Govt ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಕಡ್ಡಾಯಕ್ಕೆ ಆದೇಶ
Team Udayavani, May 19, 2024, 11:46 PM IST
ಬೆಂಗಳೂರು: ಎಲ್ಲ ಸರಕಾರಿ ಕಚೇರಿಗಳಲ್ಲೂ ಇ-ಆಫೀಸ್ ಅನುಷ್ಠಾನಕ್ಕೆ ಒತ್ತು ಕೊಡಲಾಗುತ್ತಿದೆಯಾದರೂ ನಿರೀಕ್ಷಿತ ಗುರಿ ಮಾತ್ರ ಮುಟ್ಟಿಲ್ಲ. ತುರ್ತಾಗಿ ಇ-ಆಫೀಸ್ ತಂತ್ರಾಂಶ ಅನುಷ್ಠಾನಗೊಳಿಸಿ ಕಡ್ಡಾಯವಾಗಿ ಕಡತ ನಿರ್ವಹಣೆಯನ್ನು ಅದೇ ತಂತ್ರಾಂಶದ ಮೂಲಕ ನಿರ್ವಹಿಸುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ), ಸಕಾಲ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಆದೇಶಿಸಿದ್ದಾರೆ.
ಬಹುತೇಕ ಎಲ್ಲ ಸಚಿವಾಲಯ ಹಾಗೂ ಸಚಿವರ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳ್ಳುತ್ತಿದ್ದು, ಆಯುಕ್ತಾಲಯ, ನಿರ್ದೇಶನಾಲಯಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಆದರೆ ಜಿಲ್ಲೆ ಮತ್ತು ತಾಲೂಕು ಮಟ್ಟದ ಸರಕಾರಿ ಕಚೇರಿಗಳು ಹಾಗೂ ನಿಗಮ, ಮಂಡಳಿಗಳ ಕಚೇರಿಗಳು ಈ ವಿಚಾರದಲ್ಲಿ ಹಿಂದೆ ಬಿದ್ದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿ ಬರುವ 2 ಆಯುಕ್ತಾಲಯದಲ್ಲಿ ಇ-ಆಫೀಸ್ ಅನುಷ್ಠಾನಗೊಂಡಿಲ್ಲ. ಅದೇ ರೀತಿ ಒಳಾಡಳಿತ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಮೂರು ನಿರ್ದೇಶನಾಲಯಗಳಲ್ಲೂ ಜಾರಿಯಾಗಿಲ್ಲ. ರಾಜ್ಯದಲ್ಲಿರುವ 6,240 ಜಿಲ್ಲಾ ಮಟ್ಟದ ಕಚೇರಿಗಳ ಪೈಕಿ 1,145 ಕಚೇರಿಗಳಲ್ಲಿ ಮಾತ್ರ ಇ-ಆಫೀಸ್ ಜಾರಿಯಾಗಿದ್ದು, ಇನ್ನೂ 5,095 ಕಚೇರಿಗಳಲ್ಲಿ ಅನುಷ್ಠಾನ ಆಗಬೇಕಿದೆ. 15,746 ತಾಲೂಕು ಮಟ್ಟದ ಕಚೇರಿಗಳ ಪೈಕಿ 1,425 ಕಚೇರಿಗಳಲ್ಲಿ ಅನುಷ್ಠಾನಗೊಂಡಿದ್ದು, ಬರೋಬ್ಬರಿ 14,321 ಕಚೇರಿಗಳಲ್ಲಿ ಅನುಷ್ಠಾನ ಆಗಿಲ್ಲ. 270 ಸ್ವಾಯತ್ತ ಸಂಸ್ಥೆಗಳ ಕಚೇರಿ ಪೈಕಿ 90ರಲ್ಲಿ ಮಾತ್ರ ಜಾರಿಯಲ್ಲಿದ್ದು, 174 ಕಚೇರಿಯಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಂಡಿಲ್ಲ. ಅದೇ ರೀತಿ 862 ಜಿಲ್ಲಾ ಮಟ್ಟದ ನಿಗಮ-ಮಂಡಳಿ ಕಚೇರಿಗಳ ಪೈಕಿ 68ರಲ್ಲಿ ಮಾತ್ರ ಇ-ಆಫೀಸ್ ಅಳವಡಿಸಿಕೊಂಡಿದ್ದು, ಇನ್ನೂ 749 ಕಚೇರಿಗಳಲ್ಲಿ ಬಾಕಿ ಇದೆ. ತುರ್ತಾಗಿ ಇ-ಆಫೀಸ್ ತಂತ್ರಾಂಶ ಅನುಷ್ಠಾನಗೊಳಿಸಿ, ಕಡ್ಡಾಯವಾಗಿ ಕಡತ ನಿರ್ವಹಣೆ ಪ್ರಕ್ರಿಯೆಯನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿ, ಸಿಬಂದಿಗೆ ಸೂಚಿಸಬೇಕೆಂದು ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.