ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ
Team Udayavani, Jan 24, 2018, 11:15 AM IST
ಬೆಂಗಳೂರು: ಮ್ಯಾಟ್ರಿಮೋನಿಯಾ ವೆಬ್ಸೈಟ್ವೊಂದರಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬರು ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ವರದಿಯಾಗಿದೆ.
ಧನಂಜಯ್ ಎಂಬುವವರು ವಂಚನೆಗೆ ಒಳಗಾದ ವ್ಯಕ್ತಿ. ಆವರು ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ರಿಜಿಸ್ಟ್ರರ್ ಮಾಡಿಕೊಂಡಿದ್ದರು. ಆದರಲ್ಲಿ ಶಿಲ್ಪಾ ಎಂಬ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೇಮಾಂಕುರಕ್ಕೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು.
ಈ ಸಂದರ್ಭದಲ್ಲಿ ತನ್ನ ಸಹೋದರನ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಸ್ವಲ್ಪ ಹಣ ನೀಡಿ ಎಂದು ಧನಂಜಯ್ ಅವರಲ್ಲಿ ಶಿಲ್ಪಾ ಆಳಲನ್ನು ತೋಡಿಕೊಂಡಿದ್ದಾರೆ. ಇದನ್ನು ನಂಬಿದ ಧನಂಜಯ್ 3 ಲಕ್ಷ 45 ಸಾವಿರ ರೂಪಾಯಿ ಹಣವನ್ನು ಶಿಲ್ಪಾ ಅವರ ಖಾತೆಗೆ ವರ್ಗಾಹಿಸಿದ್ದಾರೆ.
ಇದಾದ ಕೆಲವು ದಿನಗಳ ನಂತರ ಶಿಲ್ಪಾ ಮೊಬೈಲ್ನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಧನಂಜಯ್ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ. ತಾನು ಮೋಸ ಹೋಗಿರುವುದು ಖಾತರಿಯಾಗಿದ್ದು ನ್ಯಾಯ ಕೊಡಿಸುವಂತೆ ಧನಂಜಯ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಾದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.