Lok Sabha Elections: ಬಿಜೆಪಿ ವರಿಷ್ಠರಿಂದ 25 ಸ್ಥಾನ ಗೆಲ್ಲುವ ಹೊಣೆ, ಶತದಿನಗಳ ಮಾರ್ಗಸೂಚಿ
ಗ್ಯಾರಂಟಿ ವಿರುದ್ಧ ಗದಾಪ್ರಹಾರಕ್ಕೆ ವರಿಷ್ಠರ ಸಂದೇಶ; ಹೊಸ ನಾಯಕತ್ವಕ್ಕೆ ಭರಪೂರ ಹೊಣೆಗಾರಿಕೆ ಹೊರೆ
Team Udayavani, Jan 9, 2024, 6:25 AM IST
ಬೆಂಗಳೂರು: ಲೋಕಸಭಾ ಚುನಾವಣೆಯ ಗೆಲುವಿಗಾಗಿ ರಾಜ್ಯ ನಾಯಕರಿಗೆ 100 ದಿನಗಳ ಮಾರ್ಗಸೂಚಿ ನಿಗದಿ ಮಾಡಿರುವ ಬಿಜೆಪಿಯ ವರಿಷ್ಠರು ಕನಿಷ್ಠ 25 ಲೋಕಸಭಾ ಸ್ಥಾನಗಳ ಗೆಲುವಿನ ಗುರಿ ನಿಗದಿಪಡಿಸಿದ್ದಾರೆ. ಜತೆಗೆ ಕಾಂಗ್ರೆಸ್ ಸರಕಾರದ ಗ್ಯಾರಂಟಿ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಜೆಂಡಾ ಹಾಕಿಕೊಳ್ಳುವಂತೆಯೂ ಫರ್ಮಾನು ಹೊರಡಿಸಿದೆ.
ಬೆಂಗಳೂರಿನ ಹೊರವಲಯದ ಖಾಸಗಿ ಹೊಟೇಲ್‌ನಲ್ಲಿ ದಿನಪೂರ್ತಿ ನಡೆದ ಸಭೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ನಾಯಕರಿಗೆ ಈ ಸಂದೇಶ ರವಾನಿಸಿದ್ದು, “28ಕ್ಕೆ 28 ಸ್ಥಾನ’ ಎಂಬ ಲಕ್ಷ್ಯವನ್ನು ಬೆನ್ನು ಹತ್ತಿ. ಆದರೆ ವರಿಷ್ಠರು ಕನಿಷ್ಠ 25 ಸ್ಥಾನಗಳಲ್ಲಾದರೂ ಬಿಜೆಪಿಯ ಗೆಲುವು ಬಯಸುತ್ತಿದ್ದಾರೆ ಎಂದು ಸೂಚನೆ ನೀಡುವ ಮೂಲಕ ರಾಜ್ಯ ಬಿಜೆಪಿಯ ಹೊಸ ನಾಯಕತ್ವದ ಮುಂದೆ ದೊಡ್ಡ ಹೊಣೆಗಾರಿಕೆಯನ್ನೇ ನೀಡಿದ್ದಾರೆ. ಹೀಗಾಗಿ ಎಲ್ಲ ಬಣ ಲೆಕ್ಕಾಚಾರಗಳನ್ನು ಬದಿಗಿರಿಸಿ ಮುಂದಿನ 100 ದಿನಗಳ ಕಾಲ ಶ್ರಮಿಸುವುದು ಬಿಜೆಪಿ ನಾಯಕರಿಗೆ ಅನಿವಾರ್ಯವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ವಿಪಕ್ಷ ನಾಯಕರಾದ ಆರ್. ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನಿಲ್ ಕುಮಾರ್, ಪಿ. ರಾಜೀವ್, ಪ್ರೀತಂ ಗೌಡ, ನಂದೀಶ್ ರೆಡ್ಡಿ ಸಹಿತ 45ಕ್ಕೂ ಹೆಚ್ಚು ಪ್ರಮುಖ ನಾಯಕರು ಪಾಲ್ಗೊಂಡ ಸಭೆಯಲ್ಲಿ ಮುಂದಿನ ನೂರು ದಿನಗಳಲ್ಲಿ ಮಾಡಬೇಕಾದ ಕಾರ್ಯ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಪಕ್ಷದ ವಿರುದ್ಧ ಮುನಿಸಿಕೊಂಡು ಹಲವು ವೇದಿಕೆಗಳಲ್ಲಿ ಬಹಿರಂಗ ಹೇಳಿಕೆ ನೀಡಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಸಭೆಗೆ ಹಾಜರಾಗಿದ್ದರು.
100 ದಿನಗಳ ಮಾರ್ಗಸೂಚಿ
ಜಿಲ್ಲೆ ಹಾಗೂ ಮಂಡಲ ವ್ಯಾಪ್ತಿಯಲ್ಲಿ ಸಾರ್ವ ಜನಿಕರು, ಪಕ್ಷದಲ್ಲಿ ಆಂತರಿಕವಾಗಿ ಚಟುವಟಿಕೆ ರೂಪಿಸಬೇಕು. ಫಲಾನುಭವಿಗಳು, ಸೈದ್ಧಾಂತಿಕ ಹಿನ್ನೆಲೆಯ ಮತದಾರರ ಸಂಪರ್ಕದ ಜತೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಬೇಕು.ಒಟ್ಟು ಚುನಾವಣ ಕಾರ್ಯವನ್ನು 5 ಹಂತಗಳ ಚಟುವಟಿಕೆಯಾಗಿ ವಿಭಜಿಸಲಾಗಿದೆ.
ಟಿಕೆಟ್ ಬಗ್ಗೆ ಪ್ರಾಸಂಗಿಕ ಪ್ರಸ್ತಾವ
ಟಿಕೆಟ್ ಹಂಚಿಕೆ ಬಗ್ಗೆ ಈ ಸಭೆಯಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾವವಾಗಿದ್ದು, ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮಾಡಿದ “ಹೊಸ ಪ್ರಯೋಗ’ಗಳಿಗೆ ಈ ಬಾರಿ ಕೈ ಹಾಕುವ ಸಾಧ್ಯತೆಗಳು ಕ್ಷೀಣಿಸಿವೆ. 28ಕ್ಕೆ 28 ಸ್ಥಾನ ಗೆಲ್ಲಬೇಕೆಂಬ ವರಿಷ್ಠರ ಸೂಚನೆಯ ಹಿಂದೆ ಪ್ರತೀ ಸ್ಥಾನವೂ ಮಹತ್ವದ್ದು ಎಂಬ ಸಂದೇಶವಿದೆ. ಹೀಗಾಗಿ ವ್ಯಾಪಕ ಬದಲಾವಣೆ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
-ಮತದಾರರ ಸಂಪರ್ಕಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ
-ಯಾರ ವಿರುದ್ಧವೂ ಸದ್ಯಕ್ಕೆ ಶಿಸ್ತುಕ್ರಮದ ಆಗ್ರಹ ಬೇಡ.
-ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿ ಎಂದು ಸಲಹೆ
-ಜೆಡಿಎಸ್ ಜತೆ ಹೊಂದಾಣಿಕೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ
ವರಿಷ್ಠರ ಭೇಟಿಗೆ ದಿಲ್ಲಿ ತಲುಪಿದ ಸೋಮಣ್ಣ
ಪಕ್ಷದ ಕೆಲವು ನಾಯಕರ ಮೇಲೆ ಮುನಿಸಿಕೊಂಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಬಿಜೆಪಿ ವರಿಷ್ಠರ ಭೇಟಿ ಗಾಗಿ ಸೋಮವಾರ ದಿಲ್ಲಿ ತಲುಪಿದ್ದು, ಮಂಗಳವಾರ ಪಕ್ಷದ ಪ್ರಮುಖರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಸೋಮಣ್ಣ ಅವರು ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನ ಪಡಿಸುವ ಕಸರತ್ತು ನಡೆಸಿರುವ ಬಿಜೆಪಿ ವರಿಷ್ಠರು ದಿಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ತುಮಕೂರು ಕ್ಷೇತ್ರದಿಂದ ಕಣ ಕ್ಕಿಳಿಯಲು ಸೋಮಣ್ಣ ಬಯಸಿದ್ದು ಅದಕ್ಕೆ ವರಿಷ್ಠರ ಸಮ್ಮತಿ ಇದೆಯೇ ಇಲ್ಲವೇ ಎಂಬುದು ನಿರ್ಧಾರವಾಗುವ ಸಾಧ್ಯತೆಗಳಿವೆ. ಈ ಮಧ್ಯೆ ಅವರು ಜೆಡಿಎಸ್ ಮೂಲಕವೂ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.