ಕಲಬುರಗಿ ಪಾಲಿಕೆ ಪೌರ ಕಾರ್ಮಿಕರಿಗೆ “ಜೀವವಿಮೆ’ ಭಾಗ್ಯ!
Team Udayavani, Aug 23, 2017, 8:55 AM IST
ಕಲಬುರಗಿ: ಇಲ್ಲಿಯ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ “ಜೀವವಿಮೆ’ ಭಾಗ್ಯ ದೊರಕಿಸಿದೆ. ಪೌರಕಾರ್ಮಿಕರಿಗೆ ಇಂತಹ ಯೋಜನೆಯನ್ನು ಜಾರಿಗೊಳಿಸಿರುವ ರಾಜ್ಯದಲ್ಲೇ ಪ್ರಥಮ ಮಹಾನಗರ ಪಾಲಿಕೆ ಇದಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿಗಳು ಜಾರಿಗೊಳಿಸಿರುವ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ (ವಿಮಾ) ಯೋಜನೆ ಹಾಗೂ
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪಾಲಿಸಿಯನ್ನು ಇಲ್ಲಿನ ಪಾಲಿಕೆ ಪೌರ ಕಾರ್ಮಿಕರ ಹೆಸರಿನಲ್ಲಿ ಈಗಾಗಲೇ ಮಾಡಿಸಿ ಪ್ರೀಮಿಯಂ ತುಂಬಲಾಗಿದೆ.
ಪೌರ ಕಾರ್ಮಿಕರಿಗೆ ಜೀವಕ್ಕೆ ಅಪಘಾತ ಎದುರಾದಲ್ಲಿ ಸಹಾಯಕ್ಕೆ ಬರುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ವಿಶೇಷ ಆಸಕ್ತಿ ವಹಿಸಿ ಈ ಯೋಜನೆ ಕಲ್ಪಿಸಿದ್ದಾರೆ. ಪೌರ ಕಾರ್ಮಿಕರಿಂದ ನಯಾ ಪೈಸೆ ಪಡೆಯದೆ
ಕಾರ್ಮಿಕರ ಕ್ಷೇಮಾಭಿವೃದಿಟಛಿ ನಿಧಿಯಡಿ ಇರುವ ಹಣವನ್ನೇ ಐದು ವರ್ಷಕ್ಕಾಗುವಷ್ಟು ಪ್ರೀಮಿಯಂ ಹಣವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಿ ಎಲ್ಲ ಕಾರ್ಮಿಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. 1024 ಪೌರ ಕಾರ್ಮಿಕರಿಗೆ ವರ್ಷಕ್ಕೆ 12
ರೂ. ಪ್ರೀಮಿಯಂ ತುಂಬುವ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪಾಲಿಸಿ ಮಾಡಿಸಿ 12 ಸಾವಿರ ರೂ.ಗಳನ್ನು ಈ ವರ್ಷದ ಪ್ರೀಮಿಯಂ ತುಂಬಿ ಬ್ಯಾಂಕ್‌ನಲ್ಲಿ 60 ಸಾವಿರ ರೂ. ಅಂದರೆ ಐದು ವರ್ಷದ ಪ್ರೀಮಿಯಂ ಹಣ ಜಮಾ
ಇಡಲಾಗಿದೆ. ಅದರಂತೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ (ವಿಮಾ) ಯೋಜನೆಯನ್ನು 300 ಪೌರ ಕಾರ್ಮಿಕರಿಗೆ 330ರೂ. ಪ್ರೀಮಿಯಂ ಮಾಡಿಸಿ ಈ ವರ್ಷ ಲಕ್ಷ ರೂ.ಗೂ ಹೆಚ್ಚು ಪ್ರೀಮಿಯಂ ತುಂಬಿ ಮುಂದಿನ ಐದು ವರ್ಷಗಳಿಗಾಗಿ 5 ಲಕ್ಷ ರೂ.ಗಳನ್ನು ಬ್ಯಾಂಕ್‌ನಲ್ಲಿ ಜಮಾ ಇಡಲಾಗಿದೆ.
ಕಾರ್ಮಿಕರು ಕೆಲಸ ಮಾಡುವಾಗ ಗಂಭೀರ ಗಾಯಗೊಂಡು ಕೈ ಕಾಲು ಕಳೆದುಕೊಂಡರೆ ಇಲ್ಲವೆ ಜೀವ ಕಳೆದುಕೊಂಡಲ್ಲಿ 2 ಲಕ್ಷ ರೂ. ಪರಿಹಾರ ದೊರೆಯುತ್ತದೆ. ಇದು ಬಡ ಪೌರ ಕಾರ್ಮಿಕರ ಕುಟುಂಬಕ್ಕೆ ಸ್ವಲ್ಪವಾದರೂ ಸಹಾಯವಾಗುತ್ತದೆ.
ಹುಮ್ಮಸ್ಸು ಹೆಚ್ಚಿದೆ: ಕೆಲವೊಮ್ಮೆ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತೇವೆ. ಒಮ್ಮೊಮ್ಮೆ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗುವ ಘಟನೆಗಳು ನಡೆದಿರುತ್ತವೆ. ಆದರೆ ಈಗ ನಮಗೆ ಜೀವವಿಮೆ (ಎಲ್‌ಐಸಿ) ಮಾಡಿಸಿರುವುದು ಸಂತಸ ತಂದಿದೆ. ಇದು ಕೆಲಸ ಮಾಡುವ ಹುಮ್ಮಸ್ಸು ಹೆಚ್ಚಿಸಿದೆ ಎಂದು ಪೌರ ಕಾರ್ಮಿಕರು ಅಭಿಪ್ರಾಯ ಪಟ್ಟಿದ್ದಾರೆ.
ಸರ್ಕಾರದಿಂದ ಈಗ ಬಂತು ಪತ್ರ: ಆರು ತಿಂಗಳ ಹಿಂದೆಯೇ ಪೌರ ಕಾರ್ಮಿಕರಿಗೆ ಜೀವ ಭಾಗ್ಯ ಯೋಜನೆ ಕಲ್ಪಿಸಲಾಗಿದೆ. ಆದರೀಗ ಸರ್ಕಾರ ಕಲಬುರಗಿ ಪಾಲಿಕೆಗೆ ಪತ್ರ ಬರೆದು ಪೌರ ಕಾರ್ಮಿಕರಿಗೆ ಜೀವವಿಮೆ ಭಾಗ್ಯ
ಕಲ್ಪಿಸಿ ಎಂಬುದಾಗಿ ತಿಳಿಸಿದೆ. ಇದಕ್ಕೆ ಪಾಲಿಕೆ ಆಯುಕ್ತರು, ಕಲಬುರಗಿ ಪಾಲಿಕೆಯಲ್ಲಿ ಈಗಾಗಲೇ ಕಾರ್ಯಾನುಷ್ಠಾನ ಮಾಡಲಾಗಿದೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ. ಪೌರ ಕಾರ್ಮಿಕರಿಗೆ ಬ್ಯಾಂಕ್ ಖಾತೆ ಮೂಲಕ ನೇರವಾಗಿ ಸಂಬಳ ಮಾಡುತ್ತಿರುವುದು ಸೇರಿ ಪೌರ ಕಾರ್ಮಿಕ ಸ್ನೇಹಿ ಯೋಜನೆ ಜಾರಿಗೆ ತಂದಿರುವ ಪಾಲಿಕೆಗೆ ಈಗ “ಜೀವವಿಮೆ ಭಾಗ್ಯ’
ಹೊಸದೊಂದು ಸೇರ್ಪಡೆ.
– ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.