Lokayukta Raid 50 ಕೋ.ರೂ. ಅಕ್ರಮ ಸಂಪತ್ತು ಲೋಕಾ ಬೇಟೆ 11 ಅಧಿಕಾರಿಗಳು, 60 ಕಡೆ ದಾಳಿ
ಆದಾಯ ಮೀರಿದ ಆಸ್ತಿ ಪತ್ತೆ
Team Udayavani, Jul 20, 2024, 6:19 AM IST
ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್. ಅವರ ಸಹಿತ ರಾಜ್ಯಾದ್ಯಂತ ಶುಕ್ರವಾರ ಬೆಳ್ಳಂ ಬೆಳಗ್ಗೆ 11 ಸರಕಾರಿ ಅಧಿಕಾರಿಗಳು ಹಾಗೂ ಓರ್ವ ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ ಲೋಕಾಯುಕ್ತ ಪೊಲೀಸರು ಆಘಾತ ನೀಡಿದ್ದಾರೆ.
ಅವರ ಮನೆ, ಕಚೇರಿ, ಸಂಬಂಧಿಕರ ಮನೆಗಳ ಸಹಿತ 60 ಸ್ಥಳ ಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ, ಚಿನ್ನಾಭರಣ, ನಗದು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು ಮತ್ತು ಯಾದಗಿರಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಸರಕಾರಿ ಅಧಿಕಾರಿಗಳು, ಓರ್ವ ಗ್ರಾ.ಪಂ. ಅಧ್ಯಕ್ಷ ತಮ್ಮ ಅಧಿಕೃತ ಆದಾಯದ ಮೂಲಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದ ಬಗ್ಗೆ 12 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಒಟ್ಟು 60 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧಕಾರ್ಯ ಕೈಗೊಂಡಿದ್ದು, ಭಾರೀ ಮೊತ್ತದ ಅಕ್ರಮ ಆಸ್ತಿ ಹೊಂದಿರುವುದು ಕಂಡುಬಂದಿದೆ.
ದಾಳಿಯಲ್ಲಿ ಪತ್ತೆಯಾದದ್ದೇನು?
-12 ಮಂದಿಯ ಬಳಿ ಕೋಟ್ಯಂತರ ರೂ. ಆದಾಯ ಮೀರಿದ ಆಸ್ತಿ ಪತ್ತೆ
-ಒಟ್ಟು 49.85 ಕೋ. ರೂ. ಮೌಲ್ಯದ ಸಂಪತ್ತು ಹೊಂದಿರುವುದು ಬೆಳಕಿಗೆ
-33.85 ಕೋಟಿ ರೂಪಾಯಿ ಮೌಲ್ಯದ ಜಮೀನು, ನಿವೇಶನಗಳು
-1.20 ಕೋಟಿ ರೂ. ನಗದು, 2.5 ಕೋಟಿ ರೂ. ಮೌಲ್ಯದ ಚಿನ್ನ
-4.5 ಕೋಟಿ ರೂ. ಮೊತ್ತದ ಇತರ ವಸ್ತುಗಳು ದಾಳಿ ವೇಳೆ ಜಪ್ತಿ
ಯಾರ್ಯಾರ ಮೇಲೆ ಲೋಕಾ ದಾಳಿ?
-ಚೇತನ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಮೈಸೂರು ವಿಭಾಗ.
-ಆನಂದ್ ಸಿ.ಎಲ್, ಆಯುಕ್ತ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು
-ಬಿ.ವಿ. ರಾಜ, ಪ್ರ. ದರ್ಜೆ ಸಹಾಯಕ, ಕೆ.ಐ.ಎ.ಡಿ.ಬಿ., ಬೆಂಗಳೂರು
-ರಮೇಶ್ ಕುಮಾರ್, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ, ಬೆಂಗಳೂರು
-ಅತØರ್ ಅಲಿ, ಉಪ ನಿಯಂತ್ರಕ, ಕಾನೂನು ಮಾಪನ ಶಾಸ್ತ್ರ, ಬೆಂಗಳೂರು ವಿಭಾಗ
-ಮಂಜುನಾಥ್ ಟಿ.ಆರ್., ಪ್ರ.ದರ್ಜೆ ಸಹಾಯಕ, ಕಂದಾಯ ಸಹಾಯಕ ಆಯುಕ್ತರ ಕಚೇರಿ, ಬೆಂ.ಉತ್ತರ
-ಕೆ. ನರಸಿಂಹಮೂರ್ತಿ, ಕೆ.ಎಂ.ಎ.ಎಸ್, ಪೌರಾಯುಕ್ತ, ಹೆಬ್ಬಗೋಡಿ ನಗರಸಭೆ
-ಆರ್. ಸಿದ್ದಪ್ಪ, ನಿರೀಕ್ಷಕ, ಪಶುಸಂಗೋಪನೆ ಇಲಾಖೆ, ರಾಮೇಶ್ವರ
-ಪ್ರಕಾಶ್ ಜಿ.ಎನ್., ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಶಿವಮೊಗ್ಗ.
-ನಾಗೇಶ್, ಅಧ್ಯಕ್ಷ, ಅಂತರಗಂಗೆ ಗ್ರಾ.ಪಂ., ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆ
-ಸಿ.ಟಿ. ಮುದ್ದುಕುಮಾರ್, ಅಪರ ನಿರ್ದೇಶಕ, ನಿಯೋಜನೆ ಮೇರೆಗೆ ಸಿ.ಒ.ಒ, ಇನ್ವೆಸ್ಟ್ ಕರ್ನಾಟಕ ಫೋರಂ
-ಬಲವಂತ್ ರಾಥೋಡ್, ಯೋಜನಾ ನಿರ್ದೇಶಕರು, ಯಾದಗಿರಿ ಜಿ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.