Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
Team Udayavani, Dec 21, 2024, 12:06 AM IST
ಬೆಂಗಳೂರು: ಬೆಸ್ಕಾಂ ಹಾಗೂ ಜಲಮಂಡಳಿ ಕಚೇರಿಗಳ ಮೇಲೆ ಬುಧವಾರ ನಡೆದ ದಾಳಿಯ ವೇಳೆ ದಾಖಲೆ ಇಲ್ಲದ 7 ಲಕ್ಷ ರೂ.ಗಳನ್ನು ಲೋಕಾಯುಕ್ತ ಸಿಬಂದಿ ಹಾಗೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಇಂದಿರಾನಗರದ ಜಲಮಂಡಳಿ ಕಚೇರಿಯ ತಪಾಸಣಾ ಸಮಯದಲ್ಲಿ ಗುತ್ತಿಗೆದಾರನೋರ್ವನ ಬಳಿ 50 ಸಾವಿರ ರೂ., ಕಚೇರಿಯ ಹಿರಿಯ ಸಹಾಯಕನ ಬಳಿ 1.86 ಲಕ್ಷ ರೂ., ಮೊತ್ತೋರ್ವ ಗುತ್ತಿಗೆದಾರನ ಬಳಿ 1.93 ಲಕ್ಷ ರೂ., ಇನ್ನೊಬ್ಬ ಗುತ್ತಿಗೆದಾರನ ಬಳಿ 27.900 ರೂ., ಕಚೇರಿಯ ಕಿರಿಯ ಸಹಾಯಕನ ಬಳಿ 31,830 ರೂ. ಹೀಗೆ ಒಟ್ಟು ರೂ.4.89 ಲಕ್ಷ ರೂ. ಪತ್ತೆಯಾಗಿದೆ. ಕುಂದಲಹಳ್ಳಿ ಜಲಮಂಡಳಿ ಕಚೇರಿಯಲ್ಲಿ 1.30 ಲಕ್ಷ ರೂ., ವಿಜಯನಗರದ ಜಲಮಂಡಳಿ ಕಚೇರಿಯಲ್ಲಿ 66,800, ಕ್ರಸೆಂಟ್ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಓರ್ವ ಸಿಬಂದಿಯ ಬಳಿ 12 ಸಾವಿರ ರೂ., ಬಾಣಸವಾಡಿಯಲ್ಲಿರುವ ಬೆಸ್ಕಾಂ ಕಚೇರಿಯ ಸಿಬಂದಿ ಬಳಿ 13 ಸಾವಿರ ರೂ. ಸೇರಿ 2.2 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಈ ಮೊತ್ತದ ಬಗ್ಗೆ ವಿಚಾರಿಸಲಾಗಿ, ಗುತ್ತಿಗೆದಾರರಾಗಲೀ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ ಎಂದು ಲೋಕಾಯುಕ್ತ ಸಂಸ್ಥೆಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಆನ್‌ಲೈನ್‌ನಲ್ಲೇ ಡೀಲ್?
ಅನೇಕ ಅಧಿಕಾರಿ/ಸಿಬಂದಿ ಫೋನ್ ಪೇ ಹಾಗೂ ಗೂಗಲ್ ಪೇ ಮುಖಾಂತರ ಹಣದ ವಹಿವಾಟುಗಳನ್ನು ನಡೆಸಿರುವುದನ್ನು ಪತ್ತೆ ಹಚ್ಚಲಾಗಿದ್ದು, ಈ ಬಗ್ಗೆಯೂ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ. ಬನಶಂಕರಿ ಬೆಸ್ಕಾಂ ಕಚೇರಿಯ ಜನಸ್ನೇಹಿ ವಿದ್ಯುತ್ ಸೇವೆಗಳ ಕೇಂದ್ರದಲ್ಲಿ ಆನ್‌ಲೈನ್ ಮುಖಾಂತರ ಸಲ್ಲಿಕೆಯಾಗಿರುವ 104 ಅರ್ಜಿಗಳು ಹಾಗೂ ರಿಕ್ವೆಸ್ಟ್ ಎಸ್ಟಿಮೇಟ್‌ನಲ್ಲಿ 122 ಅರ್ಜಿಗಳು ಬಾಕಿ ಇರುವುದು ಕಂಡು ಬಂದಿರುತ್ತದೆ.
ಮೇಲ್ಕಂಡ ಅನಧಿಕೃತ ಹಣವನ್ನು ಹೊರತುಪಡಿಸಿ, ಬಹುತೇಕ ಎಲ್ಲ ಕಚೇರಿಗಳಲ್ಲಿ ಹಾಜರಾತಿ ವಹಿ, ನಗದು ಘೋಷಣಾ ವಹಿ ಹಾಗೂ ಚಲನ-ವಲನ ವಹಿಯನ್ನು ನಿರ್ವಹಣೆ ಮಾಡದೇ ಅಧಿಕಾರಿ ಹಾಗೂ ನೌಕರರು ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.