಂದಿದರೆ, ಈ ಯೋಜನೆಯು ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುತ್ತದೆ. ವಿಮಾದಾರರಿಗೆ ಮೆಚೂರಿಟಿ ದಿನಾಂಕದಂದು ಖಾತರಿಪಡಿಸಿದ ಮೊತ್ತ ಒದಗಿಸುತ್ತದೆ.
ಈ ಯೋಜನೆಯಲ್ಲಿ ಮರಣೋತ್ತರ ಅನಂತರ ಖಾತ್ರಿ ವಿಮಾ ಮೊತ್ತ ಮತ್ತು ಮೂಲ ವಿಮಾ ಮೊತ್ತವನ್ನು ಹಿಂಪಡೆಯಲು ಅನುಕೂಲ ಮಾಡಿಕೊಟ್ಟಿದೆ.
ವಿಮಾದಾರರು 10 ಅಥವಾ 15 ವರ್ಷ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, 10 ವರ್ಷದ ಅವಧಿಗೆ ಕನಿಷ್ಠ 8 ವರ್ಷ ಮತ್ತು 15 ವರ್ಷದ ಅವಧಿಗೆ ಕನಿಷ್ಠ 3 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ವಯೋಮಿತಿ 35ರಿಂದ 60 ಆಗಿದ್ದು, ಸಾವಿನ ನಂತರ, ಕನಿಷ್ಠ ಖಾತ್ರಿ ಮೊತ್ತ 1.25 ಲಕ್ಷ ರೂ.ಆಗಿದ್ದು, ಗರಿಷ್ಠ ಮೂಲ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.
ಕೆಲವು ಷರತ್ತುಗಳ ಮೂಲಕ ಈ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಯೋಜನೆಗಳನ್ನು ಮಧ್ಯವರ್ತಿಗಳ ಮೂಲಕ ಆಫ್ಲೈನ್‌ನಲ್ಲಿ ಖರೀದಿಸಬಹುದು ಅಥವಾ ಆನ್‌ಲೈನ್‌ನಲ್ಲಿ ನೇರವಾಗಿ http://www.licindia.in ವೆಬ್‌ಸೈಟ್ ಮೂಲಕ ಖರೀದಿಸಬಹುದು.
ಹೆಚ್ಚಿನ ಮಾಹಿತಿಗಾಗಿ http://www.licindia ಅನ್ನು ಅಥವಾ ಯಾವುದೇ ಎಲ್‌ಐಸಿ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.