ಸಾಲು ಸಾಲು ಪ‹ತಿಮೆಗೆ ಸಾಲದ ಜಾಗ
Team Udayavani, Oct 6, 2017, 9:13 AM IST
ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ- ವಿಕಾಸಸೌಧ ಹಾಗೂ ಶಾಸಕರ ಭವನ ಆವರಣ ಪ್ರತಿಮೆಗಳಿಂದ ಭರ್ತಿಯಾಗಿದೆ!
ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜಗಜೀವನರಾಂ, ಜವಾಹರ್‌ಲಾಲ್ ನೆಹರು, ಲಾಲ್‌ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್, ನಿಜಲಿಂಗಪ್ಪ, ಕೆಂಗಲ್‌ಹನುಮಂತಯ್ಯ, ದೇವರಾಜ ಅರಸು ಸೇರಿ ಒಂಬತ್ತು ಪ್ರತಿಮೆಗಳು ವಿಧಾನಸೌಧ- ವಿಕಾಸಸೌಧ ಆವರಣದಲ್ಲಿ ರಾರಾಜಿಸುತ್ತಿವೆ. ಇದರ ಜತೆಗೆ ಇಂದಿರಾಗಾಂಧಿ, ರಾಜೀವ್‌ಗಾಂಧಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ನೀಲಂ ಸಂಜೀವರೆಡ್ಡಿ ಪ್ರತಿಮೆಗಳನ್ನೂ ಸ್ಥಾಪನೆ ಮಾಡಬೇಕು ಎಂಬ ಒತ್ತಾಯ ಹಾಗೂ ಬೇಡಿಕೆಯೂ ಇದೆ. ಇದರ ಜತೆಯಲ್ಲೇ ಇಷ್ಟು ದಿನ ವಿಧಾನಸೌಧ -ವಿಕಾಸಸೌಧ ಆವರಣಕ್ಕೆ ಸೀಮಿತವಾಗಿದ್ದ ಪ್ರತಿಮೆಗಳ ಸಾಮ್ರಾಜ್ಯ ಇದೀಗ ಶಾಸಕರ ಭವನ ಆವರಣಕ್ಕೂ ವ್ಯಾಪಿಸಿದೆ.
ಶಾಸಕರ ಭವನ ಆವರಣದಲ್ಲಿ ತಪೋವನ ನಿರ್ಮಿಸಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.
ಇಲ್ಲೂ ಇದೀಗ ಬುದ್ಧ, ಬಸವಣ್ಣ, ಮಹಾವೀರ, ಕನಕದಾಸ, ಪುರಂದರ ದಾಸ, ಕುವೆಂಪು ಪ್ರತಿಮೆಗಳು ಅನಾವರಣ ಮಾಡಬೇಕು ಎಂಬ ಬೇಡಿಕೆಯೂ ಇದೆ. ಈ ಮೊದಲು ಅಂಬೇಡ್ಕರ್, ನೆಹರು, ಬೋಸ್, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಪ್ರತಿಮೆಗಳು ಮಾತ್ರ ಇದ್ದವು. ಗಾಂಧಿ, ದೇವರಾಜ ಅರಸು, ವಾಲ್ಮೀಕಿ ಪ್ರತಿಮೆಗಳು ಇತ್ತೀಚೆಗೆ ಸೇರ್ಪಡೆಯಾಗಿವೆ. ಜಾತಿ, ಸಮುದಾಯದ ಬೇಡಿಕೆ, ರಾಜಕೀಯ ಪಕ್ಷಗಳ ಬೇಡಿಕೆಗೆ ಮಣಿದು ಇದೇ ರೀತಿ ಪ್ರತಿಮೆಗಳು ಸೇರ್ಪಡೆಯಾಗುತ್ತಲೇ ಇದ್ದರೆ ಮುಂದೊಂದು ದಿನ ಪ್ರತಿಮೆಗಳ ನಡುವೆ ವಿಧಾನಸೌಧ-ವಿಕಾಸಸೌಧ
ಹುಡುಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ವಿವಾದದ ಕೇಂದ್ರಬಿಂದು: ವಿಧಾನಸೌಧ- ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆಯಂತೂ ವಿವಾದಟ ಕೇಂದ್ರ
ಬಿಂದು ಆಗಿತ್ತು. ಗಾಂಧಿಪ್ರತಿಮೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ವಿಧಾನಪರಿಷತ್‌ನಲ್ಲೂ ಇದು ಪ್ರಸ್ತಾಪವಾಯಿತು. ಸುಮಾರು 12 ಕೋಟಿ ರೂ. ವೆಚ್ಚದ ಈ ಪ್ರತಿಮೆ ವಿಧಾನಸೌಧ-ವಿಕಾಸಸೌಧ ಆವರಣದಲ್ಲಿರುವ ಎಲ್ಲ ಪ್ರತಿಮೆಗಳಿಗಿಂತ ಅತಿ ಹೆಚ್ಚು “ಮೌಲ್ಯ’ದ ಪ್ರತಿಮೆಯೂ ಹೌದು.
ಹಸಿರು ಮಾಯ
ವಿಧಾನಸೌಧ-ವಿಕಾಸಸೌಧ ಆವರಣದಲ್ಲಿ ಒಂದು ಪ್ರತಿಮೆ ಸ್ಥಾಪನೆಗೆ ಕನಿಷ್ಠ 2500 ಚದರಡಿ ಹಸಿರು ಮಾಯ ವಾಗುತ್ತದೆ. ಪ್ರತಿಮೆ ಕೂರಿಸಲು ಅಗತ್ಯ ವಾದ ಕಾಂಕ್ರಿಟ್ ತಳಹದಿ ನಿರ್ಮಾಣ ಕೆಳಗೆ ಕಲ್ಲು ಹಾಸು ಸೇರಿ ಇಷ್ಟು ಜಾಗ ಕಾಂಕ್ರೀಟ್‌ಮಯವಾಗುತ್ತದೆ. ಹೀಗಾಗಿ, ಅಲ್ಲಿ ನೀರು ಇಂಗಲು ಅವಕಾಶ ಇರದು. ಹೀಗಾಗಿ, ಪ್ರತಿಮೆಗಳು ಬಂದಷ್ಟೂ ಹಸಿರು ಕರಗುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
ಕೆಪಿಎಸ್ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.