ಬೆಳೆ ಸಾಲ ವಿತರಣೆಯಲ್ಲಿ ಸಾಲು ಸಾಲು ಲೋಪ
Team Udayavani, Sep 25, 2017, 9:13 AM IST
ಬೆಂಗಳೂರು: ಬೆಳೆ ಸಾಲ ರೈತರಿಗೆ ಬಿತ್ತನೆ ಕಾಲಕ್ಕೆ ಸಕಾಲದಲ್ಲಿ ಸಿಗುತ್ತಿಲ್ಲ. ಬೆಳೆ ಸಾಲ ಪ್ರಮಾಣವೂ ಕಡಿಮೆ. ಸಾಲ ವಿತರಣೆಯಲ್ಲಿ ಮಹಿಳೆಯರು, ವಿಕಲಚೇತನರಿಗೆ ಸಿಗದ ಆದ್ಯತೆ. ಕೆಲವೆಡೆ ರೈತರಿಗೆ ನೇರವಾಗಿ ನಗದು ರೂಪದಲ್ಲಿ ಸಾಲ ವಿತರಣೆ. ಸಾಲ ಮಂಜೂರಾತಿಗಾಗಿ ರೈತರಿಂದ ಹೆಚ್ಚು ಹಣ ವಸೂಲಿ ಮಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು… ಇದು ರಾಜ್ಯ ಸರ್ಕಾರದ ಬೆಳೆ ಸಾಲ ವಿತರಣೆ ವ್ಯವಸ್ಥೆಯಲ್ಲಿನ ಪ್ರಮುಖ ಲೋಪಗಳು.
ಸರ್ಕಾರದ ಅಧೀನದಲ್ಲಿನ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಮೀಕ್ಷಾ ವರದಿಯು ಬೆಳೆ ಸಾಲ ವಿತರಣೆಯಲ್ಲಿನ ಲೋಪಗಳಿಗೆ ಕನ್ನಡಿ ಹಿಡಿದಿದ್ದು, ಸುಧಾರಣೆಗೆ ಕೆಲ ಶಿಫಾರಸುಗಳನ್ನು ಸಲ್ಲಿಸಿದೆ. 2010-11ರಿಂದ 2013-14ನೇ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರ ವಿತರಿಸಿದ ಬೆಳೆ ಸಾಲ ಸಮರ್ಪಕವಾಗಿ ರೈತರಿಗೆ ತಲುಪಿದೆಯೇ, ಇದರಿಂದ ರೈತರಿಗೆ ಅನುಕೂಲವಾಗಿ ಆದಾಯ ಹೆಚ್ಚಾಗಿದೆಯೇ ಎಂಬುದನ್ನು ತಿಳಿಯಲು ಪ್ರಾಧಿಕಾರ ಸಮೀಕ್ಷೆ ಕೈಗೊಂಡಿತ್ತು. ರಾಜ್ಯದ 4 ಕಂದಾಯ ವಿಭಾಗಗಳಿಂದ ತಲಾ 2 ಜಿಲ್ಲೆಯನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿತ್ತು. ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 20 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳು (ಪಿಎಸಿಎಸ್) ಹಾಗೂ 2 ಡಿಸಿಸಿ ಬ್ಯಾಂಕ್ ಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 2544 ರೈತರನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸಿತ್ತು.
ಕೆಲ ಯಶೋಗಾಥೆ: ಬೆಳೆ ಸಾಲ ವಿತರಣೆಯಲ್ಲಿ ಕೇವಲ ಲೋಪಗಳಷ್ಟೇ ಅಲ್ಲದೇ ಕೆಲ ಪ್ರಯೋಜನಗಳಾಗಿರುವ ಬಗ್ಗೆಯೂ ವರದಿಯಲ್ಲಿ ದಾಖಲಿಸಿದೆ. ಹೈಬ್ರಿಡ್ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮೂಲಕ ಬೆಳೆ ಪದ್ಧತಿ
ಬದಲಾವಣೆಯಿಂದ ಉತ್ಪಾದಕತೆಯಲ್ಲಿ ಹೆಚ್ಚಳವಾಗಿದೆ ಎಂದು ಶೇ.60 ರೈತರು ತಿಳಿಸಿದ್ದಾರೆ. ಹೆಚ್ಚಿನ ಸರಾಸರಿ ಸಾಲವನ್ನು ಮೈಸೂರು ವಿಭಾಗದಲ್ಲಿ ಅಲ್ಪಸಂಖ್ಯಾತರು ಪಡೆದಿದ್ದರೆ, ಪ.ಜಾತಿ, ಪ. ಪಂಗಡದವರ ಪೈಕಿ ಹೆಚ್ಚು ಸರಾಸರಿ ಸಾಲ ಪಡೆದವರೂ ಸಹ ಮೈಸೂರು ವಿಭಾಗದವರೇ ಆಗಿರುವುದು ವಿಶೇಷ. ಕಲಬುರಗಿ ವಿಭಾಗದಲ್ಲಿ ಅತಿ ಕಡಿಮೆ ಸರಾಸರಿ ಸಾಲ (21,793 ರೂ.)
ವಿತರಣೆಯಾಗಿದೆ.
ಶಿಫಾರಸುಗಳು: ಬೆಳೆ ಸಾಲ ಪಡೆಯಲು ವಿಧಿಸಿರುವ ದಾಖಲೆಗಳ ಸಂಖ್ಯೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ರೈತರ ಬೆಳೆಗೆ ಕನಿಷ್ಠ ಖಾತರಿ ಬೆಲೆ ಸಿಗುವಂತೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಸಾಲ ಮರುಪಾವತಿಗೂ ಅನುಕೂಲವಾಗಲಿದೆ. ವೈದ್ಯನಾಥನ್ ನಿಧಿಯನ್ನು ನಿರ್ದಿಷ್ಟ ಉದ್ದೇಶಕ್ಕಷ್ಟೇ ವಿನಿಯೋಗಿಸಬೇಕೆ ಹೊರತು ಡಿಸಿಸಿ ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟು, ಬಡ್ಡಿ ಗಳಿಸಲು ಬಳಸಬಾರದು. ಪಿಎಸಿಎಸ್‌ಗಳಲ್ಲಿ ಒಂದೇ ಸೂರಿನಡಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ರಿಯಾಯ್ತಿ ದರದಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ವಾಸ್ತವವಾಗಿ ಬೇಸಾಯದಲ್ಲಿ ತೊಡಗುವ ಅರ್ಹ ರೈತರಿಗೆ ಬೆಳೆ ಸಾಲ ಸಿಗುವಂತಾಗಬೇಕು.
ಸಕಾಲಕ್ಕೆ ಸಿಗದ ಬೇಸಾಯ ಸಾಲ
ಬೇಸಾಯ ಸಾಲ ರೈತರಿಗೆ ಸಕಾಲದಲ್ಲಿ ಸಿಗದಿರುವುದು ಬೆಳಕಿಗೆ ಬಂದಿದ್ದು, ಯೋಜನೆಯ ಮೂಲ ಉದ್ದೇಶವೇ ಈಡೇರದಂತಾಗಿದೆ. ಸಮೀಕ್ಷೆಗೆ ಒಳಗಾದ ರೈತರಲ್ಲಿ ಶೇ.66 ಮಂದಿ ಸಕಾಲದಲ್ಲಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. 31 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಸಂಗ್ರಹಕ್ಕೆ ಸೂಕ್ತ ಗೋದಾಮು ವ್ಯವಸ್ಥೆ ಇಲ್ಲದಿರುವುದು ಗೊತ್ತಾಗಿದೆ. ಶೇ.5 ರೈತರಿಗೆ ನೇರವಾಗಿ
ನಗದು ರೂಪದಲ್ಲಿ ಸಾಲ ವಿತರಿಸಿದ್ದು, ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿರುವುದನ್ನು ಉಲ್ಲೇಖೀಸಲಾಗಿದೆ. ಸರ್ಕಾರದ ಆದೇಶದ ಹೊರತಾಗಿಯೂ ಶೇ.90 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳು ಶೇ.25 ಹೊಸ ರೈತರಿಗೆ ಬೆಳೆ ಸಾಲ ವಿತರಿಸುವಲ್ಲಿ ವಿಫಲವಾಗಿವೆ. ಕೇವಲ ಶೇ.10 ಹೊಸ ರೈತರಿಗಷ್ಟೇ ಸಾಲ ನೀಡಿವೆ. ಬೆಳೆ ಸಾಲ ಮಂಜೂರು ಮಾಡಲು ಪಿಎಸಿಎಸ್‌ಗಳು ಹಣ ಪಡೆಯುತ್ತವೆ ಎಂಬುದಾಗಿ ಶೇ.30 ಫಲಾನುಭವಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.