ಮಂಡ್ಯ ಲೋಕಸಭಾ ಬೈ ಎಲೆಕ್ಷನ್;ಭದ್ರ ಕೋಟೆಯಲ್ಲೇ ಜೆಡಿಎಸ್ಗೆ ತಲೆನೋವು
Team Udayavani, Oct 8, 2018, 12:28 PM IST
ಮಂಡ್ಯ: ಲೋಕಸಭಾ ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು ಭದ್ರಕೋಟೆಯಲ್ಲೇ ಜೆಡಿಎಸ್ಗೆ ಅಭ್ಯರ್ಥಿ ಆಯ್ಕೆ ಎನ್ನುವುದು ತಲೆನೋವಾಗಿ ಪರಿಣಮಿಸಿದೆ ಮಾತ್ರವಲ್ಲದೆ ಅಸಮಾಧಾನವೂ ಬಹಿರಂಗಗೊಳ್ಳುತ್ತಿದೆ.
ಭಾರತೀಯ ರೈಲ್ವೇ ಸೇವೆಯ(IRS) ಉನ್ನತ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಎಸ್ನಲ್ಲಿ ಸಕ್ರಿಯವಾಗಿರುವ ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಾಯಕರು ಮುಂದಾಗಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಗೂ ಅವರನ್ನೆ ಅಭ್ಯರ್ಥಿಯನ್ನಾಗಿಸಲು ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ಈ ವಿದ್ಯಮಾನ ಹಿರಿಯ ನಾಯಕ ಎಲ್.ಆರ್.ಶಿವರಾಮೇಗೌಡ ಅವರ ತಲೆಕೆಡಿಸಿದ್ದು ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಶಿವರಾಮೇಗೌಡರ ಅಸಮಾಧಾನಕ್ಕೆ ಸಾಕ್ಷಿಯಾಗಿ ಎಲ್.ಆರ್.ಶಿವರಾಮೇಗೌಡ ಎಂಬ ಫೇಸ್ಬುಕ್ ಪೇಜ್ನಲ್ಲಿ ”ಯಾರಿ ಸ್ವಾಮಿ, ಈ ಲಕ್ಷ್ಮಿ ಅಶ್ವಿನಿಗೌಡ ಅನ್ನುವರು ಎಷ್ಟು ವರ್ಷಾದಿಂದ ರಾಜಕೀಯದಲ್ಲಿ ಇದ್ದಾರೆ ?
ನಮ್ಮ ನಾಯಕರು ಶ್ರೀ ಸುಮಾರು 25ವರ್ಷಗಳಿಂದ ರಾಜಕೀಯ ಜೀವನವನ್ನು ನಡೆಸುತಿದ್ದಾರೆ. ನೆನ್ನೆ ಮೊನ್ನೆ ಬಂದೋರೆಲ್ಲ ಲೋಖಸಭಾ ಚುನಾವಣೆಗೆ ಟಿಕೆಟ್ ಬೇಕು ಅಂದ್ರೆ…ಹೆಂಗೆ ನೀವೇ ಹೇಳಿ…” ಎಂದು ಬರೆಯಲಾಗಿದೆ.
ಇನ್ನೊಂದು ಪೋಸ್ಟ್ನಲ್ಲಿ ”ಸುರೇಶ್ ಗೌಡರ ಗೆಲುವಿಗೆ ಶ್ರಮಿಸಿದ ಜನಮೆಚ್ಚಿದ ನಾಯಕ ಎಲ್.ಆರ್.ಶಿವರಾಮೇಗೌಡರಿಗೆ ಮಂಡ್ಯ ಲೋಕಸಭಾ ಟಿಕೆಟ್ ನೀಡಲೇಬೇಕು.ಜೈ ಜೆಡಿಎಸ್, ಜೈ ದೇವೇಗೌಡಾಜಿ , ಜೈ ಕುಮಾರಣ್ಣ ” ಎಂದು ಬರೆಯಲಾಗಿದೆ.
ಈ ಪೋಸ್ಟ್ಗಳನ್ನು ಶಿವರಾಮೇಗೌಡರ ಅಭಿಮಾನಿಗಳು ಮಾಡಿದ್ದಾರೆ ಎನ್ನಲಾಗಿದ್ದು, ಇದುವರೆಗೆ ಶಿವರಾಮೇಗೌಡ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಂಸದರಾಗಿದ್ದ ಪುಟ್ಟರಾಜು ಅವರು ಶಾಸಕರಾಗಿ ಆಯ್ಕೆಯಾಗಿದ್ದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.