“ವೀರಶೈವ-ಲಿಂಗಾಯತ ಧರ್ಮ ಜೈ’ ಎಂದಿದ್ದ ಮಾತೆ ಮಹಾದೇವಿ
Team Udayavani, Aug 2, 2017, 8:20 AM IST
ಬೆಂಗಳೂರು: ವೀರಶೈವವನ್ನು ಹೊರತುಪಡಿಸಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಯಾಗಬೇಕೆಂದು ಪ್ರತಿಪಾದಿಸುತ್ತಿರುವ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಈ ಹಿಂದೆ ವೀರಶೈವ ಲಿಂಗಾಯತ ಎರಡೂ ಒಂದೇಯಾಗಿದ್ದು, “ವೀರಶೈವ ಧರ್ಮ’ ಸ್ಥಾಪನೆಗೆ ಒತ್ತಾಯಿಸುವ ವೀರಶೈವ ಮಹಾಸಭೆಯ ನಿರ್ಣಯಕ್ಕೆ ಸಹಿ ಹಾಕಿರುವ ಸಂಗತಿ ಈಗ ಬೆಳಕಿಗೆ ಬಂದಿದೆ.
“ವೀರಶೈವರು ಲಿಂಗಾಯತರೇ ಅಲ್ಲ, ಬಸವಣ್ಣನವರ ಅನುಯಾಯಿಗಳೂ ಅವರಲ್ಲ’ ಎಂದು ಈಗ ಬಹಿರಂಗ ಹೇಳಿಕೆ ನೀಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರ್ಯಾಲಿಗಳನ್ನು ನಡೆಸುತ್ತಿರುವ ಮಾತೆ ಮಹಾದೇವಿ ಅವರು ಈ ಹಿಂದೆ ವೀರಶೈವ ಲಿಂಗಾಯತ ಧರ್ಮ ಸ್ಥಾಪನೆಗೆ ತಾವೇ ಆಸಕ್ತಿ ವಹಿಸಿ ಮಹಾಸಭೆಯ ಕಾರ್ಯಕ್ರಮದಲ್ಲಿ ನಿರ್ಣಯ
ಬೆಂಬಲಿಸಿ ಅಂಕಿತ ಹಾಕಿದ್ದ ಹಸ್ತಾಕ್ಷರದ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ.
ಬೆಂಗಳೂರಿನ ಶೇಷಾದ್ರಿ ರಸ್ತೆಯ ಕೇಂದ್ರ ಕಚೇರಿಯಲ್ಲಿ 1987 ಸೆಪ್ಟೆಂಬರ್ 20 ರಂದು ಐ.ಎಂ. ಮಗುªಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 59 ಜನ ಪಾಲ್ಗೊಂಡಿದ್ದು, ಈ ಸಭೆಯಲ್ಲಿ ಮಾತೆ ಮಹಾದೇವಿ ಹಾಗೂ ಸದ್ಗುರು ಲಿಂಗಾನಂದ ಸ್ವಾಮೀಜಿ ಪಾಲ್ಗೊಂಡಿದ್ದಾರೆ. ಅಲ್ಲದೇ ಮಾತೆ ಮಹಾದೇವಿಯವರೇ ಪ್ರಾಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಆ ಸಭೆಯಲ್ಲಿ ಪ್ರಮುಖವಾಗಿ ವೀರಶೈವ ಪ್ರತ್ಯೇಕ ಧರ್ಮದ ಬೇಡಿಕೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು,
ವೀರಶೈವರೆಲ್ಲರೂ ವರ್ಷಕ್ಕೆ ಒಂದು ಬಾರಿ ಒಂದು ನಿರ್ದಿಷ್ಠ ಸ್ಥಳದಲ್ಲಿ ಒಂದುಗೂಡಬೇಕು. ಆ ಕಾರ್ಯಕ್ರಮಕ್ಕೆ
ಶರಣ ಮೇಳ ಎಂದು ಹೆಸರಿಸುವುದಾಗಿಯೂ, ಸಮ್ಮೇಳನ ಸೇರಲು ಕೂಡಲ ಸಂಗಮ ಕ್ಷೇತ್ರ ಸೂಕ್ತ ಸ್ಥಳವೆಂದು ಮಾತೆ ಮಹಾದೇವಿ ಭಾಷಣ ಮಾಡಿದ್ದರು.
ಈ ಶರಣ ಮೇಳದಿಂದ ವೀರಶೈವರೆಲ್ಲ ಒಂದೇ ಎಂಬ ಭಾವನೆ ಮೈಗೂಡುತ್ತದೆ. ಎಲ್ಲ ಭಾಗದಿಂದ ಬಂದವರಿಗೆ ಎಲ್ಲರೊಂದಿಗೆ ಬೆರೆಯುವುದರಿಂದ ಎಲ್ಲರಿಗೂ ಬಸವ ತತ್ವದ ಅರಿವಾಗುತ್ತದೆ. ಈ ಸಮ್ಮೇಳ ನಕ್ಕೆ ಜಗತ್ತಿನ ಎಲ್ಲ ಬೇರೆ ಬೇರೆ ದೇಶಗಳಿಂದಳೂ ಶರಣರನ್ನು ಆಹ್ವಾನಿಸಿ, ಬಸವ ತತ್ವವನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡುವುದು. ಅಲ್ಲದೇ
ಕ್ರಿಶ್ಚಿಯನ್ನರಿಗೆ ಜೆರುಸಲೇಂ, ಮುಸ್ಲಿಮರಿಗೆ ಮೆಕ್ಕಾ ಹೇಗೋ ಹಾಗೆ ವೀರಶೈವ ಲಿಂಗವಂತರಿಗೆ ಕೂಡಲ ಸಂಗಮ ಒಂದು ಮೆಕ್ಕಾ, ಜೇರುಸಲೇಂ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೇ ವೀರಶೈವ ಮಹಾಸಭೆಯಿಂದ ಪ್ರತಿ ವರ್ಷ ಮೂರು ದಿನ ಶರಣ ಮೇಳ ನಡೆಸಲು ತೀರ್ಮಾನಿಸಿ, ಆ ಮೇಳದ ಕೋಶಾಧ್ಯಕ್ಷರಾಗಿಯೂ ಮಾತೆ ಮಹಾದೇವಿ ಕಾರ್ಯ ನಿರ್ವಹಿಸುತ್ತಾರೆ. ಅದೇ ಸಭೆಯಲ್ಲಿ ದಲಿತ ಜನಾಂಗವನ್ನು ವೀರಶೈವ ಲಿಂಗಾಯತ ಧರ್ಮದ ಚೌಕಟ್ಟಿನಲ್ಲಿ ಸೇರಿಸಿಕೊಳ್ಳುವ ಬಗ್ಗೆಯೂ ಮಾತೆ ಮಹಾದೇವಿ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅಲ್ಲದೇ ಅನೇಕ ಮಠಾಧೀಶರು ಸಿರಿವಂತರಾಗಿದ್ದರೂ, ಪ್ರತಿಯೊಬ್ಬರೂ ಪ್ರತ್ಯೇಕ ಅಸ್ತಿತ್ವಕ್ಕಾಗಿ ಭಾವಿಸಿರುವುದು ವೀರಶೈವರ ಸಂಘಟನೆ ಸಾಧ್ಯವಾಗುತ್ತಿಲ್ಲ. ಯಾರೆಲ್ಲಾ ವೀರಶೈವ ಚೌಕಟ್ಟಿನಲ್ಲಿ ಬರುವರೋ ಅವರೆಲ್ಲಾ ಶರಣರು ಎಂದು ಮಾತೆ ಮಹಾದೇವಿ ಅಂದಿನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಅಂದಿನ ಸಭೆಯಲ್ಲಿ 1991 ರಲ್ಲಿ ನಡೆಯುವ ಜನಗಣತಿ ವೇಳೆ ವೀರಶೈವರಿಗೆ ಪ್ರತ್ಯೇಕ ಧರ್ಮದ ಕಾಲಂ ನೀಡುವಂತೆ ಹಾಗೂ ವೀರಶೈವರನ್ನು ರಾಷ್ಟ್ರೀಯ ಅಲ್ಪ ಸಂಖ್ಯಾತರೆಂದು ಪರಿಗಣಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ.
ಅಂದಿನ ವೀರಶೈವ ಮಹಾಸಭೆಯ ಎಲ್ಲ ನಿರ್ಣಯಗಳಿಗೂ ಬೆಂಬಲ ಸೂಚಿಸಿ ಮಾತೆ ಮಹಾದೇವಿ ಸಹಿ ಹಾಕಿದ್ದಾರೆ. ಅಲ್ಲದೇ ಮಠಾಧೀಶರ ಸ್ವಾರ್ಥಕ್ಕೆ ಧರ್ಮ ಒಡೆಯಬಾರದು ಎಂದು ಹೇಳಿದ್ದ ಮಾತೆ ಮಹಾದೇವಿ ಕ್ರಮೇಣ ವೀರಶೈವ ಮಹಾಸಭೆಯಿಂದ ದೂರ ಸರಿದು. ಲಿಂಗಾನಂದ ಸ್ವಾಮೀಜಿ ಜೊತೆಗೆ ಸೇರಿಕೊಂಡು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.