ಹೊಸ ವರ್ಷದ ಮೊದಲ ವಾರ ಮಲೇಷಿಯಾ ಮರಳು ಲಭ್ಯ
Team Udayavani, Dec 29, 2017, 6:20 AM IST
ಬೆಂಗಳೂರು: ರಾಜ್ಯದಲ್ಲಿ ನೈಸರ್ಗಿಕ ನದಿ ಮರಳಿನ ಕೊರತೆ ನಿವಾರಿಸಲು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಮಲೇಷಿಯಾದಿಂದ ಮರಳು ಆಮದಿಗೆ ಮುಂದಾಗಿದ್ದು, ಹೊಸ ವರ್ಷದ ಮೊದಲ ವಾರದಲ್ಲಿ ಗ್ರಾಹಕರಿಗೆ 195 ರೂ. ದರದಲ್ಲಿ 50 ಕೆ.ಜಿ. ಮರಳಿನ ಮೂಟೆ ಸಿಗಲಿದೆ.
ಏರಿಳಿತ: ಎಂಎಸ್‌ಐಎಲ್ ಬೆಂಗಳೂರಿನಲ್ಲಿ ಒಂದು ಟನ್ ಮಲೇಷಿಯಾ ನೈಸರ್ಗಿಕ ನದಿ ಮರಳಿಗೆ 3,900 ರೂ. ದರ ನಿಗದಿ ಪಡಿಸಿದೆ. ಆರಂಭದಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಹಾಗೂ ಹುಬ್ಬಳ್ಳಿ- ಧಾರವಾಡಗಳಲ್ಲಿ ಎಂಎಸ್‌ಐಎಲ್ ಸ್ಥಾಪಿಸಲಿರುವ ಯಾರ್ಡ್‌ಗಳಲ್ಲಿ ಮರಳಿನ ಮೂಟೆಗಳು ಲಭ್ಯವಾಗಲಿವೆ. ಅಂತರಕ್ಕೆ ತಕ್ಕಂತೆ ಮೂಟೆಯ ಬೆಲೆಯಲ್ಲೂ ಏರಿಳಿತವಾಗಲಿದೆ.
ಪರದಾಟ: ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ನೈಸರ್ಗಿಕ ನದಿ ಮರಳಿನ ಗಣಿಗಾರಿಕೆಗೆ ನಿಷೇಧವಿರುವುದರಿಂದ ಪರ್ಮಿಟ್, ರಸೀದಿ
ಇಲ್ಲದೆ ಅಕ್ರಮವಾಗಿ ಪೂರೈಕೆಯಾಗುವ ಮರಳನ್ನೇ ಜನ ಬಳಸಬೇಕಾದ ಅನಿವಾರ್ಯತೆ ಇದೆ. ಕೆಲ ವರ್ಷಗಳಿಂದ
ನೈಸರ್ಗಿಕ ಮರಳಿನ ಬೇಡಿಕೆ, ಬೆಲೆ ಏರುಮುಖವಾಗಿದೆ. ಹಾಗಾಗಿ ಗ್ರಾಹಕರು ಪರದಾಡುವಂತಾಗಿದೆ.
ಮುಕ್ತ ಅವಕಾಶ: ನೈಸರ್ಗಿಕ ಮರಳಿನ ಅಭಾವ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಲೇಷಿಯಾದಿಂದ ಮರಳು
ಆಮದಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಈ ಸಂಬಂಧ ಉಪಖನಿಜ ನಿಯಮಾವಳಿಗೆ ಇತ್ತೀಚೆಗೆ ತಿದ್ದುಪಡಿ ತರಲಾಗಿದೆ. ಅದರಂತೆ ಯಾರು ಬೇಕಾದರೂ ನಿಯಮಾನುಸಾರ ಮಲೇಷಿಯಾದಿಂದ ಮರಳು ಆಮದು ಮಾಡಿಕೊಂಡು ಮಾರಾಟ ಮಾಡಲು ಅವಕಾಶವಿದೆ. ಸರ್ಕಾರದ ಎಂಎಸ್‌ಐಎಲ್ ಸಂಸ್ಥೆಯು ಮರಳು ಆಮದು ಮಾಡಿಕೊಂಡು ಸ್ಪರ್ಧಾತ್ಮಕ ಬೆಲೆಯಲ್ಲಿ ಜನರಿಗೆ ಮಾರಾಟ ಮಾಡಲು ಮುಂದಾಗಿದೆ. ಖಾಸಗಿ ಸಂಸ್ಥೆಗಳು ಈ ವ್ಯವಹಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ.
ಪೂರೈಕೆ ಹೇಗೆ?
ಮಲೇಷಿಯಾದಿಂದ ಹಡಗಿನಲ್ಲಿ ಆಂಧ್ರಪ್ರದೇಶದ ಕೃಷ್ಣ ಪಟ್ಟಣಂಗೆ ಪೂರೈಕೆಯಾಗುವ ನೈಸರ್ಗಿಕ ಮರಳು ಅಲ್ಲಿಯೇ 50
ಕೆ.ಜಿ. ಚೀಲಗಳಲ್ಲಿ ಶೇಖರಣೆಯಾಗಲಿದೆ. ನಂತರ ಮರಳಿನ ಮೂಟೆಗಳನ್ನು ರೈಲಿನಲ್ಲಿ ಬೆಂಗಳೂರಿಗೆ ಪೂರೈಸಲಾಗುತ್ತದೆ.
ಬಿಡದಿ, ಕ್ಯಾತಸಂದ್ರ, ದೊಡ್ಡಬಳ್ಳಾಪುರ, ಚನ್ನಸಂದ್ರ ಸೇರಿ ಬೆಂಗಳೂರಿನ ಸುತ್ತಮುತ್ತ ಆಯ್ದ ಕಡೆ ಯಾರ್ಡ್‌ಗಳಲ್ಲಿ ಮರಳಿನ
ಮೂಟೆ ಮಾರಾಟ ವ್ಯವಸ್ಥೆಯನ್ನು ಎಂಎಸ್‌ಐಎಲ್ ಕಲ್ಪಿಸಲಿದೆ. ಮಂಡ್ಯ, ಮೈಸೂರು, ಹುಬ್ಬಳ್ಳಿ- ಧಾರವಾಡಗಳಲ್ಲಿ ತಲಾ ಒಂದು ಯಾರ್ಡ್ ತೆರೆದು ಮಾರಾಟ ಮಾಡಲು ತೀರ್ಮಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.