ಲೋಕಾಯುಕ್ತರಾಗಿ ನ್ಯಾ. ವಿಶ್ವನಾಥ ಶೆಟ್ಟಿ ಪ್ರಮಾಣ
Team Udayavani, Jan 29, 2017, 3:45 AM IST
ಬೆಂಗಳೂರು: ರಾಜ್ಯದ ನೂತನ ಲೋಕಾಯುಕ್ತರಾಗಿ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು
ನೂತನ ಲೋಕಾಯುಕ್ತರಿಗೆ ಪ್ರಮಾಣ ವಚನ ಬೋಧಿಸಿದರು. ಭಗವಂತನ ಹೆಸರಲ್ಲಿ ನ್ಯಾ.ವಿಶ್ವನಾಥ ಶೆಟ್ಟಿ ಪ್ರಮಾಣ
ವಚನ ಸ್ವೀಕರಿಸಿದರು.ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಸ್ಥಿತರಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ
ನೂತನ ಲೋಕಾಯುಕ್ತರಿಗೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರು ಪುಷ್ಪಗುತ್ಛ ನೀಡಿ ಅಭಿನಂದಿಸಿದರು.
ಇದಕ್ಕೂ ಮೊದಲು ಸಂಜೆ 4.20ಕ್ಕೆ ರಾಜಭವನಕ್ಕೆ ಆಗಮಿಸಿದ ನಿಯೋಜಿತ ಲೋಕಾಯುಕ್ತ ನ್ಯಾ.ಶೆಟ್ಟಿ ಅವರು
4.50ಕ್ಕೆ ಬ್ಯಾಂಕ್ವೆಟ್ ಸಭಾಂಗಣ ಪ್ರವೇಶಿಸಿ ವಿಧಾನಸಭೆ ಸ್ಪೀಕರ್, ಮುಖ್ಯಮಂತ್ರಿ, ಹೈಕೋರ್ಟ್ ನ್ಯಾಯಮೂರ್ತಿಗಳು, ಉಪಲೋಕಾಯುಕ್ತರು, ಸಚಿವರು, ಗಣ್ಯರು, ಸ್ನೇಹಿತರು, ಆಪ್ತರು ಮತ್ತು ಕುಟುಂಬ ಸದಸ್ಯರಿಗೆ ಹಸ್ತಲಾಘವ ನೀಡಿ ಸಂತಸ ಹಂಚಿಕೊಂಡರು.
ಸಂಜೆ 5 ಗಂಟೆಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು. ಬಳಿಕ ಸಚಿವರು, ಗಣ್ಯರು, ಆಪ್ತರು ಪುಷ್ಪಗುತ್ಛ
ನೀಡಿ ನ್ಯಾ. ಶೆಟ್ಟಿ ಅವರಿಗೆ ಶುಭ ಕೋರಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮುಖ್ಯ ಕಾರ್ಯದರ್ಶಿ ಸುಭಾಷ ಕುಂಟಿಯಾ ನಿರ್ವಹಿಸಿದರು.
ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ಹೈಕೋರ್ಟ್ನ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ನಿವೃತ್ತ
ನ್ಯಾಯಮೂರ್ತಿ ಎಸ್.ರಾಜೇಂದ್ರಬಾಬು, ಉಪಲೋಕಾ ಯುಕ್ತರಾದ ನ್ಯಾ.ಸುಭಾಷ ಬಿ. ಅಡಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.