ಕೈದಿಗಳ ನಿರ್ವಹಣೆಯೇ ಇಲಾಖೆಗೆ ಸವಾಲು! ಜೈಲಿನಲ್ಲಿ ಕೈದಿಗಳುಂಟು, ಸಿಬಂದಿಯೇ ಇಲ್ಲ!
ಕಾರಾಗೃಹ ಇಲಾಖೆಯಲ್ಲಿ 1,015 ಹುದ್ದೆಗಳು ಖಾಲಿ
Team Udayavani, Feb 26, 2023, 7:50 AM IST
ಬೆಂಗಳೂರು: ರಾಜ್ಯದ ಲ್ಲಿರುವ 54 ಕಾರಾಗೃಹಗಳಲ್ಲಿ ಕೈದಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಸದ್ಯ ಮಿತಿಗಿಂತ ಹೆಚ್ಚುವರಿಯಾಗಿ ಬರೊಬ್ಬರಿ 973 ಕೈದಿಗಳು ಕಂಬಿ ಎಣಿಸುತ್ತಿದ್ದಾರೆ. ಆದರೆ, 1,015 ಜೈಲು ಸಿಬಂದಿ ಕೊರತೆ ಎದುರಾಗಿರುವುದರಿಂದ ಪೊಲೀಸ್ ಇಲಾಖೆಗೆ ಕಾರಾಗೃಹಗಳ ನಿರ್ವಹಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬೇರೆಡೆ ಕಳುಹಿಸಲು ಅವಕಾಶಗಳಿಲ್ಲ. ಜೈಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಠಡಿ, ಹಾಸಿಗೆ, ಶೌಚಾಲಯ, ಕುಡಿವ ನೀರು, ಆಹಾರ ಸೇರಿದಂತೆ ಇತರ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ. ಹೀಗಾಗಿ ಪ್ರಸ್ತುತವಿರುವ ಕಾರಾಗೃಹ ಕಟ್ಟಡದ ಕೊಠಡಿಗಳಲ್ಲಿ ಕೈದಿಗಳು ತೀರಾ ಇಕ್ಕಟ್ಟಿನಲ್ಲಿ ಇರುವ ಸ್ಥಿತಿ ಬಂದೊದಗಿದೆ. ಕೆಲವು ವರ್ಷಗಳಿಂದ ಹೊಂದಾಣಿಕೆ ಮಾಡಿಕೊಂಡೇ ದಿನ ದೂಡಿರುವ ಕೈದಿಗಳು ಇದೀಗ ಕೊಠಡಿ, ಸ್ನಾನಗೃಹದಂತಹ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. 973 ಹೆಚ್ಚುವರಿ ಕೈದಿಗಳ ನಿರ್ವಹಣೆಗೆ ರಾಜ್ಯ ಪೊಲೀಸ್ ಇಲಾಖೆಯೂ ಹೆಣಗಾಡುತ್ತಿದೆ. ತಾಲೂಕು ಕಾರಾಗೃಹಗಳಲ್ಲಿ ಕೈದಿಗಳ ಪ್ರಮಾಣ ಮಿತಿಯಲ್ಲಿದ್ದು, ಗ್ರಾಮೀಣ ಭಾಗಗಳು ಅಪರಾಧ ಪ್ರಕರಣಗಳಿಂದ ಮುಕ್ತವಾಗುವ ಕಡೆಗೆ ಹೆಜ್ಜೆ ಹಾಕುತ್ತಿವೆ ಎಂಬ ಅಂಶಗಳಿಗೆ ಪುಷ್ಠಿ ನೀಡುತ್ತದೆ.
ಮಂಗಳೂರಲ್ಲೂ ಮಿತಿಗಿಂತ ಹೆಚ್ಚು
ಕರ್ನಾಟಕದ 54 ಕಾರಾಗೃಹಗಳಲ್ಲಿ ಗರಿಷ್ಠ 15,426 ಕೈದಿಗಳಿಗೆ ಇರಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೈದಿಗಳ ಪ್ರಮಾಣವು 16,339ಕ್ಕೆ ಏರಿಕೆಯಾಗಿದೆ. ಇವರ ನಿರ್ವಹಣೆಗೆಂದೇ ಕಾರಾಗೃಹ ಇಲಾಖೆಯಲ್ಲಿ ಒಟ್ಟು 3,985 ಹುದ್ದೆ ಸೃಜಿಸಲಾಗಿದೆ. ಈ ಪೈಕಿ 2,970 ಸಿಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಮಿತಿ ಮೀರಿದರೂ 1,015 ಜೈಲು ಸಿಬಂದಿ ಹುದ್ದೆಗಳು ಕೆಲವು ವರ್ಷಗಳಿಂದ ಖಾಲಿ ಇವೆ. ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯದಲ್ಲೇ ಮಿತಿಗಿಂತ ಹೆಚ್ಚು ಕೈದಿಗಳಿದ್ದರೆ, ಕಲಬುರಗಿ, ಮಂಗಳೂರು ಅನಂತರದ ಸ್ಥಾನ ದಲ್ಲಿವೆ.
ವಿಚಾರಣಾಧೀನ
ಕೈದಿಗಳೇ ಅಧಿಕ
ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ, ಕಳ್ಳತನ, ಅತ್ಯಾಚಾರ, ವಂಚನೆ ಸೇರಿದಂತೆ ಸಾವಿರಾರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಶೇ. 72ರಷ್ಟು ವಿಚಾರಣಾಧೀನ ಕೈದಿಗಳಿದ್ದು, ಈ ಆರೋಪಿಗಳು ನ್ಯಾಯಾಲಯದ ವಿಚಾರಣೆಗಾಗಿ ಕಾಯುತ್ತಿದ್ದಾರೆ. ಇನ್ನುಳಿದ ಶೇ.28 ರಷ್ಟು ಶಿಕ್ಷೆಗೊಳಗಾದ ಅಪರಾಧಿ ಗಳಿದ್ದಾರೆ.
ಕಾರಾಗೃಹ ಇಲಾಖೆಯು ಕೈದಿಗಳ ನಿರ್ವಹಣೆಗಾಗಿ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ರಾಜ್ಯದ ಕೆಲವು ಜೈಲುಗಳಲ್ಲೂ ಮಿತಿಗಿಂತ ಹೆಚ್ಚು ಕೈದಿಗಳಿದ್ದಾರೆ.
– ಮನೀಶ್ ಖರ್ಬಿಕರ್,
ಎಡಿಜಿಪಿ, ರಾಜ್ಯ ಕಾರಾಗೃಹ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.