Congress ನಲ್ಲಿ ಮುಖ್ಯಮಂತ್ರಿ ರೇಸ್ ಗೆ ಹಲವು ಮಂದಿ : ಹೆಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಬಂದಾಗಲೆಲ್ಲ ಬರ.... ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಡಬೇಡಿ ಅಂತ ದಿನವೂ ಜಾಗಟೆ ಹೊಡೆದೆ...
Team Udayavani, Jun 14, 2023, 2:51 PM IST
ರಾಮನಗರ : ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ರೇಸ್ ಗೆ ಹಲವು ಮಂದಿ ಇದ್ದಾರೆ.ಪರಮೇಶ್ವರ್ ರೇಸ್ ನಲ್ಲಿಲ್ಲವಾ” ಎಂದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಚನ್ನಪಟ್ಟಣದ ಎ.ವಿ.ಹಳ್ಳಿ ಗ್ರಾಮದಲ್ಲಿ ಬುಧವಾರ ಮಾತನಾಡಿದ ಮಾಜಿ ಸಿಎಂ, ಮೊನ್ನೆ ಸಿದ್ದರಾಮಯ್ಯ ಡಂಗುರ ಹೊಡೆದರು.ದಲಿತರ ಸಭೆ ಮಾಡಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು.ಆದರೆ ಪರಮೇಶ್ವರ್ ಅವರೇ ನಮ್ಮ ಪಕ್ಷದಲ್ಲಿ ದಲಿತ ಸಿಎಂ ಬಗ್ಗೆ ಧ್ವನಿ ಎತ್ತಿಲ್ಲ ಅಂದಿದ್ದಾರೆ.ನಾನು 2013ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾನೆ ಅಧ್ಯಕ್ಷ ಆಗಿದ್ದೆ.ಆಗ ನನ್ನ ಹೆಸರ ಯಾರೂ ಹೇಳಲಿಲ್ಲ ಅಂತ ಪರಮೇಶ್ವರ್ ಅವರೇ ಹೇಳಿದ್ದಾರೆ.ಈಗ ಅವರು ವಿಮರ್ಶೆ ಶುರು ಮಾಡಿದ್ದಾರೆ.ಅದರಿಂದ ಈ ಪಕ್ಷದಲ್ಲಿ ಜನತೆಯ ಸಮಸ್ಯೆಗಿಂತ ಹೆಚ್ಚಾಗಿ ಆಂತರಿಕ ಕಲಹ ಹೆಚ್ಚಿದೆ ಎಂದರು.
ರಾಜ್ಯದ ಜನತೆಗೆ ಕನ್ನಡಿಗರಿಗಾಗಿ ಕನ್ನಡಿಗನಿಗೆ ಅಧಿಕಾರ ಕೊಡಿ ಅಂತಾ ಕೇಳ್ಕೊಂಡೆ.ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಡಬೇಡಿ ಅಂತಾ ದಿನವೂ ಜಾಗಟೆ ಹೊಡೆದೆ.ಇವತ್ತು ಪ್ರತಿಯೊಂದಕ್ಕೂ ಅಲ್ಲಿಂದಲೇ ಡೈರೆಕ್ಷನ್ ಬರಬೇಕು. ಈಗ ಗ್ಯಾರಂಟಿಗಳ ಬಗ್ಗೆ ಅವರೇ ಬೆನ್ನುತಟ್ಟಿಕೊಳ್ತಿದ್ದಾರೆ. ಅದು ಏನೇನ್ ಆಗುತ್ತೋ ನೋಡೊಣ.ಅವರು ಏನು ಮಾತು ಕೊಟ್ಟಿದ್ದಾರೆ ಹಾಗೆ ನಡೆದುಕೊಳ್ಳಲಿ.ಅದೇನೋ ನುಡಿದಂತೆ ನಡೆದ ಸರ್ಕಾರ ಅಂತ ಹೇಳ್ತಿದ್ದಾರಲ್ಲ ಮಾಡಲಿ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಕುರಿತು ಪ್ರತಾಪ್ ಸಿಂಹ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ‘ಹಿಂದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತ ಹೇಳುತ್ತಿದ್ದರಲ್ಲ.ಇವತ್ತು ಪ್ರತಾಪ್ ಸಿಂಹ ಏನು ಹೇಳಿದ್ದಾರೆ.ಸತ್ಯ ಏನಿದೆ ಅಂತ ಬಿಜೆಪಿ-ಕಾಂಗ್ರೆಸ್ ನವರು ಹೇಳಬೇಕು.ಅರ್ಕಾವತಿ ಕರ್ಮಕಾಂಡದ ಬಗ್ಗೆ ಬೊಮ್ಮಾಯಿ ಯಾಕೆ ತನಿಖೆ ಮಾಡಲಿಲ್ಲ.ಮೂರು ವರ್ಷ ಇವರದ್ದೇ ಅಧಿಕಾರ ಇತ್ತಲ್ಲ.ಯಾಕೆ ಅವರನ್ನ ಕೊರಳು ಸೆರಗಲ್ಲಿ ಇಟ್ಕೊಂಡಿದ್ದಿರಿ.ಈಗ ಕಾಂಗ್ರೆಸ್ ನವರು ಹೇಳ್ತಾವ್ರಲ್ಲ, ಬಿಜೆಪಿ ಸರ್ಕಾರದ ಬಗ್ಗೆ ತನಿಖೆ ಅಂತ.ಬರೆದಿಟ್ಟುಕೊಳ್ಳಿ ಯಾವುದೇ ತನಿಖೆ ಆಗುವುದಿಲ್ಲ. ಯಾವ ತನಿಖೆಯಿಂದಲೂ ರಾಜ್ಯ ಲೂಟಿ ಮಾಡಿದವರಿಗೆ ಏನೂ ತೊಂದರೆ ಆಗಲ್ಲ.ಬಿಜೆಪಿ ಸರ್ಕಾರದಲ್ಲೂ ತನಿಖೆ ನಡೆದು ಎಲ್ಲಾ ಹಳ್ಳಹಿಡಿಯಿತು.ಯಾವುದಕ್ಕೂ ತಾರ್ಕಿಕ ಅಂತ್ಯ ಇಲ್ಲ.ಬಿಜೆಪಿ- ಕಾಂಗ್ರೆಸ್ ಹೊಂದಾಣಿಕೆ ಬಗ್ಗೆ ಪ್ರತಾಪ್ ಸಿಂಹ ಹೇಳಾಯ್ತು, ಸಿ.ಟಿ.ರವಿ ಹೇಳಾಯ್ತು”ಎಂದರು.
”ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೂ ರಾಜ್ಯದ ಜನತೆಗೂ ಸಂಬಂಧ ಇಲ್ಲ.ಸರ್ಕಾರದ ಅಧಿಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅಧಿಕಾರ ಇಲ್ಲ.ನಿನ್ನೆ ಅವರು ಸಭೆ ನಡೆಸುವ ಪೋಟೊ ಹೊರಬಂದಿದೆ.ಅವರ ಮಂತ್ರಿಗಳೇ ಅದನ್ನ ಹೊರಗೆ ಬಿಟ್ಟಿದ್ದಾರೆ.ಉಪಮುಖ್ಯಮಂತ್ರಿ ಎಷ್ಟು ಸುಳ್ಳು ಹೇಳ್ತಾರೆ ಅನ್ನೊದಕ್ಕೆ ಇದೇ ಸಾಕ್ಷಿ.ಅವರು ಹೇಳ್ತಾರೆ ಅದ್ಯಾವುದೋ ಶಾಂಗ್ರಿಲಾ ಹೋಟೆಲ್ ನಲ್ಲಿ ಇವರು ಇದ್ದರಂತೆ. ಇವರನ್ನ ಕರೆದುಕೊಂಡು ಹೋಗೋದಕ್ಕೆ ಅಧಿಕಾರಿಗಳು ಬಂದ್ರಂತೆ.!, ಯಾವುದೇ ಸಭೆ ಮಾಡಿಲ್ಲ ಅಂತ ಹೇಳ್ತಾವ್ರೆ.ಹಾಗಿದ್ರೆ ಆ ಟೇಬಲ್ ಮೇಲೆ ಕೂತಿದ್ದವರೆಲ್ಲಾ ಯಾರು. ಅಲ್ಲಿ ಸಭೆ ನಡೆಸಿ ತೆಗೆದುಕೊಂಡಿರುವ ನಡಾವಳಿ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ಬಂದಿದೆ.ನಾಡಿನ ಜನತೆಗೆ ಎಷ್ಟರ ಮಟ್ಟಿಗೆ ಮಂಕುಬೂದಿ ಎರಚಿದ್ದಾರೆ ಅಂತ ಗೊತ್ತಾಗ್ತಿದೆ.ಇವರಿಗೆ ಜನ ಮತ ಕೊಟ್ಟಿರೋದು ರಾಜ್ಯದ ಮಂತ್ರಿಗಳು ಕೆಲಸ ಮಾಡೋದಿಕ್ಕೋ.ಅಥವಾ ದೆಹಲಿ ಹೈಕಮಾಂಡ್ ನ ಗುಲಾಮಗಿರಿ ಮಾಡೋದಿಕ್ಕೋ.!, ಸುರ್ಜೆವಾಲಾ ಮೀಟಿಂಗ್ ಮಾಡಲು ಯಾರು ಪವರ್ ಕೊಟ್ಟಿದ್ದು.ಇದಕ್ಕೆ ಸರ್ಕಾರ ಲಘುವಾಗಿ ಉಡಾಫೆ ಉತ್ತರ ಕೊಡ್ತಿದ್ದಾರೆ.ಈ ಕೆಲಸ ಮಾಡೇ ಬಿಜೆಪಿಯವರು ಮನೆಗೆ ಹೋಗಿದ್ದು.ಇವರು ಬಂದು ಇನ್ನೂ 15ದಿನ ಆಗಿಲ್ಲ.ಯಾರೋ ನಿಮ್ಮ ಪ್ರತಿನಿಧಿ ವಸೂಲಿಗೆ ಬಂದಿರೋದು. ಜನ ಉದ್ದಾರ ಮಾಡೋದಿಕ್ಕೆ ಬಂದಿಲ್ಲ.ಈ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪತ್ತನ್ನ ಯಾವರೀತಿ ಲೂಟಿ ಮಾಡ್ತಿದ್ದಾರೆ ಗೊತ್ತಾಗ್ತಿದೆ.ಯಾವುದೇ ಸೂಚನೆ ಇದ್ರೆ ಕಾಂಗ್ರೆಸ್ ಕಚೇರಿ ಒಳಗೆ ಮಾಡ್ಕೊಳಿ.ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸೂಚನೆ ಕೊಡೋದಲ್ಲ.ಹಾಗಿದ್ರೆ ಅವರನ್ನೇ ಮುಖ್ಯಮಂತ್ರಿ ಮಾಡಿಕೊಳ್ಳಿ” ಎಂದು ಕಿಡಿ ಕಾರಿದರು.
ಮೋಡ ಬಿತ್ತನೆ ಕುರಿತು ಕೃಷಿ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ”ಮೋಡ ಬಿತ್ತನೆ ಮಾಡ್ತೀವಿ ಅಂತಾರೆ.ಮೋಡ ಬಿತ್ತನೆ ಹೆಸರಿನಲ್ಲಿ ಲೂಟಿ ಮಾಡುವ ಹುನ್ನಾರ.ಕಾಂಗ್ರೆಸ್ ಬಂದಾಗಲೆಲ್ಲ ಬರ ಅನ್ನೊದು ಮೊದಲಿನಿಂದಲೂ ಬಂದಿದೆ.ಜನರು ಅದನ್ನ ಎದುರಿಸಲು ಸಿದ್ದವಾಗಬೇಕು ಎಂದರು.
ಜಾತಿ ಗಣತಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ.ಜಾತಿ ಗಣತಿಯಲ್ಲಿ ಯಾವುದೇ ವಾಸ್ತವಾಂಶ ಇಲ್ಲ. ಅವತ್ತಿನ ಮುಖ್ಯಮಂತ್ರಿ ಆಗಿದ್ದವರು ಅದನ್ನ ಬರೆಸಿಕೊಂಡಿದ್ದರು. ಅವತ್ತಿನ ಸೆಕ್ರೆಟರಿ ಅದಕ್ಕೆ ಸಹಿ ಹಾಕಿರಲಿಲ್ಲ.ಯಾಕೆ ಸಹಿ ಹಾಕಿರಲಿಲ್ಲ.ಅದು ಯಾವುದೇ ರೀತಿಯ ವಾಸ್ತವಾಂಶದ ವರದಿ ಅಲ್ಲ.ಯಾರನ್ನೊ ಸಂತೋಷ ಪಡಿಸಲು ಸಿದ್ದಪಡಿಸಿರೋ ವರದಿ.ಅದಕ್ಕೆ ಹೇಳಿರೋದು ಗುಮ್ಮ ಇದ್ರೆ ಬಿಡಿ ಅಂತ ಎಂದರು.
ದಶಪಥ ಹೆದ್ದಾರಿ ಟೋಲ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಅದಕ್ಕೆ ಎಚ್ಚರಿಕೆ ವಹಿಸಿ ಅಂದಿದ್ದೆ.ಒಂದು ಕಡೆ ಬೆಲೆಏರಿಕೆ ಬಗ್ಗೆ ಚರ್ಚೆ ಆಗ್ತಿದೆ. ಇನ್ನೊಂದೆಡೆ ನಾವು ಮಾಡಲಿಲ್ಲ ನಾವು ಮಾಡಲಿಲ್ಲ ಅಂತ ಹೇಳ್ಕೊತ್ತಿದ್ದಾರೆ.ವಿದ್ಯುತ್ ದರ ಏರಿಕೆ ಬಗ್ಗೆ ಒಬ್ಬರಮೇಲೊಬ್ಬರು ಆರೋಪ ಮಾಡ್ತಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಿ ಯಾವ ಜ್ಯೋತಿ ಕಾರ್ಯಕ್ರಮ ಕೊಡ್ತಾರೆ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.