800 ರೂ.ನಲ್ಲಿ ಮದುವೆಯಾದ್ವಿ
Team Udayavani, Feb 3, 2019, 1:06 AM IST
ಮೈಸೂರು: ‘ನಾನು ಮತ್ತು ನಾರಾಯಣ ಮೂರ್ತಿ ಇಬ್ಬರೂ ನಮ್ಮ ಮದುವೆ ಸರಳವಾಗಿರಬೇಕೆಂದು ನಿರ್ಧರಿಸಿದ್ದೆವು. ನಮ್ಮ ಮದುವೆಗೆ ಆದ ಒಟ್ಟು ಖರ್ಚು 800 ರೂಪಾಯಿ’ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಮತ್ತು ನಾರಾಯಣ ಮೂರ್ತಿ ಇಬ್ಬರೂ ನಮ್ಮ ಮದುವೆ ಸರಳವಾಗಿರಬೇಕೆಂದು ನಿರ್ಧರಿಸಿದ್ದೇವು. 1978ರ ಫೆ.10ರಂದು ನಮ್ಮಿಬ್ಬರ ಸೋದರ ಸಂಬಂಧಿಗಳನ್ನು ಮಾತ್ರ ಕರೆದು, ಬಾಡಿಗೆ ಮನೆಯ ಕೋಣೆಯಲ್ಲೇ, ನಮಗೆ ಗೊತ್ತಿದ್ದ ಮಂತ್ರವನ್ನು ನಾವೇ ಹೇಳಿಕೊಂಡು ಮದುವೆಯಾದೆವು. ನಮ್ಮ ಮದುವೆಗೆ ಆದ ಒಟ್ಟು ಖರ್ಚು 800 ರೂಪಾಯಿ. ಅದರಲ್ಲಿ 400 ರೂಪಾಯಿ ನನ್ನದು, ಇನ್ನು 400 ರೂಪಾಯಿ ನಾರಾಯಣ ಮೂರ್ತಿಯವರದ್ದು. ಕರಿಮಣಿ ಸರದಲ್ಲೇ ನನ್ನ ತಾಳಿ ಇತ್ತು. ಇಳಕಲ್ ಸೀರೆಯಷ್ಟೇ ನನ್ನ ಮದುವೆಗೆ ಖರೀದಿಸಿದ್ದು. ಹೆಚ್ಚಿನ ಜನರನ್ನೂ ಕರೆಯಲಿಲ್ಲ. ಹೀಗಾಗಿ ಉಡುಗೊರೆಯೂ ಬರಲಿಲ್ಲ. ಇದನ್ನು ಕಂಡ ಕೆಲವರು ನಮ್ಮನ್ನು ಜುಗ್ಗ ಎಂದರು. ಆದರೂ ನಾವು ಎದೆ ಗುಂದಲಿಲ್ಲ’ ಎಂದು ಸ್ಮರಿಸಿದರು. ಅಲ್ಲದೆ, ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಾಲಗಾರರಾಗುತ್ತಾರೆ. ಇದರ ಬದಲು ಸರಳ ಮದುವೆ ಮಾಡಿ. ಮದುವೆ ನಂತರ ಬದುಕು ಕಟ್ಟಿಕೊಳ್ಳಲು ಉಪಯೋಗಿಸಿ ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.