ಶಿಷ್ಟಾಚಾರ ನೆಪದಲ್ಲಿ ಲೋಪ:ಸಚಿವ ದೇಶಪಾಂಡೆ ಗರಂ
Team Udayavani, Dec 13, 2017, 9:47 AM IST
ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣ ನೂತನ ಟರ್ಮಿನಲ್ ಉದ್ಘಾಟನೆ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಲ್ಲದಿರುವುದು, ಸ್ಥಳೀಯ ವಿಧಾನಸಭೆ-ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಿರುವ ಬಗ್ಗೆ ಸಚಿವ ಆರ್. ವಿ. ದೇಶಪಾಂಡೆ ಗರಂ ಆಗಿದ್ದರಲ್ಲದೆ, ಕೇಂದ್ರ ಸಚಿವರ ಎದುರಲ್ಲೇ ತಮ್ಮ ಅಸಮಾಧಾನ ಹೊರ ಹಾಕಿದರು.
ಕೇಂದ್ರ ಸಚಿವರಿಗಿಂತ ಮುಂಚೆಯೇ ನೂತನ ಟರ್ಮಿನಲ್ ಉದ್ಘಾಟನಾ ಸಮಾರಂಭದ ವೇದಿಕೆ ಸ್ಥಳಕ್ಕೆ ಸಚಿವರಾದ
ಆರ್.ವಿ.ದೇಶಪಾಂಡೆ ಹಾಗೂ ವಿನಯ ಕುಲಕರ್ಣಿ ಆಗಮಿಸಿದರು. ವೇದಿಕೆ ಬ್ಯಾನರ್ನಲ್ಲಿ ತಮ್ಮ ಭಾವಚಿತ್ರ ಇಲ್ಲದ್ದನ್ನು ಕಂಡು ಅಸಮಾಧಾನಗೊಂಡ ಅವರು ಮೂಲಭೂತ ಸೌಲಭ್ಯ ಸಚಿವರಾದ ತಮ್ಮ ಹೆಸರೇ ಇಲ್ಲ ಎಂದು ಅಸಮಾಧಾನಗೊಂಡರಲ್ಲದೇ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇನು ಸರಕಾರಿ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮವೋ ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಡೀಸಿ ಆಗಮಿಸಿದಾಗಲೂ ಅವರ ಬಳಿಯೂ ಶಿಷ್ಟಾಚಾರ ಪಾಲನೆ ಆಗದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಗೆ ಆಗಮಿಸಿ ಆಸೀನರಾದ ನಂತರ ಕೇಂದ್ರ ಸಚಿವರಾದ ಅಶೋಕ ಗಜಪತಿ ರಾಜು, ಅನಂತ ಕುಮಾರ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಮುಂದೆಯೂ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದು ಗೋಚರಿಸಿತು.
ವೇದಿಕೆಯಲ್ಲೂ ಅಸಮಾಧಾನ: ಸಮಾರಂಭದಲ್ಲಿ ಮಾತನಾಡುವ ಸಂದರ್ಭದಲ್ಲೂ ಸಚಿವ ದೇಶಪಾಂಡೆ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸುಮಾರು 590 ಎಕರೆ ಜಮೀನು ಸ್ವಾಧೀನ, ವಿವಿಧ ಮೂಲ ಸೌಕರ್ಯಕ್ಕೆ ರಾಜ್ಯ ಸರಕಾರ ಅಂದಾಜು 346 ಕೋಟಿ ರೂ. ನೀಡಿದೆ. ಕೇಂದ್ರ ಸರಕಾರ ವಿಮಾನ ನಿಲ್ದಾನ ರನ್ವೇ ಇನ್ನಿತರ ಕಾರ್ಯಕ್ಕೆ 142 ಕೋಟಿ ರೂ. ನೀಡಿದೆ. ಇಷ್ಟಾದರೂ ನೂತನ ಟರ್ಮಿನಲ್ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಅವರ ಹೆಸರಿಲ್ಲ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ
ವರ್ತನೆ ನೋಡಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.