ಮಾತಾ ಮಾಣಿಕೇಶ್ವರಿ ಅಂತ್ಯಸಂಸ್ಕಾರ ಇಂದು
Team Udayavani, Mar 9, 2020, 3:04 AM IST
ಸೇಡಂ: ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದಲ್ಲಿ ಶನಿವಾರ ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಜರುಗಲಿದ್ದು, ದರ್ಶನ ಪಡೆಯಲು ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಲೇ ಜಾಗೃತ ಗೊಂಡ ಪೊಲೀಸ್ ಇಲಾಖೆ, ಭದ್ರತೆಗೆ ಸುಮಾರು 1,500 ಸಿಬ್ಬಂದಿಯನ್ನು ನೇಮಿಸಿದೆ. ಮಾಣಿಕ್ಯಗಿರಿಯಲ್ಲೀಗ ಶಿವನಾಮ ಸ್ಮರಣೆ, ಜಪ-ತಪ, ಆರಾಧನೆ ನಡೆಯುತ್ತಿದ್ದು, ಅಹಿಂಸೆಯೇ ಪರಮ ಧರ್ಮ ಎಂದು ಸಾರಿ, ಸಾರಿ ಹೇಳಿದ ಮಾತಾ ಮಾಣಿಕೇಶ್ವರಿ ಅಮ್ಮನವರನ್ನು ಕಂಡು ಭಕ್ತರು ದುಃಖತಪ್ತರಾಗಿದ್ದಾರೆ.
ಮಂಗಳವಾರ ನಡೆಸಲು ಉದ್ದೇಶಿಸಲಾಗಿದ್ದ ಅಂತ್ಯಸಂಸ್ಕಾರವನ್ನು ಸೋಮವಾರ ಮಧ್ಯಾಹ್ನ 3 ಗಂಟೆಗೆ ಯಾನಾಗುಂದಿಯ ಅಮ್ಮನವರು ಸೂಚಿತ ಗುಹೆಯ ಹೊರಭಾಗದ ದೇವಾಲಯದಲ್ಲಿ ಅದ್ವೆ„ತ ಸಿದ್ಧಾಂತದಡಿ ಸಕಲ ವಿಧಿವಿಧಾನಗಳ ಮೂಲಕ ಆಶ್ರಮದ 108 ಶಾಖೆಗಳ ಮುಖ್ಯ ಆಚಾರ್ಯರ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್‌ನ ಸಿದ್ರಾಮಪ್ಪ ಸಣ್ಣೂರು ತಿಳಿಸಿದ್ದಾರೆ.
ಉತ್ತರಾಧಿಕಾರಿ ನೇಮಕ ಇಲ್ಲ: ಮೂಲಗಳ ಪ್ರಕಾರ ಅಮ್ಮನವರ ಸಮಾಧಿ ಮಂದಿರವೇ ಭಕ್ತ ಸಮೂಹಕ್ಕೆ ಏಕಮೇವ ದ್ವಿತೀಯ ಎನ್ನಲಾಗಿದೆ. ಶ್ರೀಶೈಲದಲ್ಲಿ ನೆಲೆಸಿರುವ ಮಲ್ಲಿಕಾರ್ಜುನಸ್ವಾಮಿ ಆರಾಧನೆಯಲ್ಲೇ ತಮ್ಮ ಇಡೀ ಜೀವನ ಸವೆಸಿದ ಮಾತಾ ಮಾಣಿಕೇಶ್ವರಿ ನೆಲೆಸಿದ ಕ್ಷೇತ್ರ ಎರಡನೇ ಶ್ರೀಶೈಲವಾಗಲಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಉತ್ತರಾ ಧಿಕಾರಿ ನೇಮಕ ಇಲ್ಲ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಉಮೇಶ ಜಾಧವ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಮಾತೆಯ ಅಂತಿಮ ದರ್ಶನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.