Lok Sabha Elections; ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ಪಕ್ಷಕ್ಕೆ ?
Team Udayavani, Mar 5, 2024, 7:20 AM IST
ಬೆಂಗಳೂರು/ಉಡುಪಿ: ಇತ್ತೀಚೆಗಷ್ಟೇ ಬಹು ಚರ್ಚಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಕಾಂಗ್ರೆಸ್‌ಗೆ ಜಿಗಿಯುವುದು ನಿಚ್ಚಳವಾಗಿದೆ.
ಈ ಸಂಬಂಧ ಸೋಮವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸೇರಿ ಪ್ರಮುಖ ನಾಯಕರನ್ನು ಭೇಟಿಯಾಗಿರುವ ಜಯಪ್ರಕಾಶ ಹೆಗ್ಡೆ, ಪಕ್ಷ ಸೇರ್ಪಡೆ, ಲೋಕಸಭಾ ಚುನಾವಣೆ ಸ್ಪರ್ಧೆ ಸೇರಿ ಹಲವು ವಿಷಯಗಳ ಕುರಿತು ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸೇರ್ಪಡೆ ಆಗುವುದು ಬಹುತೇಕ ಅಂತಿಮಗೊಂಡಿದ್ದು ಸೇರ್ಪಡೆ ದಿನಾಂಕ ಘೋಷಣೆ ಮಾತ್ರ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆ ಹೊಸ್ತಿ ಲಲ್ಲೇ ಬಿಜೆಪಿಗೆ ಗುಡ್‌ಬೈ ಹೇಳಲು ಮುಂದಾಗಿರುವ ಜಯಪ್ರಕಾಶ ಹೆಗ್ಡೆ ಅವರನ್ನು ಕಾಂಗ್ರೆಸ್ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಅಖಾಡಕ್ಕಿ ಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಕಾಂಗ್ರೆಸ್ ನಾಯಕರ ಭೇಟಿ ವೇಳೆಯೂ ಇದು ಚರ್ಚೆಗೆ ಬಂದಿದೆ. ಈ ಬೆಳವಣಿಗೆಯೊಂದಿಗೆ ಜಯಪ್ರಕಾಶ ಹೆಗ್ಡೆ ಅವರ ಬಿಜೆಪಿಯೊಂದಿಗಿನ ರಾಜಕೀಯ ಪಯಣ ಅಂತ್ಯಗೊಳ್ಳಲಿದೆ.
ಸಾಮಾಜಿಕ ತಾಣದಲ್ಲಿ ಚರ್ಚೆ
ಜಯಪ್ರಕಾಶ್ ಹೆಗ್ಡೆ ಅವರು ಶೀಘ್ರ ವೇ ಕಾಂಗ್ರೆಸ್ ಸೇರುವರು ಎಂಬ ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ಹರಿದಾಡಿತು.
ಮಂಗಳವಾರವೇ ಬೆಂಗಳೂರಿನಲ್ಲಿ ಹೆಗ್ಡೆ ಅವರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವರು ಎಂಬ ಅಭಿಪ್ರಾಯವೂ ಕೇಳಿಬಂದಿತ್ತು. ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಅವರ ಹೆಸರು ಅಂತಿಮಗೊಂಡಿದ್ದು, ಸೇರುವುದೊಂ ದೇ ಬಾಕಿ ಎಂದು ಹೇಳಲಾಗಿತ್ತು.
ಆದರೆ ಹೆಗ್ಡೆಯವರು ಮಾತ್ರ ಇನ್ನೂ ನಿರ್ಧರಿಸಿಲ್ಲ, ಒಂದುವಾರದಲ್ಲಿ ತೀರ್ಮಾನಿಸುವೆ ಎಂದು ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಬೆಳಗ್ಗೆ ನಡೆದ ಮಾಧ್ಯಮ ಸಂವಾದದಲ್ಲೂ ತಿಳಿಸಿದ್ದರು. ಬಿಜೆಪಿಯಿಂದ ಅಧಿಕೃತ ವಾಗಿ ಯಾರೂ ಸಂಪರ್ಕಿಸಿಲ್ಲ. ಅಲ್ಲಿಯ ಕೆಲವು ಸ್ನೇಹಿತರು ಕರೆ ಮಾಡಿ ಮಾತನಾಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂದು ಮೊದಲು ನಿರ್ಧರಿಸುವೆ. ಆಮೇಲೆ ಯಾವ ಪಕ್ಷವೆಂಬುದು ಎಂದಿದ್ದರು.
ರಾಜಕೀಯ ಮೌಲ್ಯ ಎನ್ನುವುದು ಪಕ್ಷಾಂತರ ಮಾಡುವವರಿಗೆ ಮಾತ್ರ ಸೀಮಿತವಲ್ಲ. ಪಕ್ಷಗಳಿಗೂ ಅನ್ವ ಯಿಸುತ್ತದೆ. ಇಲ್ಲಿ ಇಬ್ಬರ ತಪ್ಪು ಇರು ತ್ತದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ, ಬಿಜೆಪಿ ಯಿಂದ ಕಾಂಗ್ರೆಸ್‌ಗೆ ಆಚೀಚೆ ಆಗುತ್ತಲೇ ಇರುತ್ತದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ತತ್‌ಕ್ಷಣವೇ ಸೆಕ್ಯೂಲರ್ ಆಗುವುದು, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದಕೂಡಲೇ ಕಮ್ಯೂನಲ್ ಆಗುವುದು ಈ ಹೊತ್ತಿನ ವಿಶ್ಲೇಷಣೆ ಎಂದರು ಹೆಗ್ಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.