87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ
ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಯಾಗದಂತೆ ಸಂಚು: ಗೊ.ರು. ಚನ್ನಬಸಪ್ಪ...ಸಮ್ಮೇಳನದಲ್ಲಿ ಏನೇನಾಯಿತು?
Team Udayavani, Dec 21, 2024, 6:00 AM IST
ಮಂಡ್ಯದಲ್ಲಿ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಗುರುವಾರ ಉದ್ಘಾಟಿಸಿದರು.
ಮಂಡ್ಯ: ಹಿಂದಿ ಹೇರಿಕೆ ವಿರುದ್ಧ ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು. ಚನ್ನ ಬಸಪ್ಪ ಗುಡುಗಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯದಲ್ಲಿ ವಿಧ್ಯುಕ್ತ ಚಾಲನೆ ನೀಡಿ, “ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ’ ಎಂದರು. “ಹಿಂದಿಯೇ ನಮ್ಮ ರಾಷ್ಟ್ರಭಾಷೆ ಎಂದು ಬಿಂಬಿಸುವ ಹುನ್ನಾರ ನಡೆದಿದೆ. ಇದಕ್ಕೆ ಕನ್ನಡಿಗರು ಪ್ರತಿರೋಧ ತೋರಿದರೆ ತಪ್ಪಲ್ಲ. ಸ್ಪರ್ಧಾ ತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ತ್ಯ ನೀಡ ಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಹಾಗಾಗಿ ಸರಕಾರ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸ ಬೇಕು’ ಎಂದರು.
ಸಮ್ಮೇಳನದಲ್ಲಿ ಏನೇನಾಯಿತು?
ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಮೆರವಣಿಗೆ
ಗಮನ ಸೆಳೆದ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳು
ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷ ಗೊರುಚ, ಸಿಎಂರಿಂದ ಚಾಲನೆ
ನಾಡು ನುಡಿಗೆ ಶ್ರಮಿಸಿದ 45 ಸಾಧಕರಿಗೆ ಸಮ್ಮೇಳನದಲ್ಲಿ ಸಮ್ಮಾನ
ವಿಚಾರಗೋಷ್ಠಿಗಳು, ಕವಿಗೋಷ್ಠಿಗಳಲ್ಲಿ ವಿಚಾರ ಪ್ರಚೋದನೆ
ಇನ್ಮುಂದೆ ಕನ್ನಡದಲ್ಲೇ ಮಸೂದೆ : ಸಿದ್ದರಾಮಯ್ಯ
ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜ ಮಹರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ (ಮಂಡ್ಯ): ಇನ್ನು ಮುಂದೆ ನಮ್ಮ ಸಚಿವಾಲಯದ ಎಲ್ಲ ಟಿಪ್ಪಣಿ, ವಿಧಾನಸೌಧದಲ್ಲಿ ಮುಂದೆ ಬರುವ ಎಲ್ಲ ಮಸೂದೆಗಳು ಕನ್ನಡದಲ್ಲಿ ಇರುವಂತೆ ನೋಡಿ ಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ನಮ್ಮ ಮಾತೃಭಾಷೆ. ಇದು ವ್ಯವಹಾರಿಕ ಭಾಷೆಯಾಗಬೇಕು, ಕನ್ನಡದ ಮೂಲಕ ಎಲ್ಲ ಜ್ಞಾನ, ತಂತ್ರಜ್ಞಾನ ನಮಗೆ ಸಿಗುವಂ ತಾ ಗಬೇಕು. ಓದು, ಬರಹ, ಭಾಷೆ ಬರವಣಿಗೆ ಎಲ್ಲವೂ ಪರಿಕೀಯವಾದರೆ ನಮ್ಮ ಮಾತೃಭಾಷೆಗೆ ಅಪಾಯ ತಪ್ಪಿದ್ದಲ್ಲ, ಯಾವುದೇ ಭಾಷೆಯ ಅಳಿವು, ಆ ಭಾಷಾ ಸಮುದಾಯದ ಅಳಿವು ಆಗಿರುತ್ತದೆ. ಭಾಷೆಯನ್ನು ಬಳಸಿದಾಗ ಮಾತ್ರ ಅದು ಬೆಳೆಯುತ್ತದೆ. ಕನ್ನಡತನವನ್ನು ಉಳಿಸಿಕೊಳ್ಳುವ ಅಗತ್ಯತೆ ಹಿಂದಿಗಿಂತ ಹೆಚ್ಚಿದೆ. ನುಡಿ ಬಿಟ್ಟರೆ ಜೀವ ಬಿಟ್ಟಂತೆ, ಭಾಷೆಗೇಡಿ ದೇಶದ್ರೋಹಿಯೂ ಆಗುತ್ತಾನೆ ಎಂಬ ರಾಷ್ಟ್ರ ಕವಿ ಕುವೆಂಪು ಅವರ ಮಾತಿನಂತೆ ನಮ್ಮ ಹೃದಯದ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಲು ನಾವೆಲ್ಲ ಸಂಕಲ್ಪ ಮಾಡಬೇಕಿದೆ. ಕನ್ನಡದ ಅಸ್ಮಿತೆಗೆ ಉಂಟಾಗಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಸಮ್ಮೇಳನವು ದಾರಿಯಾಗಲಿ ಎಂದರು.
ಗೊ.ರು.ಚ ಕೊಡುಗೆ ಅಪಾರ: ಗೊ.ರು.ಚನ್ನಬಸಪ್ಪ ಅಧ್ಯಕ್ಷರಾಗಿರುವುದು ಸಮ್ಮೇಳನದ ಮೆರುಗು ಹೆಚ್ಚಿಸಿದೆ. ಭೂದಾನ ಚಳವಳಿ, ಸಾಮೂ ಹಿಕ ಬೇಸಾಯ, ಜಾನಪದ ಸಾಹಿತ್ಯ ಸಮ್ಮೇಳನ ಹೀಗೆ ಇವರ ಕೊಡುಗೆ ಅಪಾರ ಎಂದರು.
ಮಂಡ್ಯ ಕನ್ನಡದ ಜೀವಂತಿಕೆ ಪ್ರತೀಕ: ಕಾವೇರಿ ಕಣಿವೆ ಎನಿಸಿರುವ ಮಂಡ್ಯ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ನೆಲ. ಕನ್ನಡದ ಜೀವಂತಿಕೆಯ ಪ್ರತೀಕವಾದ ಭತ್ತದ ಕಣಜ ಸಕ್ಕರೆಯ ನೆಲ. ಇದು ಜಾತ್ಯತೀತ ನೆಲ. ಕೆಲ ದ್ವೇಷವಾದಿ ಮನಸ್ಥಿಗಳು ವಿಷ ಬೆಳೆಯುವ ಸಂಸ್ಕೃತಿಯನ್ನು ಇಲ್ಲಿ ಬಿತ್ತಲು ಮುಂದಾದರು. ಆದರೆ, ನೀವದಕ್ಕೆ ಪ್ರೋತ್ಸಾಹಿಸಲಿಲ್ಲ ಎಂದು ಶ್ಲಾ ಸಿದರು.
ಶಿಕ್ಷಣಕ್ಕೆ ಸಿಎಂ 3 “ಎಚ್’ ಸೂತ್ರ
ಕನ್ನಡ ಉಳಿಯ ಬೇಕಾದರೆ ಸಮಗ್ರ ಶಿಕ್ಷಣ ಪದ್ಧತಿ ಬದಲಾಗಬೇಕಿದೆ. ನಮ್ಮ ಹೃದಯ ಮತ್ತು ಮನಸ್ಸನ್ನು ಕ್ರಿಯಾತ್ಮಕಗೊಳಿಸುವ ಪದ್ಧತಿ ನಮಗೆ ಬೇಕು. ಇದಕ್ಕಾಗಿ ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂಬ 3 “ಎಚ್’ ಸೂತ್ರಬೇಕು ಎಂದು ಸಿಎಂ ಪ್ರತಿಪಾದಿಸಿದರು.
ಒಒಡಿ ಹಾಜರಾತಿಗಾಗಿ ಪರದಾಟ
ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಒಒಡಿ ಸಹಿತ ರಜೆ ನೀಡಲಾಗಿತ್ತು. ಕಡ್ಡಾಯವಾಗಿ ಭಾಗವಹಿಸಿ ಹಾಜರಾತಿ ಪಡೆಯಬೇಕು ಎಂದು ಸೂಚಿಸಲಾಗಿತ್ತು. ಆದರೆ, ಹಾಜರಾತಿ ಪಡೆಯಲು ಪರದಾಡಬೇಕಾಯಿತು. ಸಮ್ಮೇಳನದ ಸಹಾಯವಾಣಿ ಬಳಿ ಅಲೆದು ನೌಕರರು ಸುಸ್ತಾದರು. ಹಾಜರಾತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೆಸರೇಳದ ನೌಕರರೊಬ್ಬರು ಅಳಲು ತೋಡಿಕೊಂಡರು.
ತಮಿಳು ಚಿತ್ರ ಪ್ರದರ್ಶನ: ಆಕ್ರೋಶ
ಮಂಡ್ಯದಲ್ಲಿ 30 ವರ್ಷಗಳ ನಂತರ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂಭ್ರಮಕ್ಕೆ ಕಾರಣವಾ ಗಿದ್ದು, ಇಡೀ ನಗರ ಸಂಪೂರ್ಣ ಕನ್ನಡಮಯ ವಾಗಿದೆ. ಆದರೆ, ಮಂಡ್ಯ ಕೆಲವು ಚಿತ್ರಮಂದಿರ ಗಳಲ್ಲಿ ತಮಿಳು ಸಿನಿಮಾ ವಿಡುತಲೈ ಪ್ರದರ್ಶನ ವಾಗುತ್ತಿತ್ತು. ಇದಕ್ಕೆ ಕನ್ನಡಾಭಿಮಾನಿಗಳು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಕೊರತೆಯಿಂದ ಶೌಚಕ್ಕೆ ಗದ್ದೆ ಬಯಲು
ಸಮ್ಮೇಳನದಲ್ಲಿ ಯಾವ ಕಡೆ ಶೌಚಾಲಯವಿದೆ ಎಂಬ ಅರಿವಿಲ್ಲದ ಪರಿಣಾಮ ಸಾರ್ವಜನಿ ಕರು ಸುತ್ತಮುತ್ತ ಗದ್ದೆ, ಬಯಲು ಪ್ರದೇಶ ವನ್ನೇ ಶೌಚಾಲಯವನ್ನಾಗಿ ಬಳಸುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲವು ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
ದಳಪತಿಗಳು, ಬಿಜೆಪಿ ನಾಯಕರು ಗೈರು
ಸಮ್ಮೇಳನಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಾಯ ಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸ್ವಾಗತ ಸಮಿತಿಯಲ್ಲಿ ಎಲ್ಲ ಮೈತ್ರಿ ಪಕ್ಷಗಳ ಮಾಜಿ ಶಾಸಕರು, ಮಾಜಿ ಸಚಿವರು ಇದ್ದರೂ ಯಾರೂ ಸಹ ಸಮ್ಮೇಳನದತ್ತ ತಿರುಗಿಯೂ ನೋಡಿಲ್ಲ.
ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.