![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 17, 2019, 3:05 AM IST
ಬೆಂಗಳೂರು: ವಿಶ್ವದ ಅತಿ ದೊಡ್ಡ ಆಭರಣಗಳ ಸಮೂಹದಲ್ಲಿ ಒಂದಾದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಮೂಹದ 26ನೇ ಮಳಿಗೆಯನ್ನು ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಉದ್ಘಾಟಿಸಿದರು.
ರಾಜ್ಯದಲ್ಲಿ ಈಗಾಗಲೇ ಹಲವು ಮಳಿಗೆಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಬೆಂಗಳೂರಿ ನಾದ್ಯಂತ ಏಳು ಮಳಿಗೆಗಳನ್ನು ಹೊಂದಿದೆ. ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ವ್ಯಾಪಾರ ವನ್ನು ವಿಸ್ತರಿಸಿರುವ ಮಲಬಾರ್ ಸಮೂಹ, ಒಟ್ಟು 250 ಮಳಿಗೆಗಳನ್ನು ಹೊಂದಿದೆ.
ನೂತನ ಮಳಿಗೆಯಲ್ಲಿ ಒಟ್ಟು ಆರು ವಿಭಾಗಗಳಿದ್ದು, ಪ್ರೇಶಿಯಾ, ಎರಾ, ಮೈನ್, ಎಥಿ°ಕ್,ಡಿವೈನ್ ಮತ್ತು ಸ್ಟಾರ್‌ಲೆಟ್ ಎಂದು ವಿಭಜಿಸಲಾಗಿದೆ. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಗುಣಮಟ್ಟ ಹಾಗೂ ಹೊಸ ಟ್ರೆಂಡ್‌ಗೆ ಹೋಲುವಂತಹ ಆಭರಣಗಳನ್ನು ಸಿದ್ದಪಡಿಸಲಾಗಿದೆ.
ಈ ಎಲ್ಲಾ ವಿಭಾಗಗಳಲ್ಲಿ ಮೊದಲು ಆಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ನಟಿ ತಮನ್ನಾ ಕೈಯಲ್ಲಿ ಆಭರಣಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಯಿತು. ಪ್ರೇಶಿಯಾದಲ್ಲಿ ಮಮತಾ, ಎಥಿ°ಕ್ಸ್‌ನಲ್ಲಿ ರವೀಂದ್ರ ರೆಡ್ಡಿ, ಮೈನ್ ವಿಭಾಗದಲ್ಲಿ ಆನಂದ್, ಡಿವೈನ್‌ನಲ್ಲಿ ಲಾವಣ್ಯ, ಎರಾದಲ್ಲಿ ಆರ್.ಎಫ್.ಖಾನ್, ಸ್ಟಾರ್‌ಲೆಟ್‌ನಲ್ಲಿ ಮಹಮದ್ ಇಮ್ರಾನ್ ಮೊದಲ ಆಭರಣಗಳನ್ನು ಖರೀದಿಸಿದರು.
ಇದೇ ವೇಳೆ ಫಕೀರೇಶ್ ಎಂಬ ಚಿತ್ರಕಲಾವಿದ ತಮನ್ನಾರ ಭಾವಚಿತ್ರವನ್ನು ಬಿಡಿಸಿ ತಮನ್ನಾಗೆ ಉಡುಗೊರೆಯಾಗಿ ನೀಡಿದರು. ನಂತರ ಮಾತನಾಡಿದ ತಮನ್ನಾ, ಮಲಬಾರ್ ಆಭರಣಗಳು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಮತ್ತು ಪ್ರಶಂಸೆಯನ್ನು ಪಡೆದಿವೆ. ಆಭರಣಗಳ ಖರೀದಿಯಲ್ಲಿ ನನ್ನ ಮೊದಲ ಆಯ್ಕೆ ಮಲಬಾರ್ ಮಾತ್ರ ಆಗಿರುತ್ತದೆ ಎಂದರು.
ನಂತರ ಮಾತನಾಡಿದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಆಷರ್ ಓ, ಆಭರಣ ಪ್ರಿಯರ ಅಭಿರುಚಿಗೆ ತಕ್ಕಂತೆ ಸಾಂಪ್ರದಾಯಿಕ ಮತ್ತು ಆಧುನಿಕ ಆಭರಣಗಳನ್ನು ಮಲಬಾರ್ ಸಮೂಹ ನೀಡುತ್ತಿದೆ.
ಪಾರದರ್ಶಕತೆ, ಶುದ್ದ ಬಂಗಾರದ ಪ್ರಾಮಾಣೀಕರಣಕ್ಕೆ ಬಿಐಎಸ್ ಹಾಲ್ ಮಾರ್ಕ್, ಜೀವನಪರ್ಯಂತ ನಿರ್ವಹಣೆ, ಉಚಿತ ವಿಮೆಯಂತಹ ಸೌಲಭ್ಯಗಳನ್ನು ಸಂಸ್ಥೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ, ಸಂಸ್ಥೆಯ ಮುಖ್ಯಸ್ಥ, ಎಂ.ಪಿ.ಅಹ್ಮದ್, ಸಿಬ್ಬಂದಿ ಉಪಸ್ಥಿತರಿದ್ದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.