ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ಬೆಂಗಳೂರು, ಮೈಸೂರು ಅತ್ಯಂತ ಕಳಪೆ

Team Udayavani, Jan 24, 2022, 7:05 AM IST

ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ಮಾಸ್ಕ್ ಧಾರಣೆ ಬಗ್ಗೆ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದೊಂದಿಗೆ “ಉದಯವಾಣಿ’ ವಿವಿಧ ಮಹಾನಗರಗಳಲ್ಲಿ ಕೈಗೊಂಡ ಮೆಗಾ ಸರ್ವೆಯಲ್ಲಿ ಹಲವು ಆತಂಕಕಾರಿ ಮಾಹಿತಿ ಹೊರಬಿದ್ದಿದ್ದು, ಕರಾವಳಿ ಸುದ್ದಿ ಸಮಾಧಾನ ತಂದಿದೆ.

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಬ್ರಹ್ಮಾಸ್ತ್ರ ಎಂದು ಜಗತ್ತಿನ ತಜ್ಞರು ಮತ್ತೆ ಮತ್ತೆ ಸಾರುತ್ತಿ ದ್ದರೂ ರಾಜ್ಯದಲ್ಲಿ ನಿರ್ಲಕ್ಷ್ಯ ಇರುವುದು “ಉದಯವಾಣಿ’ ಕೈಗೊಂಡ ಸಹಾ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಮಾಸ್ಕ್  ಧಾರಣೆ ಯಲ್ಲಿ ಕರುನಾಡು ಜಸ್ಟ್‌ಪಾಸ್‌!

ಪ್ರಸ್ತುತ ರಾಜ್ಯದ ಶೇ.35.45ರಷ್ಟು ಜನರಷ್ಟೇ ಮಾಸ್ಕ್ ಧರಿಸುತ್ತಿದ್ದಾರೆ. “ಉದಯವಾಣಿ’ಯು ರಾಜ್ಯದ 12 ಮಹಾ ನಗರಗಳ 120ಕ್ಕೂ ಅಧಿಕ ತಾಣಗಳಲ್ಲಿ ಸಮೀಕ್ಷೆ ನಡೆಸಿದ್ದು, 7,128 ಮಂದಿ ಭಾಗಿಯಾಗಿದ್ದರು. 105 ವಿದ್ಯಾರ್ಥಿಗಳ ತಂಡ ಇಡೀ ದಿನ ಸಾರ್ವಜನಿಕ ಪ್ರದೇಶಗಳಲ್ಲಿದ್ದು ಈ ಸರ್ವೆ ಕೈಗೊಂಡಿದ್ದರು.

ಸರ್ವೆಯಲ್ಲಿ ಕಂಡಿದ್ದೇನು?
ಕೊರೊನಾ ನಿಯಮ ಉಲ್ಲಂ  ಸಿದ ಮಹಾ ನಗರ ಪೈಕಿ ಬೆಂಗಳೂರು ಮುಂಚೂಣಿ. ಇಲ್ಲಿ ಮಾಸ್ಕ್ ಧರಿಸಿದವರು ಶೇ.18! ಅನಂತರದ ಸ್ಥಾನಗಳನ್ನು ಮೈಸೂರು (ಶೇ.29) ಮತ್ತು ಬಳ್ಳಾರಿ (ಶೇ.30) ಪಡೆದಿವೆ. ಮಾಸ್ಕ್ಗೆ ಹೆಚ್ಚು ಮರ್ಯಾದೆ ಕೊಟ್ಟಿದ್ದು ಮಲೆನಾಡು ಮತ್ತು ಕರಾವಳಿ ಭಾಗ. ಪರಿಪೂರ್ಣ ಮಾಸ್ಕ್ಧಾರಣೆ ಪೈಕಿ ಶಿವಮೊಗ್ಗ ಶೇ.48.57 ಅಂಕಗಳಿಂದ ಪ್ರಥಮ, ಉಡುಪಿ (ಶೇ.43) ದ್ವಿತೀಯ, ಮಂಗ ಳೂರು (ಶೇ.40) ತೃತೀಯ ಸ್ಥಾನದಲ್ಲಿದೆ.

ದಂಡನಾಯಕ ನಾನೇ…
ಹುಬ್ಬಳ್ಳಿಯ ಜನಸಂದಣಿ ತಾಣಗಳಲ್ಲಿ ದಂಡ ತೆತ್ತವರ ಸಂಖ್ಯೆ ಹೆಚ್ಚಿತ್ತು. ಮಾಸ್ಕ್ ಧರಿಸದವರಿಂದ ಇಲ್ಲಿ ನಿತ್ಯ ಸರಾಸರಿ 50 ಸಾ. ರೂ. ದಂಡ ಸಂಗ್ರಹಿಸ ಲಾ ಗುತ್ತಿತ್ತು. ಉಡುಪಿ, ಮಂಗಳೂರಿನ ವಿವಿಧೆಡೆ ದಂಡ ವಿಧಿಸುವ ಸಿಬಂದಿ ಎದುರೇ ಕೋವಿಡ್‌ ನಿಯಮಗಳು ಉಲ್ಲಂಘನೆಯಾಗುತ್ತಿದ್ದವು.

ಸುಶಿಕ್ಷಿತರಿಂದಲೇ ನಿರ್ಲಕ್ಷ್ಯ
ವಿಚಾರವಂತರ ನೆಲ ಎನ್ನಿಸಿಕೊಂಡ ಮೈಸೂರು, “ವಿದ್ಯಾಕಾಶಿ’ ಗರಿ ಮುಡಿದ ಧಾರವಾಡದಲ್ಲೂ ಮಾಸ್ಕ್ ಇಲ್ಲದ ಮುಖಗಳೇ ಹೆಚ್ಚು ಕಾಣುತ್ತಿದ್ದವು. ಕಲಿತವರು, ಯುವಕರು ಹೆಚ್ಚಿರುವ ಕೆಲವು ಕಾಲೇಜು ಆವರಣಗಳಲ್ಲಿ ಮಾಸ್ಕ್ ಸಂಸ್ಕೃತಿಯೇ ನಾಪತ್ತೆ ಆಗಿತ್ತು. ಕೊರೊನಾ ಮಾರ್ಗಸೂಚಿ ಪಾಲಿಸಿ ಆದರ್ಶವಾಗಬೇಕಿದ್ದ ಅಧಿಕಾರಿಗಳೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದ ದೃಶ್ಯ ಎಲ್ಲೆಡೆ ಇತ್ತು.

ಇದೇನು ಭಂಡತನ!
ಸಮೀಕ್ಷೆಯಲ್ಲಿ ಅಸಹಜ ಸಂಗತಿಗಳೇ ರಾರಾಜಿಸಿದ್ದವು. ವಿಜಯಪುರ ಸಹಿತ ಹಲವೆಡೆ ಮಾಸ್ಕ್ನ್ನು ಗಲ್ಲ ಮತ್ತು ಕೊರಳಲ್ಲಿ ಧರಿಸಿಕೊಂಡದ್ದು ಹೆಚ್ಚಾಗಿ ಕಂಡು ಬಂತು. ಇಡೀ ರಾಜ್ಯದಲ್ಲಿ ಅರೆಬರೆ ಮಾಸ್ಕ್ನ ಟ್ರೆಂಡ್‌ ಶೇ.30.34ರಷ್ಟಿದೆ. ಶಿವಮೊಗ್ಗದ ಜನಸಂದಣಿ ಪ್ರದೇಶಗಳಲ್ಲಿ ಕೆಲವರ ಅಂಗಿ- ಪ್ಯಾಂಟ್‌ ಜೇಬಿನೊಳ ಗಿಂದ ಮಾಸ್ಕ್ ಇಣುಕುತ್ತಿತ್ತು. “ಮಾಸ್ಕ್ ಹಾಕ್ಕೊಳಿÅà’ ಎಂದು ಗದರಿಸುತ್ತಿದ್ದ ತುಮಕೂರಿನ ಪೊಲೀಸ್‌ ಸಿಬಂದಿಯೇ ಅರೆಬರೆ ಮಾಸ್ಕ್ನಲ್ಲಿದ್ದರು! ಕಲಬುರಗಿ, ಮಂಗಳೂರಿನ ಕೆಲವೆಡೆ ಸೀನುವಾಗ ಮಾಸ್ಕ್ ತೆಗೆಯುತ್ತಿದ್ದರು!

ಉದಯವಾಣಿ ಕಾಳಜಿ
1. ಸರಕಾರ ನಿಯಮ ಸಡಿಲಗೊಳಿಸುವುದು ಕೇವಲ ಆರ್ಥಿಕ ಚಟುವಟಿಕೆಯ ಉತ್ತೇಜನ ಕ್ಕಷ್ಟೇ. ಕೋವಿಡ್‌ ನಿಯಮ ಉಲ್ಲಂಘನೆಗಲ್ಲ.
2.ಕೊರೊನಾ ಅಲೆ ತಗ್ಗುವವರೆಗೂ ಮಾಸ್ಕ್ ಧರಿಸುವುದು ನಮಗೇ ಕ್ಷೇಮ.
3.ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಧರಿ ಸಿದರಷ್ಟೇ ಪ್ರಯೋ ಜನ.
4.ಜನದಟ್ಟಣೆ ಇರುವ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮುಖ್ಯ.
5. “ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗದಿರಲಿ’ ಎಂಬ ಕಾಳಜಿ ನಮ್ಮೊಳಗಿರಲಿ.

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.