ಮಲಬಾರ್ ಗೋಲ್ಡ್, ಡೈಮಂಡ್‌ನಲ್ಲಿ ಅಲೀಯಂ ವಜ್ರಾಭರಣದ ಸಂಗ್ರಹ
Team Udayavani, Jun 15, 2019, 3:02 AM IST
ಬೆಂಗಳೂರು: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಈಗ ಅಲೀಯಂ ವಜ್ರಾಭರಣಗಳ ಕಲೆಕ್ಷನ್ ಪರಿಚಯಿಸಿದೆ. ಅಲೀಯಂ ಹೂಗಳ ಸೊಬಗಿನಿಂದ ಪ್ರೇರಣೆ ಪಡೆದು ವಿನೂತನ ವಿನ್ಯಾಸದ ವಜ್ರಾಭರಣಗಳನ್ನು ಸಂಗ್ರಹಿಸಲಾಗಿದ್ದು, ಇದರ ದರ 50 ಸಾವಿರ ರೂ.ಗಳಿಂದ ಆರಂಭವಾಗಲಿದೆ.
ನಕ್ಲೆಸ್, ಪೆಂಡಾಲ್ ಸೆಟ್, ಕಿವಿಯೋಲೆ, ಬಳೆ ಇತ್ಯಾದಿಗಳು ಅತಿ ಸುಂದರವಾದ ವಿನ್ಯಾಸದಿಂದ ಕೂಡಿದೆ. ಅತಿ ಹಗುರವಾದ ವಜ್ರಾಭರಣ, ಸಮಾರಂಭ ಹಾಗೂ ವಿಶೇಷ ಆಚರಣೆಯ ಸಂದರ್ಭದಲ್ಲಿ ಮತ್ತು ಮದುವೆಗೆ ಅವಶ್ಯವಿರುವ ಹೊಸ ವಿನ್ಯಾಸದ ವಜ್ರಾಭರಣ ಇಲ್ಲಿವೆ.
ಹೊಸ ಟ್ರೆಂಡ್‌ಗೆ ತಕ್ಕಂತೆ, ಅತಿಸೂಕ್ಷ್ಮವಾಗಿ ಕೆತ್ತಲಾಗಿರುವ ಅಲೀಯಂ ಸಂಗ್ರಹಗಳು ವಜ್ರಾಭರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಮಹಿಳೆಯರು ಮತ್ತು ವಜ್ರಾಭರಣವನ್ನು ಇಷ್ಟಪಡುವ ಗೃಹಿಣಿಯರನ್ನು ಗಮನದಲ್ಲಿಟ್ಟುಕೊಂಡು ಅಲೀಯಂ ಸಂಗ್ರಹ ಮಾಡಲಾಗಿದೆ. ಸೂಕ್ಷ್ಮಾತಿಸೂಕ್ಷ್ಮ ವಿನ್ಯಾಸ ಇರುವುದರಿಂದ ಎಲ್ಲರೂ ಇಷ್ಟಪಡುವಂತಿದೆ ಎಂದು ಮಲಬಾರ್ ಸಮೂಹದ ಮುಖ್ಯಸ್ಥ ಎಂ.ಪಿ.ಅಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಐಜಿಐ ಹಾಗೂ ಜಿಐಎ ಪ್ರಮಾಣಿಕರಿಸಿರುವ ವಜ್ರಾಭರಣಗಳನ್ನು ಬಿಐಎಸ್ ಹಾಲ್ಮರ್ಕ್ 916 ಚಿನ್ನಾಭರಣವನ್ನು ಮಾತ್ರ ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ನಿಂದ ಮಾರಾಟ ಮಾಡಲಾಗುತ್ತಿದೆ. ಎಲ್ಲ ಉತ್ಪನ್ನಗಳಿಗೆ ವಿವರವಾದ ಹಾಗೂ ಪಾರದರ್ಶಕವಾದ ದರಪಟ್ಟಿ ಇರುತ್ತದೆ.
ಜೀವನ ಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷದ ಉಚಿತ ವಿಮಾ ಸೌಲಭ್ಯ ಜತೆಗೆ ಬೈಬ್ಯಾಕ್ ಗ್ಯಾರಂಟಿಯನ್ನು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ನೀಡುತ್ತಿದೆ. 1993ರಲ್ಲಿ ಕೇರಳದಲ್ಲಿ ಆರಂಭವಾದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಸಂಸ್ಥೆ ಈಗ ಮಲಬಾರ್ ಸಮೂಹದ ಹೆಸರಿನಲ್ಲಿ 10 ದೇಶಗಳಲ್ಲಿ 250 ಮಳಿಗೆಗಳನ್ನು ಹೊಂದಿದ್ದು, ಭಾರತದಲ್ಲಿ ಮುಂಚೂಣಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.