![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 10, 2022, 4:01 PM IST
ದೊಡ್ಡಬಳ್ಳಾಪುರ: ”ಈ ಪುಣ್ಯ ಭೂಮಿಯಲ್ಲಿ ಮತ್ತೆ ಕಮಲ ಅರಳಿಸುವ ಸಂಕಲ್ಪ ನಡೆಸಲಾಗುವುದು” ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶನಿವಾರ ಬಿಜೆಪಿ ”ಜನ ಸ್ಪಂದನ” ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.
ಸಮಾವೇಶವನ್ನುದ್ದೇಶಿಸಿ ಮಾತನಾಡಿ, ”ಇದು ಸಂಗ್ರಾಮದ ವೇದಿಕೆ. ಕಾಂಗ್ರೆಸ್ ಕುಟುಂಬದ ರಾಜಕುಮಾರರು ಹೊಸ ಅವತಾರ ತಾಳಿ ಬರುತ್ತಿದ್ದಾರೆ. ಭಾರತ ಜೋಡಿಸಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ದೇಶ ಇಬ್ಬಾಗ ಮಾಡಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನೇಕೆ ನಿರ್ಲಕ್ಷ್ಯ ಮಾಡಿದ್ದರು? . ಮೋದಿ ಸರ್ಕಾರ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯೋಜನಾ ಆಯೋಗದ ಮೂಲಕ 5000 ಕೋಟಿ ರೂ. ನೀಡಲಾಗಿದೆ. ಹೈ ವೇ ನಿರ್ಮಾಣ ಮಾಡಲು ಕರ್ನಾಟಕಕ್ಕ. 9000 ಕೋಟಿ ಹಣ ನೀಡಿದೆ. ಭಾರತ ಮಾಲಾ ಯೋಜನೆ ಅಡಿಯಲ್ಲಿ 55 ಸಾವಿರ ಕೋಟಿ ರೂ. ಯೋಜನೆ ಜಾರಿಗೆ ಬರಲಿದೆ” ಎಂದರು.
”ದೇಶದಲ್ಲಿ ಎನ್ ಇಪಿ ಜಾರಿಗೆ ತಂದ.ಮೊದಲ ರಾಜ್ಯ ಕರ್ನಾಟಕ. ಇದಕ್ಕೆ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕವನ್ನು ಸೆಮಿಕಂಡಕ್ಟರ್ ಹಬ್ ಮಾಡಲಾಗುವುದು. 15000 ಕೋಟಿ ರೂ. ವೆಚ್ಚದ ಸಬರ್ ಬನ್ ಯೋಜನೆ ಜಾರಿಗೆ ತರಲಾಗಿದೆ. ಫಾರ್ಮರ್ ಪ್ರೊಡೂಸರ್ ಕಂಪನಿಗಳಿಗೆ 30 ಲಕ್ಷ ಹಣ ನಿಡಿ ಕೃಷಿ ಅಭಿವೃದ್ಧಿಗೆ ಶ್ರಮಿಸಿದ್ದಕ್ಕೆ ಧನ್ಯವಾದಗಳು. ಕೆಲವೇ ದಿನಗಳಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಆತ್ಮ ನಿರ್ಭರ ಆಗಲಿದೆ” ಎಂದರು.
”ಈ ದೇಶದಲ್ಲಿ ಭಾರತವನ್ನು ಪಡೆದವರು ಯಾರು ಎಂದು ಹೇಳಬೇಕು. ವಲ್ಲಬಭಾಯಿ ಪಟೇಲ್ ಪ್ರತಿಮೆಗೆ ಮಾಡಿ ಇಡೀ ವಿಶ್ವವೇ ಮೆಚ್ಚಿದೆ.ಸ್ವಾಮಿ ವಿವೇಕಾನಂದವರ ಪ್ರತಿಮೆಗೆ ಒಂದು ನಮನ ಸಲ್ಲಿಸಲಿಲ್ಲ. ಯಾಕೆಂದರೆ ಅವರು ಗಾಂದಿ ಕುಟುಂಬದವರಲ್ಲ. ಪ್ರಧಾನಿ ರಾಜಪಥವನ್ನು ಕರ್ತವ್ಯಪಥ ಎಂದು ಘೋಷಿಸಿ, ಸುಭಾಸಚಂದ್ರ ಬೋಸ್ ಅವರರ ಪ್ರತಿಮೆ ನಿರ್ಮಿಸಿದರು, ಅದಕ್ಕೆ ಗಾಂಧಿ ಕುಟುಂಬ ದಿಂದ ಒಂದು ಮಾತು ಬರಲಿಲ್ಲ ಯಾಕೆಂದರೆ ಅವರು ಗಾಂಧಿ ಕುಟುಂಬದವರಲ್ಲ” ಎಂದರು.
”ಪ್ರವೀಣ್ ನೆಟ್ಟಾರು ಬಿಜೆಪಿ.ಕಾರ್ಯಕರ್ತ,ಅವರು ಈ ದೇಶಕ್ಕಾಗಿ ರಕ್ತ ಕಳೆದುಕೊಂಡಿದ್ದಾರೆ” ಎಂದರು.
”ಪ್ರಧಾನಿ ಕೋವಿಡ್ ಸಂದರ್ಭದಲ್ಲಿ ನಮ್ಮದೇ ಲಸಿಕೆ ಉತ್ಪಾದನೆ ಮಾಡಿ ಎಲ್ಲರಿಗೂ ನೀಡಲಾಗುವುದು ಎಂದು ಎಲ್ಲರಿಗೂ ನೀಡಿದ್ದೇವೆ.ಭಾರತ ಜೋಡೊ ಯಾತ್ರೆಯಲ್ಲಿ ಯಾರ ಜತೆ ಹೆಜ್ಜೆ ಹಾಕುತ್ತಿದ್ದೀರಿ. ಭಾರತ ತುಕ್ಡೆ ತಿಕ್ಡೆ ಹೋಂಗೆ ಅಂತ ಹೇಳಿದವರನ್ನು ಜೊತೆಗೆ ಕರೆದುಕೊಂಡು ಹೊಗುತ್ತಿದ್ದೀರಿ.ರಾಹುಲ್ ಗಾಂಧಿ ಈ ದೇಶದ ರಾಜ್ಯಗಳ ಸ್ಬರಾಜ್ಯಕ್ಕಾಗಿ ಹೋರಾಡುವುದಾಗಿ ಹೇಳಿದ್ದೀರಿ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೆವೆ. ಈ ರೀತಿ ದೇಶ ವಿರೋಧಿ ಹೇಳಿಕೆಯನ್ನು ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಹೇಗೆ ಸ್ವೀಕರಿಸುತ್ತೀರಿ ಎಂದು ಕೇಳುತ್ತೇನೆ.
ರಾಹುಲ್ ಗಾಂಧಿ ಈ ದೇಶದಲ್ಲಿ ದೇಶಪ್ರೇಮಿಗಳು ಇರುವವರೆಗು ಈ ದೇಶ ಇಬ್ಭಾಗ ಅಗಲು ಬಿಡುವುದಿಲ್ಲ. ರಾಹುಲ್ ಗಾಂಧಿ ಈ ಭಾಗಕ್ಕೆ ಬಂದರೆ ಅದಕ್ಕೆ ಉತ್ತರ ನೀಡಬೇಕು” ಎಂದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.