ಬಿಜೆಪಿ ಶಾಸಕ ಯತ್ನಾಳಗೆ ಜೀವ ಬೆದರಿಕೆ; ರಕ್ಷಣೆಗೆ PM ಕಛೇರಿಗೆ ಮೊರೆ ಇಟ್ಟ ಯತ್ನಾಳ ಬೆಂಬಲಿಗ
Team Udayavani, Sep 4, 2020, 10:41 PM IST
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇವರನ್ನು ಹಾಡು ಹಗಲೇ ಕಡಿದು ಹತ್ಯೆ ಮಾಡುತ್ತೇನೆ ಎಂದು ಗೋಲಗುಮ್ಮಟ ಪೊಲೀಸ್ ಠಾಣಾ ಆವರಣದಲ್ಲಿ ವ್ಯಕ್ತಿಯೋರ್ವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಮತ್ತೊಂದೆಡೆ ಯತ್ನಾಳಗೆ ಜೀವ ಬೆದರಿಕೆ ಹಾಕಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ರಕ್ಷಣೆ ಕೋರಿ ಯತ್ನಾಳ ಬೆಂಬಲಿಗ ಪ್ರಧಾನಿ ಕಛೇರಿಗೆ ದೂರು ನೀಡಿರುವ ಬೆಳವಣಿಗೆ ನಡೆದಿದೆ.
ರಾಘು ಕಣಮೇಶ್ವರ ಎಂಬಾತ ಶಾಸಕ ಯತ್ನಾಳ ವಿರುದ್ಧ ಹತ್ಯೆ ಮಾಡುವ ಮಾತನಾಡಿದ ವ್ಯಕ್ತಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕಾನೂನು ಬಗ್ಗೆ ಮಾತನಾಡಿದರೆ ನಿನ್ನ ಮನೆ ಹೊಕ್ಕು ಕಡಿಯುತ್ತೇನೆ ಎಂದು ರಾಘು ಬೆದರಿಕೆ ಹಾಕಿದ್ದಾನೆ.
ನಗರದ ಅನಭಿವೃದ್ಧಿ ವಿಷಯವಾಗಿ ಶಾಸಕ ಯತ್ನಾಳ ಅವರ ವಿರುದ್ಧ ಮಾಧ್ಯಮಗಳ ಎದುರು ಹೇಳಿಕೆ ನೀಡಿದ ಕಾರಣಕ್ಕೆ ವಕೀಲ ಎಸ್.ಎಸ್. ಖಾದ್ರಿ ವಿರುದ್ಧ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಹಿನ್ನೆಲೆ ವಕೀಲ ಖಾದ್ರಿ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದಾಗ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ರಾಘು ಕಣಮೇಶ್ವರ ಎಂಬಾತ ಶಾಸಕ ಯತ್ನಾಳ ನಿನ್ನನ್ನು ಕಡಿಯುತ್ತೇನೆ ಎಂದು ಆಕ್ರೋಶ ಭರಿತವಾಗಿ ಮಾತನಾಡಿ ಬೆದರಿಕೆ ಹಾಕಿದ್ದಾನೆ.
ಬಿಜೆಪಿ ಶಾಸಕ ಯತ್ನಾಳ ವಿರುದ್ಧ ಹತ್ಯೆ ಮಾಡುವ ಬಹಿರಂಗ ಹೇಳಿಕೆ ನೀಡಿದರೂ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ, ಆರೋಪಿಗಗಳನ್ನು ಬಂಧಿಸಿಲ್ಲ. ಸಮಾಜ ಘಾತುಕ ಶಕ್ತಿಗಳಿಂದ ಶಾಸಕ ಯತ್ನಾಳ ಅವರ ಜೀವಕ್ಕೆ ಅಪಾಯವಿದೆ. ತುರ್ತಾಗಿ ರಕ್ಷಣೆ ನೀಡಬೇಕು ಹಾಗೂ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯತ್ನಾಳ ಬೆಂಬಲಿಗ ರಾಘವ ಅಣ್ಣೀಗೇರಿ ಪ್ರಧಾನಿ ಕಛೇರಿಗೆ ಸಾಮಜಿಕ ಜಾಲತಾಣದ ಮೂಲಕವೇ ದೂರು ನೀಡಿದ್ದಾರೆ.
ಶಾಸಕ ವಿರುದ್ಧ ಅನಗತ್ಯ ಆರೋಪ ಮಾಡಿರುವ ಸೈಯದ್ ಆಸೀಫುಲ್ಲಾ ಖಾದ್ರಿ ಎಂಬವರು ಸಮಾಜದಲ್ಲಿ ಮತೀಯ ಗಲಭೆ ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಬಾಪುಗೌಡ ಈಶ್ವರಗೌಡ ಪಾಟೀಲ ಎಂಬವರು ಗೋಲಗುಮ್ಮಟ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.