ನಾಡಗೀತೆ 1 ನಿಮಿಷಕ್ಕೆ ಸಿಮೀತಗೊಳಿಸಿ : ಸಿಎಂ ಬಳಿ ಕಮಲಾ ಹಂಪನಾ ಮನವಿ
Team Udayavani, Aug 26, 2022, 7:02 PM IST
ಬೆಂಗಳೂರು: ಸರ್ಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ನಾಡಗೀತೆಯನ್ನು ಇಟ್ಟುಕೊಂಡು ಅದನ್ನು 1ನಿಮಿಷಕ್ಕೆ ಸಿಮೀತಗೊಳಿಸಬೇಕು ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.
ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಪರಿಷತ್ತಿನ ಶ್ರೀಕೃಷ್ಣ ಪರಿಷತ್ ಮಂದಿರದ ನವೀಕರಣ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಲವು ರಾಷ್ಟ್ರಗಳ ನಾಡಗೀತೆ 1 ನಿಮಿಷಕ್ಕೆ ಸೀಮಿತವಾಗಿದೆ. ಅದೇ ರೀತಿಯಲ್ಲಿ ನಮ್ಮ ನಾಡಗೀತೆಯನ್ನು 1 ನಿಮಿಷಕ್ಕೆ ಸೀಮಿತ ಮಾಡಬೇಕು .ಹಾಗೂ ಮೈಸೂರು ಅನಂತಸ್ವಾಮಿ ಅವರು 3 ಚರಣಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ ಅದನ್ನು ಇಟ್ಟುಕೊಳ್ಳಬೇಕು.ಇದನ್ನು ನಾನು ಕುವೆಂಪು ಅವರ ಶಿಷ್ಯೆಯಾಗಿ ಹೇಳುತ್ತಿದ್ದೇನೆ ಎಂದರು.
ಈಗಾಗಲೇ ಚಾಮರಾಜಪೇಟೆಯ ಸರ್ಕಾರಿ ಶಾಲೆಯ ಜಾಗ ಖಾಸಗಿ ಅವರ ಪಾಲಾಗುತ್ತಿದೆ ಎಂಬ ಸುದ್ದಿ ಬೇಸರ ಮಾಡಿಸಿತು.ಈ ಸರ್ಕಾರಿ ಶಾಲೆಯನ್ನು ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ಉಳಿಸಬೇಕು.ಕನ್ನಡ ಶಾಲೆಗಳ ಬೆಳವಣಿಗೆ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.