Assembly: ಇನ್ಮುಂದೆ ನಿರ್ಮಾಣ, ಏರ್‌ಕಂಪ್ರಸರ್, ಜನರೇಟರ್ ವಾಹನಕ್ಕೆ ಅಜೀವ ತೆರಿಗೆ
Team Udayavani, Feb 29, 2024, 8:36 PM IST
ಸಾಂದರ್ಭಿಕ ಚಿತ್ರ
ವಿಧಾನಸಭೆ: ನಿರ್ಮಾಣ ವಾಹನ ಸಾಮಗ್ರಿಗಳು, ಏರ್ ಕಂಪ್ರಸರ್ ಮತ್ತು ಜನರೇಟರ್ ಅಳವಡಿಸಿದ ವಾಹನಗಳಿಗೆ ಪೂರ್ಣಾವಧಿ ತೆರಿಗೆ ಬದಲಾಗಿ ಅಜೀವ ತೆರಿಗೆ ವಿಧಿಸುವುದು ಸೇರಿ ಕರ್ನಾಟಕ ಮೋಟಾರು ವಾಹನ ತೆರಿಗೆ ನಿರ್ಧರಣೆ ವಿಧೇಯಕಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ವಿಧೇಯಕವನ್ನು ಮಂಡಿಸಿದರು. ವಿಧಾನಸಭೆಯಲ್ಲಿ ವಿಪಕ್ಷಗಳು ಸಭಾತ್ಯಾಗ ನಡೆಸಿದ್ದರಿಂದ ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಈ ಬಗೆಯ ವಾಹನಗಳಿಗೆ ನೋಂದಣಿ ಬಳಿಕ, ಸ್ಥಳಾಂತರ ಅಥವಾ ನೋಂದಣಿ ರದ್ದಾದ ಸಂದರ್ಭದಲ್ಲಿ ಒಂದು ವರ್ಷದೊಳಗೆ ಶೇ.93, 2 ವರ್ಷದೊಳಗೆ ಶೇ.87, ಐದು ವರ್ಷದೊಳಗೆ ಶೇ.64, 10 ವರ್ಷದೊಳಗೆ ಶೇ.41 ಹಾಗೂ 15 ವರ್ಷದವರೆಗೆ ಶೇ.25 ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ 25 ಲಕ್ಷ ರೂ. ಬೆಲೆ ಮೀರುವ ವಿದ್ಯುತ್ಛಕ್ತಿ ಚಾಲಿತ ಕಾರುಗಳು, ಜೀಪುಗಳು, ಓಮ್ನಿ ಬಸ್ಸುಗಳು ಹಾಗೂ ಖಾಸಗಿ ಸೇವಾ ವಾಹನಗಳ ಮೇಲೆ ಆಜೀವ ತೆರಿಗೆ ವಿಧಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಾದರಿಯಲ್ಲಿ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಉತ್ತೇಜಿಸಲು ಪ್ರತ್ಯೇಕ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಡಿಸಿದ ಈ ವಿಧೇಯಕದ ಬಗ್ಗೆ ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ವಿಧಾನ ಪರಿಷತ್ತಿನಲ್ಲೂ ಅಂಗೀಕಾರ ಲಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.